ಕುಂದಾಪುರ, ಅ.15: ಕುಂದಾಪುರ ಸರ್ಕಾರಿ ಪ. ಪೂ. ಕಾಲೇಜಿನ ಎನ್.ಎಸ್,ಎಸ್. ವಿದ್ಯಾರ್ಥಿಗಳೊಂದಿಗೆ ಸುರಕ್ಷತ ಶಿಬಿರ ಮತ್ತು ಜಾಥವನ್ನು ಆಯೋಜಿಸಲಾಗಿತ್ತು. ಇದರ ಉದ್ಘಾಟನೆಯನ್ನು ರೋಟರೆರಿಯನ್ ಪಿ.ಡಿ.ಜಿ. ಅಭಿನಂದನ್ ಶೆಟ್ಟಿ ಉದ್ಘಾಟಿಸಿ ‘ಸ್ವಾತಂತ್ರ್ಯದೊಂದು ಆಯೋಜಿಸಿದ ಈ ಕಾರ್ಯಕ್ರಮ ದೇಶ ಕಟ್ಟುವ ಕಾರ್ಯಕ್ರಮಗಳಲ್ಲಿ ಒಂದಾಗಿದೆ’ ಎಂದು ವ್ಯಾಖ್ಯನಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಂಚಾರಿ ಪೋಲಿಸ್ ಠಾಣೆಯ ಪಿ.ಎಸ್.ಐ. ಪ್ರಸಾದ್ ಕುಮಾರ್ ‘ಸಂಚಾರ ನಿಯಮದ ಬದಲಾವಣೆ ಮತ್ತು ನಿಯಮಗಳ ಬಗ್ಗೆ ಎಲ್ಲರ್ರಿಗೂ ಅರಿವು ಸೀಗಬೇಕು’ ಎಂದು ತಿಳಿಸಿದರು.
ರೋಟರಿ ಕ್ಲಬ್ ದಕ್ಷಿಣ ಇದರ ಅಧ್ಯಕ್ಷೆ ರೋ. ಜೂಡಿತ್ ಮೆಂಡೊನ್ಸಾ ” ಇವತ್ತು ಆಯೋಜಿಸಿದ ರಸ್ತೆ ಸುರಕ್ಷೆ ಜಾಥ ಮತ್ತು ಶಿಬಿರ ರೋಟರಿ ಡಿಸ್ಟ್ರಿಕ್ ಯೋಜನೆಗಳಲ್ಲಿ ಒಂದಾಗಿದೆ, ಸಮಾಜಕ್ಕೆ ಇಂತಹ ಮಾಹಿಗಳ ಅವಶ್ಯಕತೆ ಇದೆ’ ಎಂದು ಪ್ರಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಿವ್ರತ್ತ ಅಧಿಕಾರಿ ವಿಶ್ವನಾಥ ನಾಯಕರವರು ಪ್ರಾತ್ಯಕ್ಷಿಕೆಯ ಮೂಲಕ ರಸ್ತೆ ನಿಯಮಗಳನ್ನು ಪರಿಚಯಿಸಿದರು. ರೋಟೆರಿಯನ್ ವಿವಿಯನ್ ಕ್ರಾಸ್ತಾ ವಂದಿಸಿದರು. ಜೂ.ಕಾಲೇಜ್ ಕುಂದಾಪುರ ಪ್ರಾದ್ಯಪಕರಾದ ಉದಯ ಶೆಟ್ಟಿ ನಿರೂಪಿಸಿದರು.