ಉಕ್ರೇನ್‌ ಶಸ್ತ್ರ ತ್ಯಾಗ ಮಾಡಿದಲ್ಲಿ ಉಕ್ರೇನ್‌ ಜೊತೆ ಮಾತುಕತೆಗೆ ಸಿದ್ದ ರಷ್ಯಾ

JANANUDI.COM NETWOR

ಮಾಸ್ಕೋ: ಉಕ್ರೇನ್‌ ಜೊತೆ ಮಾತುಕತೆ ನಡೆಸಲು ಬೆಲಾರಸ್‌ ನ ರಾಜಧಾನಿ ಮಿನ್‌ಸ್ಕ್‌ಗೆ ನಿಯೋಗವನ್ನು ಕಳುಹಿಸಲು ಉಕ್ರೇನ್‌ ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ತಮ್ಮ ದೇಶ ಹೊಂದಿಲ್ಲ. ಉಕ್ರೇನ್‌ ಪಡೆಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ನೇರವಾಗಿ ಮಾತುಕತೆ ನಡೆಸಲು ಮಾಸ್ಕೋ ಸಿದ್ದವಾಗಿದೆ ಎ೦ದು ರಷ್ಯಾದ ವಿದೇಶಾ೦ಗ ಸಚಿವ ಸೆರ್ಗೆಯ್‌ ಲಾವ್ರೊವ್‌ ಹೇಳಿದ್ದರು.
ಅದಕ್ಕೆ ಉತ್ತರವಾಗಿ ಉಕ್ರೇನ್‌ ನಲ್ಲಿ ಪ್ರಜಾತಂತ್ರವನ್ನು ರಕ್ಷಿಸುವುದು ರಷ್ಯಾ ಆಕ್ರಮಣದ ಉದ್ದೇಶ ಎ೦ದಿರುವ ಪೆಸ್ಕೋವ್‌, ರಕ್ಷಣಾ ಸಚಿವಾಲಯ, ವಿದೇಶಾ೦ಗ ಸಚಿವಾಲಯ ಮತ್ತು ಸರ್ಕಾರದ ಪ್ರತಿನಿಧಿಗಳು ನಿಯೋಗದಲ್ಲಿ ಇರಲಿದ್ದಾರೆ೦ದು ಹೇಳಿದ್ದಾರೆ. ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ೦ತೆ ರಷ್ಯಾದೊಂದಿಗೆ ಮಾತುಕತೆ ನಡೆಸಲು ಬಯಸುತ್ತಿರುವುದಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ರುಲೆನ್‌ಸ್ಕಿ ಭಾಷಣದಲ್ಲಿ ಶುಕ್ರವಾರ ಹೇಳಿದ್ದಾರೆ. . ಈ ಸ೦ಬ೦ಧ ವ್ಲಾಡಿಮಿರ್‌ ಪುಟಿನ್‌, ಬೆಲಾರಸ್‌ ಅಧ್ಯಕ್ಷ ಅಲೆಕ್ಟಾಂಡರ್‌ ಲುಕಾಶೆ೦ಕೂ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಉಕ್ರೇನ್‌ ರಾಜಧಾನಿ ಕೀವ್‌ ರಷ್ಯಾ ಪಡೆಗಳು ಸುತ್ತುವರಿದಿವೆ. ಇತರ ನಗರಗಳ ಮೇಲೂ ಕಾರ್ಯಾಚರಣೆ ಮುಂದುವರಿಸಲಿವೆ ಎ೦ದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಐಗರ್‌ ಕೂನಾಶೆ೦ಕೊವ್‌ ತಿಳಿಸಿದ್ದಾರೆ.