ಗಂಗೊಳ್ಳಿ ಚರ್ಚ್ ವತಿಯ “ಐಲ್ಯಾಂಡ್ ಟ್ರೋಪಿ” ಕ್ರಿಕೆಟ್ ಪಂದ್ಯಾಟಲ್ಲಿ ಕುಂದಾಪುರ ಚರ್ಚ್ ಬಳಗಕ್ಕೆ ರನ್ನರ್‍ಅಪ್ ಪ್ರಶಸ್ತಿ.

JANANUDI.COM NETWORK


ಕುಂದಾಪುರ,14: ಕಳೆದ ಶನಿವಾರ ಶನಿವಾರ ಗಂಗೊಳ್ಳಿ ಚರ್ಚ್ ಫ್ರೆಂಡ್ಸ್ ಇವರ ವತಿಯಿಂದ ಕನ್ನಡ ಕುದ್ರುವಿನಲ್ಲಿ ನಡೆದ “ಐಲ್ಯಾಂಡ್ ಟ್ರೋಪಿ” ಕ್ರಿಕೆಟ್ ಪಂದ್ಯಾಟಲ್ಲಿ ಕುಂದಾಪುರ ತಾಲೂಕು ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಹಲವಾರು ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಬಸ್ರೂರು ಚರ್ಚ್ ಬಳಗ ಪಡೆದರೆ, ಕುಂದಾಪುರ ಚರ್ಚ್ ಬಳಗವು ರನ್ನರ್‍ಅಪ್ ಪ್ರಶಸ್ತಿ ಪಡೆಯಿತು. ಈ ಭಾನುವಾರ 14 ರಂದು, ಕುಂದಾಪುರ ಚರ್ಚ್ ಮೈದಾನದಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕುಂದಾಪುರ ಚರ್ಚ್ ತಂಡಕ್ಕೆ ಅಭಿನಂದಿಸಿದರು. ಸಹಾಯಕ ಧರ್ಮಗುರು ಶುಭ ಕೋರಿದರು. ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವಂ| ಪ್ರವೀಣ್ ಅಮ್ರತ್ ಮಾರ್ಟಿಸ್, ಉಪಾಧ್ಯಕ್ಷರಾದ ಲುವಿಸ್ ಜೆ.ಫೆರ್ನಾಂಡಿಸ್ ಉಪಸ್ಥಿತರಿದ್ದರು