ಕುಂದಾಪುರ, ಡಿ.12ಃ ರೋಟರಿ ಕ್ಲಬ್ ಆಫ್ ಕುಂದಾಪುರ ಇವರಿಂದ ಕುಂದಾಪುರಕ್ಕೆ 3 ಸಿ.ಸಿ.ಟಿ.ವಿ ಟಿ.ವಿ. ಮತ್ತು ಒಂದು ಮನೆಯ ಕೊಡುಗೆಯನ್ನು ನೀಡಿತು
ಕುಂದಾಪುರದ ಶಾಸ್ತ್ರಿ ಪಾರ್ಕ್ ಹತ್ತಿರ, ಸಂಗಮ್ ಜಂಕ್ಷನ್ ಹತ್ತಿರ ಮತ್ತು ತಲ್ಲೂರು ಜಂಕ್ಷನ್ ಹತ್ತಿರ ಸಂಚಾರಿ ಠಾಣೆಗಾಗಿ ಸಿ.ಸಿ.ಟಿ.ವಿ ಕ್ಯಾಮರಗಳನ್ನು ಹಾಗೂ ತಲ್ಲೂರಿನ ಮೂಕಾಂಬಿಕಾ ದೇವಾಡಿಗ ಇವರಿಗೆ ಕಟ್ಟಿಸಿ ಕೊಡಮಾಡಿದ ಮನೆಯನ್ನು ಡಿಸ್ಟ್ರಿಕ್ಟ್ ಗವರ್ನರ್ ರೊ.ಸಿ.ಎ. ದೇವ್ ಆನಂದ್, ಅಸಿಸ್ಟೆಂಟ್ ರಾಜೇಂದ್ರ ಶೆಟ್ಟಿ, ಝೊನಾಲ್ ಲೆಫ್ಟಿನೆಂಟ್ ಮಹೇಂದರ್ ಶೆಟ್ಟಿ, ಪ್ರಸ್ತುತ ರೋಟರಿ ಕ್ಲಬ್ ಆಫ್ ಕುಂದಾಪುರ ಸೌತ್ ಇದರ ಅಧ್ಯಕ್ಷೆ, ಕಾರ್ಯದರ್ಶಿ ಭರತ್ ಶೆಟ್ಟಿ, ಕುಂದಾಪುರ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಪ್ರಸಾದ್ ಕುಮಾರ್ ಮತ್ತು ಇತರ ರೋಟೆರಿಯನ್ ಗಣ್ಯರ ಜೊತೆ ಉದ್ಘಾಟಿಸಿದರು.
ಡಿಸ್ಟ್ರಿಕ್ಟ್ ಗವರ್ನರ್ ರೊ.ಸಿ.ಎ. ದೇವ್ ಆನಂದ್ ಮಾತನಾಡಿ ‘ನಮ್ಮ ರೋಟರಿ ಕ್ಲಬ್ ಗಳು ಸಮಾಜಕ್ಕೆ ಉಪಯುಕ್ತವಾದ ಕೊಡುಗೆಗಳನ್ನು ನೀಡುತ್ತಾರೆ, ಪ್ರಸ್ತೂತ ರೋಟರಿ ಕ್ಲಬ್ ಆಫ್ ಕುಂದಾಪುರ ಸೌತ್ ಇದು ಅತ್ಯುತಮ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇಂದು ಸಿ.ಸಿ.ಟಿ.ವಿ ಕ್ಯಾಮರಗಳನ್ನು ಕುಂದಾಪುರದ ಮುಖ್ಯವಾದ ಜಂಕ್ಷನ್ ಗಳಲ್ಲಿ ಅಳವಡಿಸಿ ಕೊಡುಗೆಯಾಗಿ ನೀಡಿದೆ, ಮತ್ತು ತಲ್ಲೂರಿನಲ್ಲಿ ಮಳೆಯಿಂದ ಹಾನಿಯಾದ ಬಡ ಕುಟುಂಬಕ್ಕೆ ಸುಮಾರು ಆರು ಲಕ್ಷದ ಮೌಲ್ಯದ ಮನೆಯನ್ನು ಕಟ್ಟಿಕೊಟ್ಟಿದ್ದಾರೆ’ ಹೀಗೆ ರೋಟರಿ ಸಂಸ್ಥೆ ಸಮಾಜಕ್ಕಾಗಿ ನಾ ನಾ ರೀತಿಯಲ್ಲಿ’ ಕೊಡುಗೆಯನ್ನು ನೀಡುತ್ತದೆ ಎಂದರು.
