ಮಹಿಳಾ ಸಮಾಜ ಸಂಘದ ಸರ್ವಸದಸ್ಯರ ಸಭೆ ಅನುಮಾನಗಳ ಹುತ್ತ ಸಭೆಯನ್ನು ತಡೆಯಿಡಿಯಲು ಎಸ್.ರೇಣುಕಾ ಒತ್ತಾಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಮಹಿಳಾ ಸಮಾಜ ಸಂಘದ ಅವ್ಯವಹಾರಗಳ ಕುರಿತಂತೆ ಕರ್ನಾಟಕ ನ್ಯಾಯಾಲಯದಲ್ಲಿ ಹೂಡಿರುವ ದಾವೆಯ ಅನ್ವಯ ಕೋಲಾರ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ನಡೆಸುತ್ತಿರುವ ವಿಚಾರಣೆ ಕುರಿತು ಪಿ.ಸಿ.ಬಡಾವಣೆಯ ಎಸ್.ರೇಣುಕಾರವರು ವಿವರಣೆ ನೀಡಿದ್ದಾರೆ . ಎಸ್ . ರೇಣುಕಾರವರು 2014-15ರಲ್ಲಿ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ಮಹಿಳಾ ಸಮಾಜ ಹಲವಾರು ಆರ್ಥಿಕ ಮತ್ತು ಆಡಳಿತ ಅವ್ಯವಹಾರಗಳ ಕೂಪವಾಗಿದ್ದುದನ್ನು ಕಂಡು ಅದನ್ನು ಸರಿಪಡಿಸಲು ಯತ್ನಿಸಿದಾಗ ತನ್ನನ್ನು ಕಾನೂನು ಬಾಹಿರವಾಗಿ ಸರ್ವಸದಸ್ಯರ ಸಭೆ ನಡೆಸಿ ತೆಗೆದು ಹಾಕಲಾಯಿತು . ಅದೇ ರೀತಿ ಹಲವಾರು ದಶಕಗಳಿಂದ ಸದಸ್ಯರಾಗಿದ್ದರವರನ್ನು , ಮಹಿಳಾ ಸಮಾಜದ ಏಳಿಗೆಗಾಗಿ ಶ್ರಮಿಸಿದವರನ್ನು ಸಹ ತೆಗೆದು ಹಾಕಲಾಗಿದೆ . ಆಗಲೇ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರಿಗೆ ಈ ಕುರಿತು ಹಲವಾರು ದೂರುಗಳನ್ನು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಎಸ್.ರೇಣುಕಾ ರವರು ಆರೋಪಿಸಿದ್ದಾರೆ . ಮಹಿಳಾ ಸಮಾಜದಲ್ಲಿನ ಹಲವಾರು ಆರ್ಥಿಕ ಮತ್ತು ಆಡಳಿತ ಅವ್ಯವಹಾರಗಳ ಕುರಿತಂತೆ ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ರೇಣುಕಾರವರು ದಾವೆ ಹೂಡಿದ್ದು , ನ್ಯಾಯಾಲಯದ ನಿರ್ದೇಶನದಂತೆ ಸಹಕಾರ ಸಂಘಗಳ ಉಪನಿಬಂಧಕರು , ಕೋಲಾರ ಇವರು ಕಳೆದ 7 ವರ್ಷಗಳಿಂದ ಆಮೆ ಗತಿಯಲ್ಲಿ ವಿಚಾರಣೆ ನಡೆಸಿದ್ದು , ಆ ವಿಚಾರಣಾ ವರದಿಯಲ್ಲಿ ಅವ್ಯವಹಾರಗಳು ನಡೆದಿರುವುದು ನಿಜವೆಂದು ಸಾಬೀತಾಗಿದ್ದರೂ , ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದ್ದಾರೆ .


