

ಕುಂದಾಪುರ, ಫೆ.2; ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಭಾರತೀಯ ಕಿಸಾನ್ ಸಂಘದ ಸಹಯೋಗದೊಂದಿಗೆ ‘ಕ್ರಷಿ ವಿಚಾರ ಸಂಕಿರಣ’ ಕುಂದಾಪುರ ರೋಟರಿ ಲಕ್ಷ್ಮೀ ನರಸಿ೦ಹ ಕಲಾಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಭಾಟಿಸಿದ ಜಿಲ್ಲಾ ಸಾಧಕ ರೈತ ಪ್ರಶಸ್ತಿ ವಿಜೇತರಾದ ರಮೇಶ್ ನಾಯಕ್ ‘ಯಾವುದೇ ಕ್ಷೇತ್ರದಲ್ಲಿ ಸಫಲತೆ ಪಡೆಯ ಬೇಕಾದರೆ, ನಿರಂತರ ಪರಿಶ್ರಮ ಮತ್ತು ಅಧ್ಯಯನ ಮಾಡಬೇಕು. ಕ್ರಷಿಯಲ್ಲಿ ಸೊಲಿಲ್ಲ, ರೈತರು ಕ್ರಷಿ ವಿಧಾನದಲ್ಲಿ ನವೀಕ್ರತಗೊಳ್ಳುತ್ತಲೇ ಇರಬೇಕು, ಯಾವ ಜಾಗದಲ್ಲಿ ಯಾವ ಕ್ರಷಿ, ಯಾವ ವಿಧಾನದೊಂದಿಗೆ ಮಾಡಬೇಕು ಎಂದು ತಿಳಿದಕೊಳ್ಳಬೇಕು. ಹಳೆಯ ವಿಧಾನದಲ್ಲಿ ಬೆಳೆ ಚೆನ್ನಾಗಿ ಬರದೇ ಇದ್ದರೆ, ನಾವು ಆಧುನಿಕ ಕ್ರಷಿ ವಿಧಾನದಲ್ಲಿ ಬೆಳೆಯಬೇಕು. ರೈತರಿಗೂ ತಮ್ಮ ಕ್ಷೇತ್ರದ ಶಿಕ್ಷಣ ಬೇಕು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಬೆಳೆ ಸಿಗುವಂತ ವಿಧಾನವನ್ನು ತಮ್ಮದಾಗಿಸಿಕೊಳ್ಳಬೇಕು, ಅವಾಗವಾಗ ಲಾಭದಾಯಕ ಕ್ರಷಿ ಭೂಮಿಗೆ ತೆರಳಿ ಅವರಿಂದ ಜ್ಞಾನ ಪಡೆದುಕೊಳ್ಳಬೇಕು, ಅಲ್ಲದೆ ಅವಾಗಾವಾಗ ಇಂತಹ ಕ್ರಷಿ ಶಿಬಿರದಲ್ಲಿ ಭಾಗವಹಿಸಿ ಅದರ ಲಾಭ ಪಡೆದುಕೊಳ್ಳ ಬೇಕು’ ಎಂದರು.
ಅರಣ್ಯ ಕ್ರಷಿಯ (ಕಾಡು ಕ್ರಷಿ) ಬಗ್ಗೆ ಸಿದ್ಧಾಪುರ , ವಲಯ ಅರಣ್ಯ ಅಧಿಕಾರಿ ಗಣಪತಿ ವಿ. ನಾಯಕ್ ಅವರು ಭಾರತದ ಮತ್ತು ಕರ್ನಾಟಕದ ಅರಣ್ಯದ ಬಗ್ಗೆ ಹಾಗೂ ವಿಸ್ತಾರದ ಬಗ್ಗೆ ವಿವರವಾಗಿ ತಿಳಿಸಿದರು. ಮರ ಗೀಡಗಳು ನಮ್ಮ ವಿಧಾನದಲ್ಲಿ ಬೆಳೆದರೆ, ಅದರ ಬೆಳೆಯುವಿಕೆ ತುಂಬ ವರ್ಷಗಳು ತೆಗೆದುಕೊಳ್ಳದೆ, ಆಧುನಿಕ ವಿಧಾನದಲ್ಲಿ ಬೆಳೆದರೆ ಶೀಘ್ರವಾಗಿ ಬೆಳೆದು ಲಾಭದಾಯಕವಾಗುತ್ತದೆ. ಪಾಡು ಬಿಟ್ಟ ಸ್ಥಳಗಳಲ್ಲಿ ಅರಣ್ಯ ಕ್ರಷಿ ಮಾಡಿ ಲಾಭ ಗಳಿಸಬಹುದೆಂದು’ ತಿಳಿಸಿದರು.