ಅಧ್ಯಕ್ಷೆ ಜುಡಿತ್ ಮೆಂಡೊನ್ಸಾ ಮಾತನಾಡಿ 1.5 ಲಕ್ಷದ ಸಿ.ಸಿ.ಟಿ.ವಿ. ಕ್ಯಾಮರಗಳನ್ನು ೩ ಜಂಕ್ಷನಲ್ಲಿ ಕೊಡಮಾಡಿದ್ದೇವೆ,ಅವಗಳನ್ನು ಸಂಚಾರಿ ಠಾಣೆಗೆ ಸಂಪಊರ್ಣವಾಗಿ ಹಸ್ತಾಂತರಿಸಿದ್ದೇವೆ, ಮತ್ತು ತಲ್ಲೂರಿನಲ್ಲಿ ಮೂಕಾಂಬಿಕಾ ದೇವಾಡಿಗ ಇವರಿಗೆ ಸುಮಾರು 6 ಲಕ್ಷದ ಮೌಲ್ಯದ ಮನೆಯನ್ನು ದಾನಿಗಳ ಮೂಲಕ ಕಟ್ಟಿಕೊಟ್ಟು ಹಸ್ತಾಂತರಿಸಿದ್ದೇವೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಾತನಾಡಿ ಜುಡಿತ್ ಮೆಂಡೊನ್ಸಾ ನಮ್ಮ ಗ್ರಾಮ ಪಂಚಾಯತ್ ಸದಸ್ಯೆ ಅವರಿಗೆ ಸಮಾಜದ ಮೇಲೆ ತುಂಬ ಕಳಕಳಿಯಿದೆ, ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಡಾ।ಉಮೇಶ್ ಪುತ್ರನ್, ಯು. ಆರ್. ಶೆಣೈ, ಸಟ್ಟಾಡಿ ವಿಜಯ ಶೆಟ್ಟಿ, ಸಚಿನ್ ನೆಕೆತ್ರಾಯ, ಅರುಣ್ ಮೆಂಡೊಂನ್ಸಾ, ವಿವಿಯನ್ ಕ್ರಾಸ್ಟೊ, ಸತ್ಯನಾರಯಣ ಪುರಾಣಿಕ್, ಒಝ್ಲಿನ್ ರೆಬೆಲ್ಲೊ, ಜಾನ್ಸನ್ ಡಿಆಲ್ಮೇಡಾ, ದೇವರಾಜ್, ಸುರೇಖ ಪುರಾಣಿಕ್, ರೇಖಾ ದೇವಾನಂದ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಸಂಜೆ ಶಿವಪ್ರಸಾದ್ ಗ್ರಾಂಡ್ ನಲ್ಲಿ ಔಪಚಾರಿಕ ಪರಿಚಯ ಸಭೆ ನೆಡೆಯಿತು, ಸಂಜೆ ಪಿಸಿ.ಪಿ. ಅಡೋಟೆರಿಯಮ್ ಫಿಲೊಮೀನಾ ಕಮರ್ಷಿಯಲ್ ಪಾರ್ಕನಲ್ಲಿ ಸಾರ್ವಜನಿಕ ಸಭೆ ನೆಡೆಯಿತು. ಸಭೆಯಲ್ಲಿ ಹಲವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಭರತ್ ಶೆಟ್ಟಿ, ಧನ್ಯವಾದಗಳನ್ನು ಅರ್ಪಿಸಿದರು.