JANANUDI.COM NETWORK
ಮಾಸ್ಕೊ: ಉಕ್ರೇನ್ ವಿರುದ್ದ ಯುದ್ಧ ಘೋಷಿಸಿರುವ ರಷ್ಯಾ, ಇದೀಗ 11 ನಗರಗಳ ಮೇಲೆ ಕ್ಲಿಷಣಿ ದಾಳಿ ನಡೆಸಿದೆ. ಉಕ್ರೇನ್ ವಿಮಾನ ನಿಲ್ದಾಣದ ಮೇಲೆ ಕೂಡ ಕ್ಲಿಷಣಿ ದಾಳಿ ನಡೆಸಲಾಗಿದೆ.
ಯುದ್ಧದ ಭೀತಿಯಲ್ಲಿರುವ ಉಕ್ರೇನ್ ದೇಶದಲ್ಲಿ 30 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಈ ವಿಷಯದಲ್ಲಿ ಬೇರೆ ಯಾವುದೇ ದೇಶಗಳು ಹಸ್ತಕ್ಷೇಪ ಮಾಡಿದರೆ ಹಿಂದೆಂದೂ ಕಂಡಿರದ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಉಕ್ರೇನ್ ಬೆಂಬಲಕ್ಕೆ ನಿಲ್ಲುವ ದೇಶಗಳಿಗೆ ರಷ್ಯಾ ಎಚ್ಚರಿಸಿದೆ.
ಉಕ್ರೇನ್ ವಾಯುಪಡೆಯನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ಆರಂಭಿಸಿದ್ದು, ಕೀವ್, ಖಾರ್ಕಿವ್, ಒಡೆಸಾಗಳಲ್ಲಿ ಸ್ಪೋಟದ ಸದ್ದುಗಳು ಕೇಳಿಬಂದಿವೆ. ಕೀವ್ ನಲ್ಲಿ ಸರ್ಕಾರಿ ಪ್ರಧಾನ ಕೇಂದ್ರದ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಖಾರ್ಕಿವ್ ಮೇಲೆ ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, 10 ನಾಗರಿಕರು ಸಾವನ್ನಪ್ಪಿದ್ದಾರೆಂದು ಅ೦ದಾಜಿಸಲಾಗಿದೆ.
ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ಪುಟಿನ್ ನಾಗರಿಕರನ್ನು ರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ
ಉಕ್ರೇನ್ ಸೈನಿಕರು. ಶಸ್ತಾಸ್ತ ಕಳಗಿಳಿಸಿ ಶರಣಾಗತರಾಗಿ. ಇಲ್ಲವಾದಲ್ಲಿ ಪೂರ್ವ ಭಾಗದಲ್ಲಿ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯ. ಉಕ್ರೇನ್ ನಿಂದ ಬರುವ ಬೆದರಿಕೆಗಳಿಗೆ ಇದು ಪ್ರತಿಕ್ರಿಯೆಯಾಗಿದೆ. ಉಕ್ರೇನ್ ವಶಪಡಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ ಆದರೆ ರಕ್ತಪಾತ ಸ೦ಭವಿಸಿದರೆ ಅದರ ಜವಾಬ್ದಾರಿ ಉಕ್ರೇನ್ ಸರ್ಕಾರದ್ದು ಎಂದು ವಾಗ್ದಾಳಿ ನಡೆಸಿದೆ.