ಅಜೆಕಾರ್ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆ

JANANUDI.COM NETWORK


ಅಜೆಕಾರ್, ಸೆ.8: ಅಜೆಕಾರ್ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚಿನಲ್ಲಿ ಮಾತೆ ಮೇರಿಯವರ ಜನ್ಮದಿನದ ಹಬ್ಬವನ್ನು ಧರ್ಮಕೇಂದ್ರವು ಒಂದು ಕುಟುಂಬದಂತೆ ಸಂತೋಷದಿಂದ ಆಚರಿಸಿದರು. ಈ ಹಬ್ಬದ. ಸಿದ್ಧತೆಗಾಗಿ ಮಕ್ಕಳು ಮತ್ತು ಪೋಷಕರು ಸತತ 9 ದಿನಗಳ ನೊವೆನಾ ಪ್ರಾರ್ಥನೆ ಮತ್ತು ಪವಿತ್ರ ಬಲಿದಾನದಲ್ಲಿ ಭಾಗವಹಿಸಿದರು. ಚರ್ಚಿನ ಧರ್ಮಗುರು ವಂ| ಪ್ರವೀಣ್ ಅಮೃತ್ ಮಾರ್ಟಿಸ್ ನೊವೆನಾ ಮತ್ತು ಬಲಿದಾನವನ್ನು ನಡೆಸಿಕೊಟ್ಟರು. ಇವತ್ತು ಮೊಂತಿ ಸಂಭ್ರಮ ಭಕ್ತಿಯ ಹಬ್ಬಬಲಿ ಪೂಜೆಯನ್ನು ಅರ್ಪಿಸಿ ಫಾ| ಪ್ರವೀಣ್ ಅಮೃತ್ ಮಾರ್ಟಿಸ್ “ಕುಟುಂಬದಲ್ಲಿ ಯೇಸುವಿನ ಪ್ರೀತಿಯ ಸಾಕ್ಷಿಗಳಾಬೇಕು” ಎನ್ನುವುದು ಇವತ್ತಿನ ಹಬ್ಬದ ಆಚರಣೆಯ ಮುಖ್ಯ ಸಂದೇಶವಾಗಿತ್ತು. ಆಚರಣೆಯ ವೇಳೆ ಬತ್ತದ ಹೊಸ ತೆನೆಯನ್ನು ಆಶೀರ್ವದಿಸಲಾಯಿತು. ಮಕ್ಕಳು ಮೊಂತಿ ಮೇರಿಗೆ ಪುಷ್ಪಗಳನ್ನು ಅರ್ಪಿಸಿದರು.
ಸುಪೀರಿಯರ್ ಸಿಸ್ಟರ್ ಜಸಿಂತಾ ಬಿಎಸ್, ಪಾಲನ ಮಂಡಳಿಯ ಉಪಾಧ್ಯಕ್ಷ ಜಾನ್ ಟೆಲ್ಲಿಸ್, ಕಾರ್ಯದರ್ಶಿ ಶ್ರೀಮತಿ ಲೀನಾ ಮಸ್ಕರೆನ್ಹಾಸ್, 20 ಆಯೋಗದ ಸಂಯೋಜಕಿ ಶ್ರೀಮತಿ ಐರಿನ್ ನೊರೊನ್ಹಾ, ಗುರಿಕಾರರು, ಧರ್ಮಕೇಂದ್ರದ ಭಕ್ತಾದಿಗಳು ಹಾಜರಿದ್ದರು.

Sacred Heart of Jesus Ajekar celebrated the feast of the Nativity of Mother Mary with joy as one parish community. As a preparation children & parents partook in the consecutive 9 days of novena prayers & mass. Rev. Fr Praveen Amrith Martis the parish priest conducted the novena & the main celebrant for the feast. To be the witnesses of love of Jesus in the family was the message of day’s celebration. New corns were blessed during the celebration.Sr Superior Sr Jacintha BS, Parish Pastoral Council Vice-President Mr John Tellis, Secretary Mrs Leena Mascarenhas, 20 Commission Co-ordinator Mrs Irene Noronha, Gurkars, parishioners & children gathered together near the grotto of Mother Mary & offered flowers honouring Mother Mary..