ಮಂಗಳೂರು: 23ನೇ ಡಿಸೆಂಬರ್ 2022 ರಂದು ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದಿಂದ ಕ್ರಿಸ್‌ಮಸ್ ಸಂಭ್ರಮ ನಡೆಯಿತು. ಇಡೀ ಕಾಲೇಜಿನ ಕ್ರಿಸ್ಮಸ್ ಸಂಭ್ರಮದ ವಾತವರಣದಿಂದ ಕೂಡಿತ್ತು.
ವಿದ್ಯಾರ್ಥಿಗಳು ತರಗತಿಗಳನ್ನು ಅಲಂಕರಿಸಿದ್ದರು. ವರ್ಗವಾರು ಗೋದಲಿ ಸ್ಪರ್ಧೆಗಳು ನಡೆದವು. ಫೋಟೋ ಬೂತ್,ಮೆಹೆಂದಿ ಮಳಿಗೆಗಳು, ಆಟಗಳು, ಮುಖವರ್ಣಿಕೆ, ಬೇಯಿಸಿದ ಆಹಾರಗಳು ಮತ್ತು ಕರಕುಶಲ ವಸ್ತುಗಳ ಮಾರಾಟ ಕಾರ್ಯಕ್ರಮಗಳು ಆಕರ್ಷಣೆಗಳಿಂದ ಕೂಡಿದ್ದವು.
ಪ್ರತಿಭಾವಂತ ವಿದ್ಯಾರ್ಥಿಗಳು ಚತುರತೆಯನ್ನು ಪ್ರದರ್ಶಿಸುವ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ,ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು.
ಪ್ರಾರ್ಥನಾ ಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ಡಾ ಲವೀನಾ ಎಂ ನೊರೊನ್ಹಾ ಅವರು ಗೌರವಾನ್ವಿತ ಅತಿಥಿಯಾಗಿ ಮತ್ತು ತಮ್ಮ ಭಾಷಣದಲ್ಲಿ ಮಾತನಾಡಿ ’ಕ್ರಿಸ್‌ಮಸ್‌ನ ನಿಜವಾದ ಚೈತನ್ಯವು ದೇವರನ್ನು ಅನುಭವಿಸುವುದರಲ್ಲಿದೆ’ ಎಂದು ಅವರು ಹೇಳಿದರು. ಕ್ರಿಸ್ತನು ನಮ್ಮ ಹೃದಯದಲ್ಲಿ ಇರುವಿಕೆ ಅಗತ್ಯ ಅದುವೆ ನೀಜವಾದ ಕ್ರಿಸ್ಮಸ್’ ಎಂದು ಹೇಳಿದರು.
ಸಭಾಂಗಣವನ್ನು ಮಿನುಗುವ ದೀಪಗಳು, ನಕ್ಷತ್ರಗಳು ಮತ್ತು ಕ್ರಿಸ್‌ಮಸ್ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗಿತ್ತು. ಕ್ರಿಸ್‌ಮಸ್‌ನ ನಿಜವಾದ ಮನೋಭಾವವನ್ನು ಬಿಂಬಿಸುವ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಮತ್ತು ಕೆರೋಲ್ ಗೀತೆಗಳು ಸಿಬ್ಬಂದಿಯ ದ್ವಂದ್ವ ಧ್ವನಿ ಆಕರ್ಶಣೆಗೆ ಒಳಗಾಗಿತ್ತು.
ಕ್ರಿಸ್ಟಲ್ ಮಾರ್ಟಿಸ್ ಕಾರ್ಯಕ್ರಮವನ್ನು ಸಂಯೋಜಕರಾಗಿದ್ದರು. ಸೆರಾ ರೋಡ್ರಿಗಸ್ ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಈಡನ್ ರೆಬೆಕಾ ತನ್ನ ಧನ್ಯವಾದಗಳನ್ನು ಅರ್ಪಿಸಿದರು. ಪ್ರಾಂಶುಪಾಲೆ ಸಿಸ್ಟರ್ ನೊರಿನ್ ಡಿಸೋಜಾ, ಉಪ ಪ್ರಾಂಶುಪಾಲೆ ಸಿಸ್ಟರ್ ಜಾನೆಟ್ ಸಿಕ್ವೇರಾ, ಅಧ್ಯಾಪಕರು, ಶಿಕ್ಷಕೇತರ ಸಿಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.