ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ: ಇಲ್ಲಿನ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಜೇಸಿಐ ಭಾರತ ವಲಯ 15 ರ “ಉನ್ನತಿ” ವ್ಯವಹಾರ ಸಮ್ಮೇಳನದಲ್ಲಿ
ಜೇಸಿಐ ಪೂವ೯ ವಲಯ ಉಪಾಧ್ಯಕ್ಷೆ , ಖ್ಯಾತ ಪತ್ರಕರ್ತೆ ಅಕ್ಷತಾ ಗಿರೀಶ್ ರಿಗೆ ‘ಸಾಧನಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಅಕ್ಷತಾ, ಜೇಸಿ ಕುಂದಾಪುರದ ಪೂರ್ವ ಅಧ್ಯಕ್ಷರಾಗಿ, ಕೋಟೇಶ್ವರ ರೋಟರಿ ಕ್ಲಬ್ ನ ಆನ್ಸ್ ಘಟಕದ ಅಧ್ಯಕ್ಷರಾಗಿ, ಪ್ರಧಾನಮಂತ್ರಿ ಪ್ರಚಾರ – ಪ್ರಸಾರ ಮಹಿಳಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಬಹುಮುಖ ಸೇವೆ ಸಲ್ಲಿಸಿದವರು. ವಕ್ವಾಡಿಯ ಉದ್ಯಮಿ ಗಿರೀಶ್ ಐತಾಳರ ಧರ್ಮಪತ್ನಿಯಾದ ಈಕೆ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ, ತರಬೇತುದಾರರಾಗಿ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ
ಸಮ್ಮೇಳನದಲ್ಲಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆ ಸಿ ಸದಾನಂದ ನಾವಡ, ವಲಯ ಅಧ್ಯಕ್ಷೆ ಸೌಜನ್ಯ ಹೆಗ್ಡೆ, ಸಂಯೋಜಕ ಸಮದ್ ಖಾನ್ ಉಪಾಧ್ಯಕ್ಷ ಜೆಸಿ ಗಿರೀಶ್ ಎಸ್ ಪಿ, ಜೆಸಿ ದರ್ಶಿತ್ ಶೆಟ್ಟಿ , ಜೆಸಿ ಶರತ್ ಕುಮಾರ್, ಜೆಸಿಐ ಕುಂದಾಪುರದ ಅಧ್ಯಕ್ಷ ವಿಜಯ ನರಸಿಂಹ ಐತಾಳ್, ಪೂರ್ವಾಧ್ಯಕ್ಷ ವಿಷ್ಣು ಕೆ ಬಿ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.