ಕುಂದಾಪುರ, ಡಿ.6: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಸರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 5 ರಂದು ರಂಗು ರಂಗಾಗಿ ನೆಡಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಧರ್ಮಗುರು, ರೋಸರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಪೌಲ್ ರೇಗೊ “ಮಕ್ಕಳು, ತಂದೆ ತಾಯಂದಿರಿಗೆ ದೇವರ ವರದಾನ, ಮಕ್ಕಳಿಗೆ ಮೊದಲ ಗುರುಗಳೇ ತಂದೆ ಮತ್ತು ತಾಯಿ, ಮನೆಯ್ರ್ ಮೊದಲ ಪಾಠಶಾಲೆ, ಗಾಂಧಿಜೀ ನನ್ನ ಜೀವನವೇ ದೇಶಕ್ಕೆ ಸಂದೇಶ ಎಂದು ಹೇಳಿದ್ದರು, ಅದರಂತೆ, ಹೆತ್ತವರು ಮನೆಯಲ್ಲಿ ಜೀವಿಸುವ ರೀತಿಯೆ ಮಕ್ಕಳಿಗೆ ದೊಡ್ಡ ಕೊಡುಗೆ, ದೊಡ್ಡ ಸಂದೇಶ. ಮಕ್ಕಳ ಎದುರು ಎಂದೂ ಜಗಳವಾಡಿಕೊಳ್ಳಬೇಡಿ, ಪ್ರೀತಿಯಿಂದ ಇರಬೇಕು, ಮಕ್ಕಳನ್ನು ಅತೀ ಮುದ್ದಾಗಿ ಬೆಳಸಬೇಡಿ.ಶಿಕ್ಷಿಸಿತರನ್ನಾಗಿ ಮಾಡಿ, ಅವರೊಡನೆ ನಿಮ್ಮ ಸಮಯವನ್ನು ಹಂಚಿಹಕೊಂಡು ಮಾತುಕತೆ ನೆಡೆಸಿರಿ’ ಎಂದು ಅವರು ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾದ ಉಪನ್ಯಾಸಕರಾದ ಪ್ರಶಾಂತ್ ಎಸ್. ಹೆಗ್ಡೆ ಮಾತನಾಡಿ “ನಿಮ್ಮ ಮಕ್ಕಳನ್ನು ಸರಿಯಾದ ಶಾಲೆಯಲ್ಲಿ ಸೇರಿಸಿದ್ದಿರಿ ಎಂದು ನನ್ನ ಭಾವನೆ, ಏಕೆಂದರೆ ನನ್ನ ಮಗು ಕೂಡ ಈ ಶಾಲೆಯಲ್ಲಿ ಇದೆ. ನನ್ನ ಮಗು ಈ ಶಾಲೆಯಲ್ಲಿ ಸೇರಿದ್ದಾವಾಗಿನಿಂದ ಅವನಲ್ಲಿ ಸ್ಫೂರ್ತಿ ತುಂಬಿದೆ, ಮೊದಲು ಆತ ಬೇರೆ ಶಾಲೆ ಹೋಗುತ್ತಿದ್ದ,ಈಗ ಒಂದು ದಿವಸ ಕೂಡ ಶಾಲೆಗೆ ಹೋಗುವುದಿಲ್ಲವೆಂದು ಹೇಳಲಿಲ್ಲ, ಇಂದು ಆತ ಒಂದು ದಿವಸ ಶಿಕ್ಷಕರನ್ನು ನೋಡದಿದ್ದರೆ,ಪರಿತಪಿಸಿಕೊಳ್ಳುತ್ತಾನೆ, ಅಷ್ಟೊಂದು ರೀತಿಯಲ್ಲಿ ಇಲ್ಲಿನ ಶಿಕ್ಷಕರು ಮಕ್ಕಳನ್ನು ಕಾಳಜಿ ವಹಿಸಿಕೊಳ್ಳುತ್ತಾರೆ, ಹೆತ್ತವರೆ, ಇಂದು ಮಕ್ಕಳಿಗೆ ಮೊಬಾಯ್ಲ್ ಕೊಟ್ಟು ಅಭ್ಯಾಸ ಮಾಡುತ್ತಾರೆ. ಮೊಬಾಯ್ಲ್ ಉಪಯೋಗದಲ್ಲಿ ನಾವು ಹಿಡಿತ ಇಟ್ಟುಕೊಳ್ಳಬೇಕು, ಮತ್ತು ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕ್ರತಿಯನ್ನು ಹೇಳಿಕೊಡಬೇಕು’ ಎಂದು ತಿಳಿಸಿದರು.
ವೇದಿಕೆಯಲ್ಲಿ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪಿ.ಯು. ಉಪನ್ಯಾಸಕರಾದ ನಾಗರಾಜ ಶೆಟ್ಟಿ,, ಸಂತ ಮೇರಿಸ್ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ ಬರೆಟ್ಟೊ ಉಪಸ್ಥಿತರಿದ್ದು, ಅವರು ನಾನ ವಿಭಾಗದಲ್ಲಿ ವಿಜೇತರಾದ ಚಿಣ್ಣರಿಗೆ ಬಹುಮಾನಗಳನ್ನು ವಿತರಿಸಿದರು.
ವಾರ್ಷೀಕೋತ್ಸವದಲ್ಲಿ ಚಿಣ್ಣರು ಕೂಡ ನಾವು ದೂಡ್ಡ ಮಕ್ಕಳಿಕಿಂತ್ತ ಎನೂ ಕಡಿಮೆಯಿಲ್ಲ ಎಂಬಂತ್ತೆ, ನಿರೂಪಿಸಿ ಕುಣಿದು, ಕುಪ್ಪಳಿಸಿದವು, ಶಿಕ್ಷಕಿಯರೂ ಕೂಡ ನ್ರತ್ಯ ಮಾಡಿ ಮಕ್ಕಳಿಗೆ ಮನೋರಂಜನೆ ನೀಡಿದರು. ಚಿಣ್ಣರೇ ಸ್ವಾಗತ ಮತ್ತು ಧನ್ಯವಾದಗಳನ್ನು ಅರ್ಪಿಸಿದರು.
ಕಿಂಡರ್ ಗಾರ್ಟನ್ ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಾ ಲುವೀಸ್ ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕಿ ವಿನೀತಾ ಡಿಸೋಜಾ ವಿಜೇತರ ಮಕ್ಕಳ ಹೆಸರನ್ನು ವಾಚಿಸಿದರು. ಶಿಕ್ಷಕಿ ರಿಚೇಲ್ ಡಿಸಿಲ್ವಾ ಮುಖ್ಯ ನಿರೂಪಣಾಗಾರರಾಗಿ ಕ್ರಾರ್ಯಕ್ರಮವನ್ನು ನಡೆಸಿಕೊಟ್ಟರು.