ಶಿರ್ವ: ಶಿರ್ವ ರೋಟರಿ ಹಾಗೂ ಶಿರ್ವ ರೋಟರ್ಯಾಕ್ಟ್ ಕ್ಲಬ್ಬಿನ ಸಹಯೋಗದಲ್ಲಿ ಕ್ರಿಸ್ಮಸ್ ಆಚರಣೆ ಹಾಗೂ ಕುಟುಂಬ ಸಹಮಿಲನ ಕಾರ್ಯಕ್ರಮವು ನಡೆಯಿತು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ. ಜಿತೇಂದ್ರ ಪುರ್ಟಾಡೊ ಮಾತನಾಡಿ, ಸ್ನೆಹ, ಪ್ರೀತಿ, ಭಾಂಧವ್ಯದ ಬೇಸುಗೆಯಾಗಿ ಕ್ರೈಸ್ತ ಬಾಂಧವರು ಈ ಆಚರಣೆ ಮಾಡುತ್ತಾರೆ ಎಂದು ಅವರು ತಿಳಿಸಿದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಶಶಿಕಾಂತ ಕರಿಂಕರವರು ಮಾತನಾಡಿ, ‘ಏಸು ಸ್ವಾಮಿಯ ಮಾನವ ಜಗತ್ತಿಗೆ ನೀಡಿದ ಸಂದೇಶವು ರೋಟರಿಯ ತತ್ವ ಸಂದೇಶವು ಒಂದೇ ಆಗಿದೆ’ ಎಂದು ಹೇಳಿದರು.
ಶಿರ್ವ ರೋಟರಿ ಅಧ್ಯಕ್ಷ ಡಾ. ವಿಟ್ಠಲ್ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು. ಜಾಕ್ಸನ್ ಕಾಬ್ರಲ್ ಶುಭಶಂಶನೆ ನೀಡಿದರು. ಪಿಲೀಫ್ ಕಾಸ್ತಲೀನೊ ರವರು ಸಂತಾಕ್ಲಾಸ್ ಪಾತ್ರಧಾರಿಯಾಗಿ ಸಭೆಯಲ್ಲಿ ಆಗಮಿಸಿ ಸದಸ್ಯರಿಗೆ ಆಕರ್ಷಣೆ ನೀಡಿದರು. ರೋಟರಿ ಹಾಗೂ ಶಿರ್ವ ರೋಟರ್ಯಾಕ್ಟ್ ಸದಸ್ಯರು ವಿವಿಧ ಮನೊರಂಜನಾ ಸ್ಪರ್ಧೆ, ಹಾಡು, ನೃತ್ಯ ಗಳ ಮೂಲಕ ಮನೊರಂಜನೆ ನೀಡಿದರು.
ಮೆಲ್ವಿನ್ ಡಿಸೋಜಾ ಪ್ರಾಸ್ತಾವಿಕಾ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ರೊ. ದಿನೇಶ್ ಕುಲಾಲ್ ವಂದಿಸಿದರು.