ಕುಂದಾಪುರ (ಡಿ.26): ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ವೃತ್ತಿಯ ಕಡಗೆ ಮನಸ್ಸು ಮಾಡುತ್ತಾರೆ. ಆದರೆ ಇತರ ಕೆಲಸದ ಕಡೆಗೆ ಮನಸ್ಸು ಮಾಡುವುದಿಲ್ಲ. ವಿದ್ಯಾರ್ಥಿ ಜೀವನದಲ್ಲೇ ದೇಶ ಪ್ರೇಮ, ದೇಶ ಭಕ್ತಿಯನ್ನು ಬೆಳೆಸಿಕೊಂಡರೆ ದೇಶ ಸೇವೆಯನ್ನು ಮಾಡುವ ಬೇರೆ ಬೇರೆ ಸರ್ಕಾರಿ ಕೆಲಸಗಳಿವೆ. ಅದರತ್ತ ಮನಸ್ಸು ಮಾಡಬೇಕು ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿರುವ ಶ್ರೀಯುತ ಪುನೀತ್ ಕುಮಾರ್ ಹೇಳಿದರು.
ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ 49ರ ವಾರ್ಷಿಕ ಸಂಭ್ರಮದ ರುಗ್ಮಯಾನ ಸುವರ್ಣ ರಥದತ್ತ ಸಂಭ್ರಮದ ಪಥ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಜೀವನದ ಸವಿ ನೆನಪುಗಳನ್ನು ಬಿಚ್ಚಿಟ್ಟರು. ಸಂಸ್ಥೆಯ ಸಂಚಾಲಕರು ಹಾಗು ಅಧ್ಯಕ್ಷರು ಆಗಿರುವ ಶ್ರಿ ಬಿ ಎಂ ಸುಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ ಇಂದಿನ ಮಕ್ಕಳಿಗೆ ದೊರೆಯಬೇಕಾದ ಎಲ್ಲ ಒಳ್ಳೆಯ ಶಿಕ್ಷಣವು ಮಕ್ಕಳಿಗೆ ಕೊಡುವಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಸುವರ್ಣ ಸಂಭ್ರಮಾಚರಣೆ ಆಚರಿಸುತ್ತಿರುವ ಕುಂದಾಪುರ ವಲಯದ ಏಕೈಕ ಆಂಗ್ಲ ಮಾಧ್ಯಮ ಶಾಲೆಯಾಗಿರುವುದು ಸಂಸ್ಥೆಗೆ ಸಲ್ಲುವ ಗೆಲುವಿನ ಮುಕುಟ ಎಂದು ಹೇಳಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಕೆ. ಸೀತಾರಾಮ ನಕ್ಕತ್ತಾಯ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ಎಚ್.ಎಮ್.ಎಮ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ ವಾರ್ಷಿಕ ವರದಿ ವಾಚಿಸಿದರು. ಕಳೆದ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಗೈದ ವಿದ್ಯಾರ್ಥಿಗಳಾದ ಶ್ರೀಧನ್ ಶೆಟ್ಟಿ, ಸುಜನ್ ಉಪಾಧ್ಯಾಯ, ಸಮೃದ್ಧಿ, ಕೌಶಿಕ್ ಶೆಟ್ಟಿ ಹಾಗೂ ಎನ್.ಸಿ.ಸಿ ಯಲ್ಲಿ ಸಾಧನೆ ಮಾಡಿದ ಅನ್ವಿತಾಳನ್ನು ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದ ಕಲಾ ಶಿಕ್ಷಕರಾದ ರಮೇಶ್ ಹಾಂಡರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಕುಮಾರಿ ಪ್ರಾಪ್ತಿ ಮಡಪ್ಪಾಡಿ ಮತ್ತು ಸಮರ್ಥ ಕಾರ್ಯಕ್ರಮ ನಿರೂಪಿಸಿ ವಂದಸಿದರು.