

ಕಾರ್ಕಳ, ಮಾ. 17: 32 ವರ್ಷಗಳ ಇತಿಹಾಸ , 155 ಕೋಟಿಗೂ ಮಿಕ್ಕಿ ಠೇವಣಿ, 130 ಕೋಟಿ ಸಾಲ, 186 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿ ಸ್ಥಾಪನೆಯದ ವರ್ಷದಿಂದ ನಿರಂತರ ಡಿವಿಡೆಂಡ್ ನೀಡುತ್ತಿರುವ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇದರ 12ನೇ ಶಾಖೆಯು ಕಾರ್ಕಳದಲ್ಲಿ ದಿನಾಂಕ 17.3.2024 ರಂದು ಕಾರ್ಕಳದ ಮಿನಿವಿಧಾನಸೌಧ ರಸ್ತೆ ತಾಲೂಕು ಆಫೀಸ್ ಹತ್ತಿರ, ವಿಶಾಲ ಕಟ್ಟಡದ ನೆಲಮಹಡಿಯಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಕಾರ್ಕಳ ಅತ್ತೂರು, ಸಂತ ಲಾರೆನ್ಸ್ ಬಸಿಲಿಕಾ ರೆಕ್ಟರ್ ವಂದನೀಯ ಆಲ್ಬನ್ ಡಿಸೋಜರವರು ಉದ್ಘಾಟಿಸಿ ’ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 12ನೇ ಶಾಖೆಯ ಉದ್ಘಾಟನೆಯ ಸಮಾರಂಭಕ್ಕೆ ನಾವು ಸೇರಿಕೊಂಡಿದ್ದೇವೆ ಈ ಶುಭ ಕಾರ್ಯವನ್ನು ದೇವರಿಗೆ ಅರ್ಪಿಸಿ, ಶಾಖೆಯನ್ನು ಲೋಕಾರ್ಪಣೆ ಮಾಡುತ್ತ ಸದಾ ಈ ಶಾಖೆಗೆ ಈ ಬ್ಯಾಂಕಿಗೆ ನಮ್ಮ ಕಾಯಕ ಸಂತ ಲಾರೆನ್ಸ್ ರ ಅನುಗ್ರಹ ಮತ್ತು ಕೃಪೆ ಇರಲಿ ಎಂದು ಈ ಸಂಸ್ಥೆಗೆ ಕೋರುತ್ತಾ, ಈ ಸಂಸ್ಥೆ ಎತ್ತರನೋತ್ತರವಾಗಿ ಬೆಳಗಲಿ ಎಂದು ನಾನು ಹರಸುತ್ತೇನೆ. ಅತ್ಯುನ್ನತ ಕಾರ್ಯಕ್ರಮಗಳು ಈ ಶಾಖೆಯ ಮೂಲಕ ಆಗುತ್ತಾ ಇದೆ. ಇತ್ತೀಚಿನ ದಿನಗಳಲ್ಲಿ ವ್ಯಾಪಾರ, ವ್ಯವಹಾರ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅತ್ಯುನ್ನತ ಪರಿಭಾಷೆ, ಅತ್ಯುನ್ನತ ಅಭಿವೃದ್ಧಿ, ವೈಯಕ್ತಿಕ ಅಭಿವೃದ್ಧಿ, ಕುಟುಂಬದ ಅಭಿವೃದ್ಧಿ, ಪ್ರಾಂತ್ಯ ದೇಶದ ಅಭಿವೃದ್ಧಿ, ಈ ಬ್ಯಾಂಕಿಂಗ್ ಮೂಲಕ ಉದ್ಯಮದ ಮೂಲಕ ಆಗುತ್ತಾ ಇದೆ. ಹಣ ಇದ್ದವರು ಇಲ್ಲದವರಿಗೆ ಕೊಟ್ಟು ಸಹಕಾರ ಮಾಡುವುದು ಅಂದರೆ ಇದ್ದವರು ಡೆಪೋಜಿಟ್ ಮಾಡಿ, ಇಲ್ಲದವರು ಇಲ್ಲಿಂದ ಅದನ್ನು ಸಾಲದ ರೂಪದಲ್ಲಿ ಪಡೆದು ವ್ಯವಹಾರ ನಡೆಸಿ ನೀವು ಅಭಿವ್ರದ್ದಿ ಹೊಂದಬೇಕು. ಈ ಸಂಸ್ಥೆಯು ತವರಿತ ವೇಗದಲ್ಲಿ ದಾಪುಗಾಲು ಹಾಕುತ್ತ ಇದ್ದು, ಇಂದು ಕಾರ್ಕಳದ ಜನತೆಗೆ ಲೋಕಾರ್ಪಣೆ ಮಾಡಿದೆ, ಈ ಸಂಸ್ಥೆಗೆ ಉಜ್ವಲ ಭವಿಷ್ಯವನ್ನು ಕೋರುತ್ತಾ ರೋಜರಿ ಮಾತೆಯ ಕೃಪೆ ಸದಾ ಈ ಸಂಸ್ಥೆಯ ಮೇಲೆ ಇರಲಿ ಎಂದು ಶುಭ ಹಾರೈಸಿದರು.
