ಮಂಗಳೂರು: ಎಸ್.ಸಿ.ಎಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ನ ಪದವಿ ಪ್ರದಾನ ಸಮಾರಂಭವು ಮಾರ್ಚ್ 20, 2024 ರಂದು ಮಂಗಳೂರಿನ ಬೆಂದೂರಿನ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಹಾಲ್ನಲ್ಲಿ ನಡೆಯಿತು. ಕಾರ್ಯಕ್ರಮವು ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು, ನಂತರ ಗಣ್ಯರು ದೀಪ ಬೆಳಗಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾದ ಮಂಗಳೂರು ನರ್ಸಿಂಗ್ ಕಾಲೇಜು (ಮಂಗಳೂರು ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್) ಪ್ರಾಂಶುಪಾಲರಾದ ಪ್ರೊ.ಮಲರ್ವಿಝಿ ಎಂ.ಎಂ.ಎಸ್ಸಿ(ಎನ್), ಎಂಬಿಎ(ಎಚ್ಎಂ) ಪದವೀಧರರನ್ನು ಉದ್ದೇಶಿಸಿ ಯಶಸ್ಸಿನ ಪ್ರಮುಖ ಅಂಶಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಸಿ.ಎಸ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಅಬಿನಯ್ ಸೊರಕೆ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೊ(ಶ್ರೀಮತಿ) ಲೋಲಿಟ ಎಸ್ ಎಂ ಡಿಸೋಜ ಅವರು ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು ಮತ್ತು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಉಪಪ್ರಾಂಶುಪಾಲರಾದ ಶ್ರೀ ಅನಿಲ್ ಕುಮಾರ್ ಸಿ ಎಂ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ದಿವ್ಯಾ ವಂದಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ.ಅಮರನಾಥ ಸೊರಕೆ, ಎಸ್.ಸಿ.ಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಯು.ಕೆ.ಖಾಲಿದ್ ಮತ್ತು ಪ್ರಾಧ್ಯಾಪಕಿ ಶ್ರೀಮತಿ ಅಂಬಿಕಾ ಜೆ.ಆರ್ ಉಪಸ್ಥಿತರಿದ್ದರು. ಶ್ರೀಮತಿ ಡೆಲಿಶಾ ಕರೋಲ್ ಡಿಸೋಜಾ ಮತ್ತು ಶ್ರೀಮತಿ ಚಿನ್ಮಯಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
S.C.S COLLEGE OF NURSING SCIENCES GRADUATION CEREMONY REPORT- 2024
Mangaluru: The Graduation ceremony of S.C.S College of Nursing Sciences was held on 20th March 2024 at St. Sebastian Platinum Jubilee Hall, Bendoor, Mangaluru. The programme began with an invocation dance followed by lighting the lamp by dignitaries on the dias. The Chief Guest of the function Prof. Malarvizhi M. M.Sc(N), MBA(HM), Principal, Mangalore College of Nursing (Mangalore group of institution) addressed the graduates and the key points to success. Dr. Abinay Sorake, Secretary, SCS group of institutions was the presiding officer of the programme. Mr. Anil Kumar C.M Vice Principal SCS College of Nursing Sciences welcomed the gathering. Prof (Mrs.) Lolita S.M. D’Souza, Principal, administered the oath to the graduates and presented the annual report of the college. Dr. Amarnath Sorake, Founder President, Karnataka Educational & Charitable Trust, Mr. U.K. Khalid, Administrative Officer, SCS Group of Institutions and Mrs. Ambika J R, Professor were present on the occasion. Ms. Delisha Carol D’Souza and Ms. Chinmayi compered the programme. Mrs. Divya Assistant Professor, OBG department delivered the vote of thanks. The cultural events were performed by the nursing students of the college.