

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಸವಿತಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರಕ್ಕೆ ಒಂದು ದಿನದ ಮಧ್ಯಾಹ್ನದ ಊಟದ ಬಾಬ್ತು ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ರೋ. ಸಚಿನ್ ನಕ್ಕತ್ತಾಯ, ಮಾಜಿ ಅಧ್ಯಕ್ಷ ರೋ. ಕೆ.ಪಿ. ಭಟ್, ರೋ. ಶೋಭಾ ಭಟ್, ರೋ. ಮನೋಹರ ಪಿ, ರೋ ಸುರೇಖ ಪುರಾಣಿಕ ಹಾಗೂ ಸೇವಾ ಸಂಗಮದ ಮುಖ್ಯೋಪಾಧ್ಯಾಯರು ವಿಷ್ಣುಮೂರ್ತಿ ಭಟ್ ಮತ್ತು ಸಂಚಾಲಕ ಶ್ರೀ. ಚಂದ್ರಶೇಖರ ಪಡಿಯಾರ ಉಪಸ್ಥಿತರಿದ್ದರು.