ಕ್ರೈಸ್ಟ್ ದಿ ಕಿಂಗ್ ಚರ್ಚ್ ಕಾರ್ಕಳದ ವಂದನೀಯ ಕ್ಲೈಮೆಂಟ್ ಮಸ್ಕರೇನ್ಹಸ್ ಇವರು ಶಾಖೆಯನ್ನು ಆಶೀರ್ವದಿಸಿ ’ಧನ ಇರುವುದು, ಅದು ಉಪಯೋಗಕ್ಕಾಗಿ, ಕೂಡಿಸಿಟ್ಟು ಒಳಗಿಟ್ಟರೆ ಅದು ನಡೆಯುವುದಿಲ್ಲ ಚಲಾವಣೆ ಆಗಬೇಕು ಧನವನ್ನು ಹಂಚಿ ಎಲ್ಲರಿಗೂ ಉಪಕಾರ ಆದರೆ ಅದಕ್ಕೆ ಹಣ ಎಂದು ಹೆಸರು ಕೊಡಬಹುದು ಇಲ್ಲದಿದ್ದರೆ ಹಣಕ್ಕೆ ಏನು ಬೆಲೆಯೂ ಇಲ್ಲ ಅದಕ್ಕೆ ಬೆಲೆ ಕೊಡುಬೆಕು, ನೀವು, ಸಮಾಜದ ಪರಿವರ್ತನೆಗಾಗಿ, ಒಳಿತಿಗಾಗಿ ಇದು ಸದಾ ನೀವು ವ್ಯಯಿಸಿ ಅಂತ ಹಾರೈಸಿ ಭಗವಂತನ ಆಶೀರ್ವಾದ ಸದಾ ನಿಮ್ಮೆಲ್ಲರಲ್ಲಿ ಇರಲಿ ಎಲ್ಲರಿಗೂ ಒಳಿತನ್ನು ಕೋರುತ್ತೇನೆ’ ಎಂದು ಶುಭ ಹಾರೈಸಿದರು.
ಶಾಖೆಯ ಭದ್ರತಾ ಕೊಠಡಿಯನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಥಾಮಸ್ ಮಸ್ಕರೇನಸ್ ಉದ್ಘಾಟಿಸಿದರು. ಗಣಕಯಂತ್ರವನ್ನು ಕ್ರೈಸ್ಟ್ ದ ಕಿಂಗ್ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ನೇವಿಲ್ ಡಿಸಿಲ್ವರವರು ಉದ್ಘಾಟಿಸಿ,
ಈ ಪರಿಸರದಲ್ಲಿ ರೋಜರಿ ಸೊಸೈಟಿಯ 12 ನೇಯ ಶಾಖೆಯಾಗಿದೆ ಇದು ನಮಗೆ ಬಹಳ ಹೆಮ್ಮೆಯ ವಿಷಯ ಇದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ನಾವೆಲ್ಲರೂ ಸೇರಿ ಈ ಸಂಸ್ಥೆಗೆ ಉತ್ತಮ ವ್ಯವಹಾರವನ್ನು ನೀಡಿ ಉನ್ನತ ಮಟ್ಟಕ್ಕೆ ಏರಲು ಕೈ ಜೋಡಿಸೋಣ’ ಎಂದು ಸಂಸ್ಥೆಗೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷರಾದ ಶ್ರೀಯುತ ಜೋನ್ಸನ್ ಡಿ ‘ ಅಲ್ಮೇಡಾ ರವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ಕಿರಣ್ ಮೇಲ್ವಿನ್ ಲೋಬೋ ಅತಿಥಿಗಳನ್ನು ಗೌರವಿಸಿದರು.ಸಂಘದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶ್ರೀಮತಿ ಮೇಬಲ್ ಡಿಆಲ್ಮೇಡಾ, ನಿರ್ದೇಶಕರಾದ ಶ್ರೀ ಫಿಲಿಪ್ ಡಿ’ಕೋಸ್ತಾ , ಶ್ರೀ ವಿಲ್ಸನ್ ಡಿ’ ಸೋಜಾ, ಶ್ರೀ ಪ್ರಕಾಶ್ ಲೋಬೋ, ಶ್ರೀ ಒಜ್ಲಿನ್ ರೆಬೆಲ್ಲೊ, ಶ್ರೀ ಟೆರೆನ್ಸ್ ಸುವಾರಿಸ್, ಶ್ರೀ ಮೈಕಲ್ ಪಿಂಟೋ, ಶ್ರೀಮತಿ ಡಯಾನ ಅಲ್ಮೇಡಾ, ಶ್ರೀಮತಿ ಶಾಂತಿ ಡಾಯಸ್ ಉಪಸ್ಥಿತರಿದ್ದರು. ಶಾಖಾ ಸಭಾಪತಿ ಶ್ರೀ ಓಜ್ವಾಲ್ಡ್ ಸಂತೋಷ್ ಡಿ’ಸಿಲ್ವ ವಂದಿಸಿದರು. ಶ್ರೀ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.



















