ಕುಂದಾಪುರ, ಮಾ.27: ‘ಯಾವತ್ತೂ ನಿಮ್ಮ ಮಕ್ಕಳನ್ನು ಕೀಳಾಗಿ ಅಂದಾಜು ಮಾಡಬೇಡಿ ಎಂದು ಕುಂದಾಪುರ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊ ಹೇಳಿದರು. ಅವರು ಕುಂದಾಪುರ ಹೋಲಿ ರೋಜರಿ ಸಭಾ ಭವನದಲ್ಲಿ ಮಾ.27 ರಂದು ನೆಡೆದ ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವದ ದಿನ ಅಪ್ಪರ್ ಕೆ.ಜಿ,ಯಲ್ಲಿ ಉತಿರ್ಣರಾದ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ನೀಡಿ ಗೌರವಿಸಿ ‘ನಿಮ್ಮ ಮಕ್ಕಳು ಬುದ್ದಿವಂತರಾಗಿದ್ದಾರೆ ಅವರ ಚಟುವಟಿಕೆ ತುಂಬಾ ಚೆನ್ನಾಗಿದೆ. ನಾವು ಅವರನ್ನು ಹತ್ತಿರದಿಂದ ಗಮನಿಸುತ್ತೇವೆ. ಇಲ್ಲಿಯ ಶಿಕ್ಷರು, ಸಿಬಂದಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತಾರಲ್ಲದೆ, ಅವರನ್ನು ಆಟ ಪಾಠ ನಾಟ್ಯ ಮಾತುಗಾರಿಕೆಯಲ್ಲಿ ನಿಪುಣರನ್ನಾಗಿಸುತ್ತಾರೆ’ ಎಂದು ತಿಳಿಸಿದರು.
ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ.ಅಶ್ವಿನ್ ಆರಾನ್ನ ಶಾಲಾ ಚಟುವಟಿಕೆಯಲ್ಲಿ, ಇತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಿ ಶುಭ ಕೋರಿದರು.ರೋಜರಿ ಕಿಂಡರ್ ಗಾರ್ಟನ್ ಮುಖ್ಯೋಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ ಹೆಚ್ಚು ಅಂಕ ಪಡೆದ ವಿದ್ಯರ್ಥಿನಿಯನ್ನು ಗೌರವಿಸಿದರು. ಶಿಕ್ಷಕಿಯರಾದ ವಿನೀತಾ ಡಿಸೋಜಾ, ವೀಣಾ ಡಿಸೋಜಾ,ಸಿಬಂದಿ ಡೆಲ್ಫಿನ್ ಕೋತಾ ಉಪಸ್ಥಿತರಿದ್ದರು, ಶಿಕ್ಷಕಿ ರೀಚೆಲ್ ಡಿಸಿಲ್ವಾ ನಿರೂಪಿಸಿದರು. ಅತಿಥಿಗಳನ್ನು ವಿದ್ಯಾರ್ಥಿಗಳೆ ಸ್ವಾಗತಿಸಿ ವಂದಿಸಿದರು.