ಕುಂದಾಪುರ, ಎ.14: 1992 ರಲ್ಲಿ ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯಿಂದ ಸ್ಥಾಪಿಸಲ್ಪಟ್ಟ ರೋಜರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಸಂಸ್ಥೆ ಕೇವಲ 3 ದಶಕಗಳಲ್ಲಿ 1 ಸಾವಿರ ಕೋಟಿ ವ್ಯವಹಾರ ನಡೆಸಿದ್ದು, ಒಂದು ನೂತನ ಮೈಲಿಕಲ್ಲು ಆಗಿ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಸುಂದರ ಗರಿ ದೊರಕಿ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದ್ದು ಸಾಕ್ಶಿಯಾದಂತಾಗಿದೆ. ಈ ಮೈಲಿಕಲ್ಲು ಸೊಸೈಟಿಯ ಅಧ್ಯಕ್ಷರ, ನಿರ್ದೇಶಕರ, ಅಧಿಕಾರಿಗಳ, ಸಿಬಂದಿ ವರ್ಗದಲ್ಲಿ ಸಂಭ್ರಮ ನೆಲಸಿದೆ.
ಈ ಸಂಭ್ರಮವನ್ನು ಅಧ್ಯಕ್ಷರ, ನಿರ್ದೇಶಕರ, ಅಧಿಕಾರಿಗಳ, ಸಿಬಂದಿಯೊಂದಿಗೆ ಆಚರಿಸಲು ಎ.13 ರಂದು ಸೊಸೈಟಿಯ ಸ್ವ ಸಭಾಭವನದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಒಂದು ಕೋಟಿ ವ್ಯವಹಾರ ದಾಟಿದ ಹಿನ್ನೆಲೆಯಲ್ಲಿ ಸೊಸೈಟಿಯ ಬಗ್ಗೆ ಮಾತನಾಡಲು ಪತ್ರಕರ್ತ ಕೆ.ಸಿ.ರಾಜೇಶ್ ಅವರನ್ನು ವಿಶೇಷವಾಗಿ ಆಮಂತ್ರಿಸಲಾಗಿತ್ತು. ಅವರು ಸೊಸೈಟಿಯ ಆರಂಭ, ಬೆಳೆದು ಬಂದ ರೀತಿ ಎಳೆ ಎಳೆಯಾಗಿ ವಿವರಿಸಿದರು, ಕ್ರೈಸ್ತ ಸಮಾಜದ ಹಿರಿಯರು ಒಟ್ಟು ಸೇರಿ ಒಂದು ರೂಪಾಯಿ ಇಲ್ಲದೆ ಆರಂಭಿಸಿದ ಸಂಸ್ಥೆ, ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷ ದಿ.ಜಿ.ಎಲ್.ಡಿಲೀಮಾ, ರೋಜರಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಲ್ಫೊನ್ಸ್ ಲೋಬೊ ಮತ್ತು ಇತರ ನಿರ್ದೇಶಕರಿಂದ ಹಿಡಿದು ಉತ್ತಮವಾಗಿ ವ್ಯವಹರಿಸಿದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಅದಾಗ್ಯೂ ಕೆಲವು ವರ್ಷಗಳಿಂದ ಚುಕ್ಕಾಣಿ ಹಿಡಿದ ಸಂಸ್ಥೆಯ ಅಧ್ಯಕ್ಷರಾದ ಜೋನ್ಸನ್ ಡಿ ಆಲ್ಮೇಡಾ ಇವರ ತಂಡ ಸಂಸ್ಥೆ ಬಹು ಬೇಗನೆ ಬೆಳೆಯುವಲ್ಲಿ ದಾಪುಕಾಲು ಹಾಕಿ, ಸಂಸ್ಥೆಗಳ ಶಾಖೆಗಳ ಸಂಖ್ಯೆ ದ್ವಿಗುಣವಾಗಿ ಬೆಳೆಯುತ್ತಾ, ಇದೀಗ ಕುಂದಾಪುರ ತಾಲೂಕಿನ ಹೊರಗೆಯು ತೆರೆದುಕೊಂಡು 12 ಶಾಖೆಗಳನ್ನು ಸ್ಥಾಪಿಸಿ ಉಡುಪಿ ಜಿಲ್ಲೆಯಾದ್ಯಂತ ಸೊಸೈಟಿ ಹೆಮ್ಮರವಾಗಿ ಬೆಳೆದು ನಿಂತಿದೆ.
