ಎಪ್ರಿಲ್ 18ರಂದು ಭಾನುವಾರ ರೋಟರಿ ಸಮುದಾಯ ದಳದ ಜಿಲ್ಲಾ ಸಮ್ಮೇಳನ

JANANUDI.COM NETWORK


ಬೀಜಾಡಿ: ಕೋಟೇಶ್ವರ ರೋಟರಿ ಕ್ಲಬ್, ರೋಟರಿ ಸಮುದಾಯ ದಳ ಕೊರವಡಿ ಮತ್ತು ಬೀಜಾಡಿ ಇವರ ಆಶ್ರಯದಲ್ಲಿ ರೋಟರಿ ಸಮುದಾಯ ದಳದ ಜಿಲ್ಲಾ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಎ.18ರಂದು ಭಾನುವಾರ ಬೆಳಿಗ್ಗೆ 9.30ರಿಂದ ಕೋಟೇಶ್ವರ ವಿಶ್ವಕರ್ಮ ಸಭಾಭವನದಲ್ಲಿ ನಡೆಯಲಿದೆ.ಸಮ್ಮೇಳನವನ್ನು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣಮೂರ್ತಿ ಪಿ.ಕೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.