ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: 2020-21ನೇ ಸಾಲಿನಲ್ಲಿತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸಾಧನೆಯನ್ನು ಪರಿಗಣಿಸಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದರೋಟರಿ ವಾರ್ಷಿಕ ಸಭೆಯಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್18 ಪ್ರಶಸ್ತಿಗಳನ್ನು ಪಡೆದುಕೊಂಡಿದೆಎಂದು 2020-21ನೇ ಸಾಲಿನ ಅಧ್ಯಕ್ಷರಾದಎಸ್. ಶಿವಮೂರ್ತಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶಿವಮೂರ್ತಿ, 2020-21 ನೇ ಸಾಲಿನಲ್ಲಿಒಟ್ಟು 150 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಾನು ಅಧಿಕಾರಿ ವಹಿಸಿಕೊಂಡ ದಿನವೇ ಪೆÇಲೀಸ್ ವಸತಿಗೃಹದಲ್ಲಿ ಗಿಡಗಳನ್ನು ನಾಟಿ ಮಾಡುವ ಮುಖಾಂತರ ಪ್ರಾರಂಭವಾದಕಾರ್ಯಕ್ರಮವುತಾಲ್ಲೂಕಿನಾಧ್ಯಂತ ಸುಮಾರುಒಂದು ಸಾವಿರ ಗಿಡಗಳನ್ನು ನೆಡಲಾಗಿದೆ. ಹಾಗೆಯೆಗುರು ಪೌರ್ಣಿಮೆ ಪ್ರಯುಕ್ತಶಿಕ್ಷಣ ತಜ್ನರು ಹಾಗೂ ಅಧ್ಯಾತ್ಮಿಕ ಗುರುಗಳಿಗೆ ಮನೆಯಂಗಳದಲ್ಲಿ ಗೌರವವನ್ನು ಮಾಡಲಾಯಿತು.
ಹಾಗೆಯೆ ಕಳೆದ ವರ್ಷ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪರೀಕ್ಷೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿನ ತಾಲ್ಲೂಕ್‍ಟಾಪರ್ಸ್‍ಅನ್ನು ಗುರ್ತಿಸಿ ರೋಟರಿ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ಸರ್ಕಾರಿಆಸ್ಪತ್ರೆಯಲ್ಲಿಕಾರ್ಯ ನಿರ್ವಹಿಸುತ್ತಿದ್ದಕರೋನ ವಾರಿಯರ್ಸ್‍ಆದ ವೈಧ್ಯರು, ಸುಶ್ರೂಕಿಯರು, ಆಂಬುಲೆನ್ಸ್‍ಚಾಲಕರು ಮತ್ತು ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು.
ತಾಲ್ಲೂಕಿನಾಧ್ಯಂತಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೆ ಮಾಸ್ಕ್ ಗಳನ್ನು ವಿತರಿಸಲಾಯಿತು. ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪಟ್ಟಣದ ಪುರಸಭೆಯ 10 ಹಿರಿಯ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಸುಮಾರು 100 ಮಂದಿ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತುಎಂದು ತಿಳಿಸಿದರು.
ಕರೋನ ವಾರಿಯರ್ಸ್‍ಆದ ಆಶಾ ಕಾರ್ಯಕರ್ತರನ್ನು ಗುರ್ತಿಸಿ ಗೌರವಿಸಲಾಗಿದೆ. ಗನಿಬಂಡೆಯಕೋವಿಡ್‍ಆಸ್ಪತ್ರೆಗೆ 5 ಕಾನ್ಸಂಟ್ರೇಶನ್ ಯಂತ್ರಗಳನ್ನು ನೀಡಲಾಗಿದೆ, ಇದೆರೀತಿಯ ಅನೇಕ ಸೇವಾ ಮನೋಬಾವದದೃಷ್ಟಿಯಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸು ಮತ್ತು ನಮಗೆ 18 ಪುರಸ್ಕೃತ ಪ್ರಶಸ್ತಿಗಳನ್ನು ಪಡೆಯಬೇಕಾದರೆ ಮಾಧ್ಯಮದವರ ಪ್ರಚಾರ ಮೂಲ ಕಾರಣವಾಗಿದೆಎಂದು ತಿಳಿಸಿದರು.
ರೋಟರಿ ಸಂಸ್ಥೆಗೆ ದಾನಿಗಳಿಂದ ಮಾತ್ರ ವಸ್ತು ರೂಪದಲ್ಲಿ ಪಡೆದು ವಿತರಿಸಲಾಗುತ್ತಿದ್ದು, ಸಂಸ್ಥೆಯಲ್ಲಿಇರುವ ಹಲವಾರು ಸದಸ್ಯರು ವಸ್ತು ರೂಪದಲ್ಲಿ ನೀಡಿರುತ್ತಾರೆ. ರೋಟರಿ ಸಂಸ್ಥೆಗೆ ಯಾವುದೆ ಹಣಕಾಸಿನ ನೆರವುಇರುವುದಿಲ್ಲ. ಹಲವರು ತಿಳಿದ ಹಾಗೆ ರೋಟರಿ ಸದಸ್ಯರು ಸೂಟು ಬೂಟು ಹಾಕಿಕೊಂಡು ಹೋಡಾಡುತ್ತಿದ್ದಾರೆ, ಅವರಿಗೆಯಾವುದೋ ಹಣಕಾಸಿನ ನೆರವು ಬರುತ್ತಿದೆಎಂದು ತಿಳಿದಿದ್ದು, ಇವುಗಳೆಲ್ಲವೂ ವೂಹಾಪೆÇೀಹಗಳು ಮಾತ್ರ ಹಾಗಿವೆ. ಸೇವಾ ಮನೋಬಾವ ಇರುವವರು ಮಾತ್ರಇಂತಹರೋಟರಿ ಸಂಸ್ಥೆಯಲ್ಲಿ ಸದಸ್ಯರಾಗಿರುತ್ತಾರೆಎಂದು ತಿಳಿಸಿದರು.
ಈ ಸಮಯದಲ್ಲಿ 2020-21ನೇ ಸಾಲಿನ ಕಾರ್ಯದರ್ಶಿ ಹೆಚ್. ಎನ್. ನಾಗೇಶ್, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಖಜಾಂಚಿಎಸ್.ಎನ್. ಮಂಜುನಾಥರೆಡ್ಡಿ, 2021-22 ನೇ ಸಾಲಿನ ಅಧ್ಯಕ್ಷರಾದಡಾ. ವೆಂಕಟಾಚಲಪತಿ, ಸದಸ್ಯರಾದಆನಂದ್ ಮತ್ತು ಸೀತರೆಡ್ಡಿ ಹಾಜರಿದ್ದರು.