ಒಂದು ಕಾಲದಲ್ಲಿ ಹಣವಿಲ್ಲದೆ ಆರಂಭವಾದ ಸಂಸ್ಥೆ, ಇಂದು 1 ಸಾವಿರ ಕೋಟಿ ವ್ಯವಹಾರ ನಡೆದು, ಹೆಮ್ಮರವಾಗಿ ಬೆಳೆದು ನಿಂತಿರಬೇಕಿದ್ದರೆ ಬ್ಯಾಂಕಿನ ಅಧ್ಯಕ್ಷರ, ನಿರ್ದೇಶಕರುಗಳ, ಸಂಸ್ಥೆಯ ಅಧಿಕಾರಿಗಳ, ಸಿಬಂದಿ ವರ್ಗದವರ ತ್ಯಾಗ ಸೇವೆ ಕಾರಣವಾಗಿದೆ. ಈ ಸಂಸ್ಥೆ ಆರಂಭ ಮತ್ತು ಬೆಳವಣಿಗೆಯನ್ನು ನೋಡಿ ಇತರರಿಗೆ ಇದು ಪ್ರೇರಣೆಯಾಗಿ ಇತರರು ಅನೇಕ್ ಸೊಸೈಟಿಗಳನ್ನು ಆರಂಭಿಸಿದರು, ರೋಜರಿ ಸೊಸೈಟಿಯ ಬೆಳವಣಿಗೆಯಿಂದ ಒಂದು ಹೊಸ ಶಕೆ ಆರಂಭ ಆಯಿತು. ಅಧ್ಯಕ್ಷರ ಮತ್ತು ನಿರ್ದೇಶಕರ ಚಿಂತನೆ, ಯೋಜನೆಗಳಿಂದ ರೋಜರಿ ಸೊಸೈಟಿಯ ಬೆಳವಣಿ ಆಗಿತು ಎಂಬುದರಲ್ಲಿ ಸತ್ಯವಿದೆ, ಕೇವಲ ಚಿಂತನೆ ಯೋಜನೆಗಳಿಂದ ಸಂಸ್ಥೆಗಳ ಸಫಲವಾಗುವುದಿಲ್ಲ, ಅದನ್ನು ಅಧಿಕಾರಿ ವರ್ಗ, ಸಿಬಂದಿ ವರ್ಗ ಪ್ರಯತ್ನ ಪಟ್ಟು ಕಾರ್ಯಘತ ಮಾಡಬೇಕಿದೆ, ಇದು ಇಲ್ಲಿ ಆಗಿದೆ. ಇನ್ನೂ ಕೂಡ ಬೆಳೆಯುವಲ್ಲಿ ಆಲೋಚನೆಗಳು ಚಿಂತನೆಗಳು ಮಾಡಬೇಕಾಗಿದೆ’ ಎಂದು ಹೇಳಿ ಅವರು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು, ರೋಜರಿ ಸೊಸೈಟಿಯ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ಇವರಿಗೆ ಸದ್ಯದಲ್ಲೆ ವರ್ಗಾವಣೆ ಇರುವುದರಿಂದ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಎಲ್.ಸಿಡಿ ಟಿವಿಯನ್ನು ಕಾಣಿಕೆಯಾಗಿ ನೀಡಲಾಯಿತು. ಸೊಸೈಟಿಯ ನಿರ್ದೇಶಕ ವಿಲ್ಸನ್ ಡಿಸೋಜಾ ಫಾ|ಸ್ಟ್ಯಾನಿಯವರ ಧಾರ್ಮಿಕ ಬದುಕಿನ ಚಿತ್ರಣವನ್ನು ಮುಂದಿಟ್ಟರು.
