

ಪಡುಕೋಣೆ: ಎ.18 ರಂದು ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ 15 ರಿಂದ 17 ರ ತನಕ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಮೂರನೇ ತರಗತಿಯಿಂದ ಹತ್ತನೇ ತರಗತಿಯ ಅರವತ್ತು ಮಕ್ಕಳು ಭಾಗವಹಿಸಿದ್ದರು, ಸಂಪನ್ಮೂಲ ವ್ಯಕ್ತಿಯಾಗಿ ಬ್ರ,ಶೋನ್, ಬ್ರ.ಕೆವಿನ್, ಬ್ರ.ಅನಿಲ್ ಮಕ್ಕಳಿಗೆ ಪ್ರಾರ್ಥನೆ ಎಂದರೇನು? ಹೇಗೆ ಪ್ರಾರ್ಥಿಸಬೇಕು? ಅದರ ಮಹತ್ವ ಹಾಗೂ ಬೈಬಲ್ ಮಾಹಿತಿಯನ್ನು ವಿವಿಧ ಚಟುವಟಿಕೆಗಳ ಮೂಲಕ ಪರಿಚಯಿಸಿದರು , ಮಕ್ಕಳಲ್ಲಿ ಆತ್ಮವಿಶ್ವಾಸ, ಮುಂದಾಳತ್ವ, ಕ್ರಿಯಾಶೀಲತೆಯನ್ನು ಹೆಚ್ಚಿಸಿದರು.
ಶಿಬಿರದ ಮುಂದಾಳತ್ವವನ್ನು ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ವಹಿಸಿದ್ದರು. ಪಾಲನಾ ಮಂಡಳಿ ಉಪಾಧ್ಯಕ್ಷ ಕೆನಡಿ ಪಿರೇರಾ, ಕಾರ್ಯದರ್ಶಿ ಅಲೆಕ್ಸ್ ಆಂಟನಿ ಡಿಸೋಜ ಆಯೋಗಗಳ ಸಂಯೋಜಕ ವಿನ್ಸೆಂಟ್ ಡಿಸೋಜ, ಧರ್ಮ ಭಗಿನೀಯರು , ಶಿಕ್ಷಕರು ಸಹಕರಿಸಿದರು. ಒಟ್ಟಾರೆಯಾಗಿ ಮೂರು ದಿನಗಳ ಚೇಸಿಗೆ ಶಿಬಿರವು ಮಕ್ಕಳಿಗೆ ಪರಿಣಾಮವಾಗಿ ಮೂಡಿಬಂತು.