ಗ್ರೀನ್ ಇಂಡಿಯಾ ಮೂವ್ಮೆಂಟ್ (ರಿ.) ಸ್ಥಾಪಕ ಅಧ್ಯಕ್ಷರಾದ ಮುನಿಯಾಲ್ ಗಣೇಶ್ ಶೆಣೈ, ಸ್ಥಾಪಕ ಅಧ್ಯಕ್ಷರು, ಮುನಿಯಾಲ್ ಗಣೇಶ್ ಶೆಣೈಯವರು ಮಶ್ರೂಮ್ (ಅಣಬೆ) ಕೃಷಿಯ ಬಗ್ಗೆ ತಿಳಿಸಿ ಪ್ರಾತ್ಯಕ್ಷಿಕೆಯ ಮೂಲಕ ಮಶ್ರೂಮ್ ಕೃಷಿಯನ್ನು ಮಾಡುವುದು ಹೇಗೆ ಎಂದು ತಿಳಿಸಿ ಈ ಬೆಳೆಯ ಗ್ರಾಹಕರಿಂದ ಒಳ್ಳೆಯ ಬೇಡಿಕೆ ಇದ್ದು ಸ್ವ ಉದ್ಯೋಗಿಯಾಗಿ ಸ್ವಾಲಂಬಿ ಜೀವನ ನೆಡಸಬಹುದು ಎಂದರು.
ತಾರಸಿಯಲ್ಲಿ “ಭತ್ತ”ದ ಕೃಷಿಕ, ರಾಜ್ಯ “ಪರಿಸರ ಪ್ರಶಸ್ತಿ” ವಿಜೇತರಾದ ಕೃಷ್ಣಪ್ಪ ಗೌಡ ಪಡ್ಡಂಬೈಲ್ ತಾರಸಿ ಕ್ರಷಿಯ ಬಗ್ಗೆ ತಿಳಿಸಿದರು, ತಾರಸಿಯಲ್ಲಿ ಎಲ್ಲ ವಿಧದ ಸಾವಯವ ತರಕಾರಿ, ಹಣ್ಣು ಹಂಪಲು ಬೆಳೆಯಬಹುದು, ಹೂವಿನ ಕ್ರಷಿಯನ್ನು ಬೆಳೆಸಿ ಉತ್ತಮ ಇಳುವರಿಯನ್ನು ಮಾಡಿ ಲಾಭ ಗಳಿಸಬಹುದಲ್ಲದೆ, ಉತ್ತಮ ಆರೋಗ್ಯವನ್ನು ಕೂಡ ಪಡೆದುಕೊಳ್ಳಬಹ್ದೆಂದು’ ತಿಳಿಸಿದರು.
ಕುಂದಾಪುರ ರೋಜರಿ ಮಾತಾ ಚರ್ಚಿನ ಧರ್ಮಗುರು, ಕೃಷಿಪರ ಚಿಂತಕರಾದ ಅ।ವಂ। ಪೌಲ್ ರೇಗೋ, ಗೌರವ ಅತಿಥಿಯಾಗಿ ಶುಭ ಕೋರಿದರು. ಹಲವಾರು ರೋಟೆರಿಯನ್ ಗಳು ಮತ್ತು ಕ್ರಷಿ ಆಸಕ್ತರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷೆ ಜೂಡಿತ್ ಮೆಂಡೊನ್ಸಾ ಪ್ರಸ್ತಾವಿಕವಾಗಿ ಮಾತಗಳನ್ನಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರೋ. ಡಾ. ರಂಜಿತ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.







































