ರಕ್ಷಣಾ ಇಲಾಖೆಯ ಸಿಬ್ಬಂದಿಗೆ ಲಾಕ್‍ಡೌನ್ ಮುಗಿಯುವ ಪ್ರತಿದಿನವೂ ರೋಟರಿ ಶ್ರೀನಿವಾಸಪುರದ ಸೆಂಟ್ರಲ್ ವತಿಯಿಂದ ಬೋಜನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೋವಿಡ್ ನಿಯಂತ್ರಿಸಲು ಹಗಲಿರುಳು ಸಾರ್ವಜನಿಕ ಹಿತದೃಷ್ಟಿಯಿಂದ ಕರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ರಕ್ಷಣಾ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಲಾಕ್‍ಡೌನ್ ಮುಗಿಯುವ ತನಕ ಮಧ್ಯಾಹ್ನದ ಸಮಯದಲ್ಲಿ ಪ್ರತಿದಿನವೂ ರೋಟರಿ ಶ್ರೀನಿವಾಸಪುರದ ಸೆಂಟ್ರಲ್ ವತಿಯಿಂದ ಬೋಜನ ಒದಗಿಸುವ ಸೇವೆಯನ್ನು ಮಾಡಲಾಗುವುದು ಎಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ ಅಧ್ಯಕ್ಷರಾದ ಎಸ್. ಶಿವಮೂರ್ತಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯ ಸಿಬ್ಬಂದಿ ಕರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪೆÇಲೀಸ್ ಸಿಬ್ಬಂದಿಗೆ ಮಧ್ಯಾಹ್ನದ ಉಪಹಾರವನ್ನು ಏರ್ಪಡಿಸಿ ಮಾತನಾಡಿ, ನಿಮ್ಮ ಪ್ರಾಣಗಳನ್ನು ಲಿಕ್ಕಿಸದೆ ಜನರ ಹಿತಕ್ಕಾಗಿ ಸರ್ಕಾರದ ಸೇವೆ ಜೊತೆಗೆ ವಾರಿಯರ್ಸ್ ಆಗಿ ಹಗಲಿರುಳು, ಬಿಸಿಲು ಗಾಳಿ ಎನ್ನದೆ ಪೊಲೀಸ್ ಠಾಣೆ ಒಳಗೆ ಮತ್ತು ಹೊರಗೆ ವಿವಿಧ ವೃತ್ತಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಇಲಾಖೆಯ ಸಮಸ್ಥ ಸಿಬ್ಬಂದಿಗೆ ಇದೆರೀತಿ ಲಾಕ್‍ಡೌನ್ ಮುಗಿಯುವರೆಗೂ ವಿತರಿಸಲಾಗುವುದು ಎಂದುಎಸ್. ಶಿವಮೂರ್ತಿ, ತಿಳಿಸಿದರು.
ಈ ಸಂದರ್ಭದಲ್ಲಿ ಎ.ಎಸ್.ಐ. ರವೀಂದ್ರ ಮತ್ತು ಸಿಬ್ಬಂದಿ, ಸ್ಥಳೀಯ ರೋಟರಿ ಸಂಸ್ಥೆಯ ಖಜಾಂಜಿಎಸ್.ಎನ್. ಮಂಜುನಾಥರೆಡ್ಡಿ, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಶ್ರೀಕಾಂತ್, ಪ್ರಶಾಂತ್-ವಿ-ರೆಡ್ಡಿ, ಹರೀಷ್ ಮುಂತಾದವರು ಹಾಜರಿದ್ದರು.