ಕುಂದಾಪುರ (ಜ.03): ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆಗೆ ಮಾತ್ರವೇ ಸೀಮಿತವಾಗಿರದೇ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸಬೇಕು. ಅಂತಹ ಪ್ರಯತ್ನವನ್ನು ಈ ಸಂಸ್ಥೆ ಉತ್ತಮ ಶಿಕ್ಷಕರ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಹಳೆ ವಿದ್ಯಾರ್ಥಿ ಚಿಕಾಗೊ ಯು.ಎಸ್.ಎ ನ, ಜೆ.ಪಿ.ಮೊರ್ಗಾನ್ ಚೇಸ್ ಅಂಡ್ ಕಂಪೆನಿ ಇದರ ಉಪಾಧ್ಯಕ್ಷರಾದ ಭಾಸ್ಕರ್ ಎಚ್. ಮಾರುತಿ ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ 49ರ ವಾರ್ಷಿಕ ಸಂಭ್ರಮದ ರುಗ್ಮಯಾನ ಸುವರ್ಣ ರಥದತ್ತ ಸಂಭ್ರಮದ ಪಥ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಜೀವನದ ಸವಿ ನೆನಪುಗಳನ್ನು ಬಿಚ್ಚಿಟ್ಟರು. ಸಂಸ್ಥೆಯ ಸಂಚಾಲಕರು ಹಾಗು ಅಧ್ಯಕ್ಷರು ಆಗಿರುವ ಶ್ರಿ ಬಿ ಎಂ ಸುಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ ಇಂದಿನ ಮಕ್ಕಳಿಗೆ ದೊರೆಯಬೇಕಾದ ಎಲ್ಲ ಒಳ್ಳೆಯ ಶಿಕ್ಷಣವು ಮಕ್ಕಳಿಗೆ ಕೊಡುವಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಸುವರ್ಣ ಸಂಭ್ರಮಾಚರಣೆ ಆಚರಿಸುತ್ತಿರುವ ಕುಂದಾಪುರ ವಲಯದ ಏಕೈಕ ಆಂಗ್ಲ ಮಾಧ್ಯಮ ಶಾಲೆಯಾಗಿರುವುದು ಸಂಸ್ಥೆಗೆ ಸಲ್ಲುವ ಗೆಲುವಿನ ಮುಕುಟ ಎಂದು ಹೇಳಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಕೆ. ಸೀತಾರಾಮ ನಕ್ಕತ್ತಾಯ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ಎಚ್.ಎಮ್.ಎಮ್ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯಾದ ಲತಾ ಜಿ ಭಟ್ ವಾರ್ಷಿಕ ವರದಿ ವಾಚಿಸಿದರು. ನ್ಯಾಶ್ ನಲ್ ಲೆವೆಲ್ ಚೆಸ್ ಚಾಂಪಿಯನ್, ಸಂಸ್ಥೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ, ಕುಮಾರಿ ಶ್ರಾವ್ಯ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಶ್ರೀದೇವಿ ಮತ್ತು ಅಶ್ವಿತಾ ಕಾರ್ಯಕ್ರಮ ನಿರೂಪಿಸಿ ವಂದಸಿದರು.