ರೇಣುಕಾರವರು ನ್ಯಾಯಸಮ್ಮತ ಮರುವಿಚಾರಣೆ ಕೋರಿ ಪತ್ರ ಬರೆದಿದ್ದು , ಸಹಕಾರ ಸಂಘಗಳ ಉಪನಿಬಂಧಕರಾದ ಎನ್.ವೆಂಕಟೇಶ್‌ರವರು ಮರುವಿಚಾರಣೆ ನಡೆಸುವುದಾಗಿ ತಿಳಿಸಿ 15 ದಿನಗಳೊಳಗೆ ಮರುವರದಿ ಸಲ್ಲಿಸುವಂತೆ ಆದೇಶ ನೀಡಿದ್ದರೂ ಮರುವಿಚಾರಣೆ ನಡೆಸಿರುವುದಿಲ್ಲ . ಮರುವಿಚಾರಣೆ ನಡೆಸುವವರೆಗೂ ಮಹಿಳಾ ಸಮಾಜ ಶಿಕ್ಷಣ ಸಂಘದ ಸರ್ವಸದಸ್ಯರ ಸಭೆ ನಡೆಸಬಾರದೆಂದು ಹಾಗೂ ಉಪನಿಬಂಧಕರ ವಿಚಾರಣಾ ವರದಿಗೆ ಸರ್ವಸದಸ್ಯರ ಸಭೆಯಲ್ಲಿ ಅನುಮೋದಿಸಲು ಅವಕಾಶ ನೀಡಬಾರದೆಂದು ಉಪನಿಬಂಧಕರನ್ನು ಕೋರಿರುವುದಾಗಿ ತಿಳಿಸಿದ್ದಾರೆ . ಸಹಕಾರ ಸಂಘಗಳ ಉಪನಿಬಂಧಕರಾದ ಎನ್.ವೆಂಕಟೇಶ್‌ರವರು ಮಹಿಳಾ ಸಮಾಜ ಸಂಘದ ಸರ್ವಸದಸ್ಯರ ಸಭೆಯನ್ನು ಡಿಸೆಂಬರ್ 26 ರಂದು ನಡೆಸಲು ಅವಕಾಶ ನೀಡಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ . ಸರ್ಕಾರಿ ಅಧಿಕಾರಿಗಳೇ ನ್ಯಾಯ ಒದಗಿಸದಿದ್ದಲ್ಲಿ ಸಾರ್ವಜನಿಕರ ಸಂಸ್ಥೆಯ ಹಿತರಕ್ಷಣೆಗಾಗಿ ಸಾಮಾನ್ಯ ಪ್ರಜೆಗಳು ಯಾರ ಮೊರೆಹೋಗಬೇಕು . ಈ ಸರ್ವಸದಸ್ಯರ ಸಭೆ ಮತ್ತು ಚುನಾವಣೆಯನ್ನು ಈ ಕೂಡಲೇ ಸಹಕಾರ ಸಂಘಗಳ ಉಪನಿಬ ೦ ಧಕರಾದ ಎನ್.ವೆಂಕಟೇಶ್‌ರವರು ತಡೆಯಬೇಕೆಂದು ತಮ್ಮ ಮೂಲಕ ಕೋರುತ್ತೇನೆ . ಕೆಲವರು ಮತಯಾಚನೆ ಪ್ರಸ್ತುತ ಚುನಾವಣೆಯಲ್ಲಿ ರೇಣುಕಾ ರವರ ಹೆಸರನ್ನು ಬಳಸಿಕೊಂಡು , ಜಾತಿವಾದದ ಹೆಸರಿನಲ್ಲಿ ಹಾಗೂ ಅನ್ಯಾಯ , ಅವ್ಯವಹಾರಗಳ ತನ್ನ ಹೋರಾಟದ ಹಿನ್ನೆಲೆಯನ್ನು ಬಳಸಿಕೊಂಡು ಮಾಡುತ್ತಿದ್ದಾರೆಂದು ಎಂದು ಆರೋಪಿಸಿದ್ದಾರೆ . ತಾನು ಈ ಚುನಾವಣೆಯನ್ನು ಬೆಂಬಲಿಸಿಲ್ಲ ಹಾಗೂ ಈ ಸರ್ವಸದಸ್ಯರ ಸಭೆ ಮತ್ತು ಚುನಾವಣೆಯನ್ನು ಈ ಕೂಡಲೇ ಸಹಕಾರ ಸಂಘಗಳ ಉಪನಿಬಂಧಕರಾದ ಎನ್.ವೆಂಕಟೇಶ್ ರವರು ತಡೆಯಬೇಕೆಂದು ಕೋರಿದ್ದಾರೆ .