ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಗೌಡತಾತಗಡ್ಡ ಗ್ರಾಮದಲ್ಲಿ ಶನಿವಾರ ಸಂಜೆ ಕ್ಷುಲಕ್ಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ .
ರಾಜ್ಯದಲ್ಲಿಯೇ ಅತಿ ಹೆಚ್ಚು ಸೂಕ್ಷ್ಮ ಮತ ಗಟ್ಟೆಗಳನ್ನು ಹೊಂದಿರುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವು ಚುನಾವಣೆಯು ಹತ್ತಿರ ಬರುದಿದ್ದಂತೆ ಶಾಸಕ ಕೆ.ಆರ್.ರಮೇಶ್‍ಕುಮಾರ್ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೆಂಬಲಿಗರ ಮಧ್ಯೆ ಹೊಡಿ-ಬಡಿ ರಾಜಕೀಯ ಶುರುವಾಗಿದೆ.
ಕ್ಷುಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗುಂಪು ಕಟ್ಟಿಕೊಂಡು ಕಾಂಗ್ರೆಸ್ ಮುಖಂಡರಿಂದ ಹಲ್ಲೆ. ಗೌಡತಾತಗಡ್ಡ ಗ್ರಾಮದ ತಾ.ಪಂ. ಮಾಜಿ ಉಪಾಧ್ಯಕ್ಷೆ ಬಾಲಾವತಿ ಹಾಗು ಕುಟುಂಬಸ್ಥರು ನಮ್ಮ ಮನೆಯ ಮುಂದೆ ಚರಂಡಿ ನೀರು ಬಿಡಬೇಡಿ ಎಂದು ಲಕ್ಷ್ಮೀಪುರ ಗ್ರಾ.ಪಂ.ಅಧ್ಯಕ್ಷೆ ಮಂಗಮ್ಮ ನಡುಪ್ಪನ್ನ ಕುಟುಂಬದವರಿಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಇನ್ನು ನೀವು ಚುನಾವಣೆಯಲ್ಲಿ ಗೆದ್ದಿಲ್ಲ. ಆಗಲೇ ನಮಗೆ ಆರ್ಡರ್ ಮಾಡ್ತೀರಾ ಎಂದು ಜಗಳಕ್ಕಿಳಿದ ಮಂಗಮ್ಮ ಹಾಗು ಕುಟುಂಬಸ್ಥರು.
ಜೆಡಿಎಸ್ ಪಕ್ಷದ ಕಾರ್ಯಕರ್ತರಾದ ಮೇಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಮುನಿಯಪ್ಪ, ನಡುಪಣ್ಣ, ಮಂಗಮ್ಮ ಕುಟುಂಬಸ್ಥರಿಂದ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆಂದು ಜೆಡಿಎಸ್ ಪಕ್ಷದ ಕಾರ್ಯಕರ್ತರಾದ ಬಾಲಾವತಿ ಹಾಗು ಕುಟುಂಬಸ್ಥರ ಆರೋಪ
ಹಲ್ಲೆಯಿಂದ ರೆಡ್ಡಪ್ಪ, ಮುನೀಂದ್ರ, ಹರಿಬಾಬು, ರವಣಮ್ಮ, ಬಾಲಾವತಿ ಎನ್ನುವರಿಗೆ ಗಾಯಳುಗಳು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಶಾಂತಿ , ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಶಸ್ತ್ರ ಪಡೆಯು ಬೀಡು ಬಿಟ್ಟಿದೆ.ಗೌನಿಪಲ್ಲಿ ವೃತ್ತ ನಿರೀಕ್ಷಕ ಜಯನಾಂದ್ ಮಾರ್ಗದರ್ಶನದಂತೆ ಠಾಣಾಧಿಕಾರಿ ಹೆಮಂತ್ ದೂರು ದಾಖಲಿಸಿಕೊಂಡು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.