ಕುಂದಾಪುರ, ಡಿ.3: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಸರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 2 ರಂದು ರಂಗು ರಂಗಾಗಿ ನೆಡಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ರೋಸರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಸ್ಟ್ಯಾನಿ ತಾವ್ರೊ “ಚಿಕ್ಕ ಮಕ್ಕಳು ಶಾಲೆಯಲ್ಲಿ ಮತು ಮನೆಗಳಲ್ಲಿ ಕೇಂದ್ರ ವ್ಯಕ್ತಿಗಳಾಗಿರುತ್ತಾರೆ, ಮಕ್ಕಳು ಶಾಲೆಯಲ್ಲಿ ಇರದಿದ್ದರೆ ಶಾಲೆ ಬರಿದಾಗಿ ಕಾಣುತ್ತದೆ, ಮಕ್ಕಳು ಮನೆಯಲ್ಲಿ ಇಲ್ಲದಿದ್ದರೆ ಮನೆ ಬರಿದಾಗಿ ಕಾಣುತ್ತೆ. ಹೆತ್ತವರಿಗೆ, ಶಿಕ್ಷಕರಿಗೆ ಮಕ್ಕಳೇ ಸರ್ವಸ್ವ, ಮನೆಗಳಲ್ಲಿ ಚಿಕ್ಕ ಮಕ್ಕಳು ಇಲ್ಲದಿದ್ದರೆ, ಅಜ್ಜ ಅಜ್ಜಿಯಂದರಿಗೆ ಹುಮ್ಮಸ್ಸಿರುವುದಿಲ್ಲಾ, ಅವರ ಹುಮ್ಮಸೇ ಚಿಕ್ಕ ಮಕ್ಕಳು, ಹೆತ್ತವರಿಗೂ ಕೂಡ ಹಾಗೇ ಅವರ ಮಕ್ಕಳ ಮೇಲೆ ಅಪಾರವಾದ ಪ್ರೀತಿ ಎಲ್ಲಾ ತಂದೆತಾಯಂದಿರು ಮಕ್ಕಳಿಗಾಗಿ ಎಂತಹಾ ತ್ಯಾಗಕ್ಕೂ ಸಿದ್ದರಿದ್ದಾರೆ. ಇಲ್ಲಿ ನಮ್ಮ ಕಿಂಟರ್ ಗಾರ್ಟನ್ಶಾಲೆಯಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಕೂಡ ನಿಮ್ಮ ಮಕ್ಕಳಿಗೆ ಅಷ್ಟೆ ಕಾಳಜಿ,ಪ್ರೀತಿ, ಮಮತೆ ತೋರಿಸುತ್ತಾರೆ, ದೇಶದ ಉತ್ತಮ ನಾಗರಿಕನಾಗಲು ಅವರಿಗೆ ಚಿಕ್ಕಂದಿನಿಂದಲೇ ಆಟ ಪಾಠಗಳ ಜೊತೆ ಸಂಸ್ಕಾರವನ್ನು ಕಲಿಸುತ್ತಾರೆ” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ವಕೀಲೆ, ರೋಜರಿ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಮಾತನಾಡಿ “ನಮ್ಮ ಮಕ್ಕಳೇ ನಮಗೆಲ್ಲಾ ಹೀರೊ ಮತ್ತು ಹೀರೊಯಿನ್ಸ್, ನಾವು ನಮ್ಮ ಮಕ್ಕಳನ್ನು ಪ್ರಮಾಣಿಕವಾಗಿ ಪ್ರೀತಿಸಬೇಕು, ಅವರಿಗೆ ಕಲಿಕೆಯಲ್ಲಿ ಹೆಚ್ಚು ಅಂಕ ತರಬೇಕೆಂದು ಓತ್ತಡ ಹಾಕಬಾರದು, ಅವರಿಗೆ ಉತ್ತಮ ಪುಸ್ತಕಗಳನ್ನು ಒದಲು ಪ್ರೇರೆಪಿಸಿ, ಮೊಬೈಲ್ ಮತ್ತು ಮಾಧ್ಯಮದಿಂದ ದೂರವಿಡಿ, ಮನೆಯಲ್ಲಿ ಉತ್ತಮ ಶಾಂತಾ ವಾತವರಣ ಇಡಿ, ಉತ್ತಮ ಗುಣ ನಡೆತೆಗಳನ್ನು ಕಲಿಸಿ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ಮಾಡಲು ಶ್ರಮಿಸಬೇಕೆಂದು’ ಎಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಕುಂದಾಪುರ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಸಂತ ಮೇರಿಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೊ, ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಡಿಸೋಜಾ ಉಪಸ್ಥಿತರಿದ್ದು, ಅವರು ನಾನ ವಿಭಾಗದಲ್ಲಿ ವಿಜೇತರಾದ ಚಿಣ್ಣರಿಗೆ ಬಹುಮಾನಗಳನ್ನು ವಿತರಿಸಿದರು.
ವಾರ್ಷೀಕೋತ್ಸವದಲ್ಲಿ ಚಿಣ್ಣರು ಕೂಡ ನಾವು ದೂಡ್ಡ ಮಕ್ಕಳಿಕಿಂತ್ತ ಎನೂ ಕಡಿಮೆಯಿಲ್ಲ ಎಂಬಂತ್ತೆ, ನಿರೂಪಿಸಿ ಕುಣಿದು, ಕುಪ್ಪಳಿಸಿದವು, ಮಾತ್ರವಲ್ಲದೆ ಡಜನ್ ಕಟ್ಟಲೆ ಮುದ್ದು ಮಕ್ಕಳು ಕರಾವಳಿಯ ಗಂಡು ಕಲೆ ಯಕ್ಷಗಾನದ ವೇಷ ತೊಟ್ಟು ತಾಳಕ್ಕೆ ತಕ್ಕಂತೆ ಕುಣಿದವು ಮಾತ್ರವಲ್ಲ ಚಿಣ್ಣರೇ ಸ್ವಾಗತ ಮತ್ತು ಧನ್ಯವಾದಗಳನ್ನು ಅರ್ಪಿಸಿದರು.
ಕಿಂಡರ್ ಗಾರ್ಟನ್ ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಾ ಲುವೀಸ್ ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕಿ ವೀಣಾ ವಿಜೇತರ ಮಕ್ಕಳ ಹೆಸರನ್ನು ವಾಚಿಸಿದರು. ಶಿಕ್ಷಕಿ ರಿಚೇಲ್ ಡಿಸಿಲ್ವಾ ಮುಖ್ಯ ನಿರೂಪಣಾಗಾರರಾಗಿ ಕ್ರಾರ್ಯಕ್ರಮವನ್ನು ನಡೆಸಿಕೊಟ್ಟರು.