ಸನ್ಮಾನಕ್ಕೆ ಉತ್ತರವಾಗಿ ಫಾ|ಸ್ಟ್ಯಾನಿ ತಾವ್ರೊ “ರೋಜರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಲಿ. ಕುಂದಾಪುರ, ಇಂದು ಬೆಳೆಯುತ್ತಾ, 1 ಕೋಟಿ ವ್ಯವಹಾರ ದಾಟಿ ಹೊಸ ದಾಖಲೆ ಮಾಡಿದೆ, ಇದು ರೋಜರಿ ಮಾತೆಯ ಆಶಿರ್ವಾದ ಮತ್ತು ಬ್ಯಾಂಕಿನ ಅಧ್ಯಕ್ಷರ, ನಿರ್ದೇಶಕರುಗಳ, ಸಂಸ್ಥೆಯ ಅಧಿಕಾರಿಗಳ, ಸಿಬಂದಿ ವರ್ಗದವರ ಸೇವೆ ಅದರ ಹಿಂದಿದೆ. ವಾಹನವು ಘಾಟಿಯಲ್ಲಿ ಹಲವು ಕಶ್ಟದ ತಿರುವುಗಳನ್ನು ಸಾಗಿ ತಿರುವುಗಳು ಮುಗಿದ ನಂತರ ವಾಹನವು ನಿರಾಂತಕವಾಗಿ ಸಾಗಬಹುದು, ಹಾಗೇ ಸೊಸೈಟಿ ಹಲವರು ಕಶ್ಟ ಸಾಹಸದ ನಡುವೆ, ಈಗ ಬೆಳೆದಿದೆ, ಈಗ ಸೊಸೈಟಿ ನಿರಾಂತಕವಾಗಿ ಸಾಗಿ ಇನ್ನು ಹಲವು ಸಾವಿರ ಕೋಟಿಗಳ ವ್ಯವಹಾರ ನಿರ್ಮಿಸಿ ಸಮಾಜದ ಏಳಿಗಾಗಿ ಶ್ರಮಿಸಲಿ ಎಂದು ಹರಸುತ್ತಾ, ಸನ್ಮಾನಕ್ಕೆ ಉತ್ತರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ.ಅಶ್ವಿನ್ ಆರಾನ್ನ ಶುಭ ಕೋರಿ, ಭೋಜನದ ಮೇಲೆ ಆಶಿರ್ವಾದಿಸಿದರು.
ಸಂಸ್ಥೆಯ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸ್ವಾಗತಿಸಿ ಸಂಸ್ಥೆಯ ಆಗು ಹೋಗುಗಳನ್ನು ತಿಳಿಸಿ 1 ಸಾವಿರ ಕೋಟಿ ವ್ಯವಹಾರ ದಾಟಲು ಹಿಂದಿನ ನಿರ್ದೇಶಕರು, ಮತ್ತು ಇಂದು ನನ್ನ ಜೊತೆ ಇರುವ ಎಲ್ಲಾ ನಿರ್ದೇಶಕರು, ಅಧಿಕಾರಿಗಳು ಸಿಬಂದಿ ವರ್ಗದ ಸೇವೆ ಸಹಕಾರ ಕಾರಣವಾಗಿದೆಯೆಂದು ಅವರಿಗೆ ಕ್ರತ್ಞತೆಗಳನ್ನು ಸಲ್ಲಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಕಿರಣ ಲೋಬೊ ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಶಾಂತಿ ಕರ್ವಾಲ್ಲೊ, ಶಾಂತಿ ಡಯಾಸ್, ವಿನೋದ್ ಕ್ರಾಸ್ಟೊ, ಒಝ್ಲಿನ್ ರೆಬೆಲ್ಲೊ, ಪ್ರಕಾಶ್ ಲೋಬೊ, ಮೈಕಲ್ ಪಿಂಟೊ, ಟೆರೆನ್ಸ್ ಸುವಾರಿಸ್, ಬ್ಯಾಪ್ಟಿಸ್ಟ್ ಡಾಯಾಸ್,ತೀಯೊದರ್ ಒಲಿವೆರಾ ಮತ್ತಿತರರು ಉಪಸ್ಥಿತರಿದ್ದರು.
ನಿರ್ದೇಶಕಿ ಡಾಯನಾ ಡಿಆಲ್ಮೇಡಾ ನಿರೂಪಿಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ ವಂದಿಸಿದರು.