

ಉಡುಪಿ,ಮಾ.10: 1992ರಲ್ಲಿ ಸ್ಥಾಪನೆಯಾದ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇದರ 11ನೇ ಶಾಖೆಯು ಉಡುಪಿಯಲ್ಲಿ ದಿನಾಂಕ 10.03-2024 ರಂದು ಬೆಳಿಗ್ಗೆ ಗಂಟೆ 8:15ಕ್ಕೆ ಉಡುಪಿಯ ಸೂಪರ್ ಬಜಾರ್ , ಮೊದಲ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಉಡುಪಿಯ ಶೋಕಾ ಮಾತಾ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ಅತೀ ವಂದನೀಯ ಚಾರ್ಲ್ಸ್. ಮೀನೆಜಸ್ ಉದ್ಘಾಟಿಸಿ ಶಾಖೆಯನ್ನು ಆಶೀರ್ವದಿಸಿದರು. ಭದ್ರತಾ ಕೊಠಡಿ ಉದ್ಘಾಟನೆಯನ್ನು ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಯುತ ಅರುಣ್ ಕುಮಾರ್ ಎಸ್ . ವಿ. ಉದ್ಘಾಟಿಸಿದರು.
ಗಣಕಯಂತ್ರವನ್ನು ಶ್ರೀ ಆಲ್ವಿನ್ ಪಿಂಟೋ, ಉದ್ಯಮಿ ಇಂದ್ರಾಳಿ, ಉಡುಪಿ ಉದ್ಘಾಟಿಸಿದರು.ಸಭಾ ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿಗಳಿಂದ ಪ್ರಾರ್ಥನೆ ನಂತರ ಸಂಘದ ಅಧ್ಯಕ್ಷ ಶ್ರೀ ಜೋನ್ಸನ್ ಡಿ ‘ ಆಲ್ಮೇಡಾ ಸ್ವಾಗತ ಭಾಷಣ ಮಾಡಿ ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು , ಅತಿಥಿಗಳನ್ನು, ಸದಸ್ಯರನ್ನು, ಗ್ರಾಹಕರನ್ನು ಹಿತ ಚಿಂತಕರನ್ನು , ಸಂಘದ ನಿರ್ದೇಶಕರುಗಳನ್ನು, ಸಿಬ್ಬಂದಿ ವರ್ಗದವರನ್ನು ಸ್ವಾಗತಿಸಿದರು.
ಸಂಘದ ಉಪಾಧ್ಯಕ್ಷರಾದ ಶ್ರೀ ಕಿರಣ್ ಮೇಲ್ವಿನ್ ಲೋಬೋ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಉಡುಪಿಯ ಶೋಕಾ ಮಾತಾ ದೇವಾಲಯದ ಉಪಾಧ್ಯಕ್ಷರಾದ ಶ್ರೀ ಮ್ಯಾಕ್ಸಿಮ್ ಡಿ’ ಸೋಜಾ ಮಾತನಾಡಿ, ಉಡುಪಿಯಲ್ಲಿ ರೋಜರಿ ಸೊಸೈಟಿ ಉದ್ಘಾಟನೆಗೊಂಡದ್ದು ನಮಗೆಲ್ಲರಿಗೂ ಬಹಳ ಸಂತಸ ತಂದಿದೆ. ಈ ಸಂಸ್ಥೆಯು 32 ವರ್ಷಗಳ ಹಿಂದೆ ಕುಂದಾಪುರದಲ್ಲಿ ಪುಟ್ಟ ಒಂದು ಬೀಜ ಬಿತ್ತಿದ್ದು ಇಂದು ಅದು ಹೆಮ್ಮರವಾಗಿ ಬೆಳೆದಿದೆ. ಮುಂದೆ ಇದರ ಕೊಂಬೆಗಳು ಇಡೀ ರಾಜ್ಯಕ್ಕೆ ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ಕುಂದಾಪುರದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಶ್ರೀ ಅರುಣ್ ಕುಮಾರ್ ಎಸ್ . ವಿ. ಇವರು ಸಂಘವು ಬೆಳೆದು ಬಂದ ರೀತಿ ಸಂಘದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು ಸಂಘದಲ್ಲಿ ಯುವ ನಿರ್ದೇಶಕರುಗಳಿದ್ದು ಬಹಳ ಮುತುವರ್ಜಿಯಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ ಹಾಗೆಯೇ ಎಲ್ಲಾ ನೌಕರ ವೃಂದದವರು ಸಹ ಸಾಲ ವಸೂಲಾತಿಯಲ್ಲಿ ಕಚೇರಿ ಸಮಯವನ್ನು ಲೆಕ್ಕಿಸದೆ ಹೆಚ್ಚು ಹೊತ್ತು ತಮ್ಮ ಸೇವೆಯನ್ನು ನೀಡುತ್ತಿದ್ದಾರೆ ನಿಜಕ್ಕೂ ಈ ಸಂಸ್ಥೆ ಬಹಳ ಮುಂಚೂಣಿಯಲ್ಲಿ ನಡೆಯುತ್ತಿದೆ ಇದನ್ನು ನಾನು ಕಣ್ಣಾರೆ ನೋಡುತ್ತಿದ್ದೇನೆ ಎಂದು ಹೊಸ ಶಾಖೆಗೆ ಶುಭ ಹಾರೈಸಿದರು.
ಸಂಘದ ಸಲಹಾ ದಾರರಾದ ಕುಂದಾಪುರ ವಲಯದ ಪ್ರಧಾನ ಧರ್ಮ ಗುರುಗಳು ಅತೀ ವಂದನೀಯ ಸ್ಟ್ಯಾನಿ ತಾವ್ರೋ ರವರು ಸಂಘವು ಉನ್ನತ ಮಟ್ಟಕ್ಕೆ ಅಭಿವೃದ್ಧಿಪಥದಲ್ಲಿ ಸಾಗಲಿ ಎಂದು ಶುಭಕಾಮನೆಗಳನ್ನು ರವಾನಿಸಿದ್ದರು. ಶಾಖೆಯನ್ನು ಉದ್ಘಾಟಿಸಿದ ಉಡುಪಿ ಶೋಕಾ ಮಾತಾ ದೇವಾಲಯದ ಅತೀ ವಂದನೀಯ ಚಾರ್ಲ್ಸ್ ಮೀನೆಜಸ್ ಮಾತನಾಡಿ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖೆಯು ಉಡುಪಿಯ ಸೂಕ್ತ ಸ್ಥಳದಲ್ಲಿ ಉದ್ಘಾಟನೆಗೊಂಡಿದೆ ಇಲ್ಲಿ ವ್ಯವಹಾರಕ್ಕೆ ಯಾವುದೇ ತೊಂದರೆ ಇಲ್ಲ ಖಂಡಿತವಾಗಿಯೂ ಇದು ಒಂದು ದಿನ ಉನ್ನತ ಮಟ್ಟಕ್ಕೆ ಏರುವುದು ಖಚಿತ ಎಂದು ಶುಭ ಹಾರೈಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶ್ರೀಮತಿ ಮೇಬಲ್ ಡಿಆಲ್ಮೇಡಾ, ನಿರ್ದೇಶಕರಾದ ಶ್ರೀ ಫಿಲಿಪ್ ಡಿ’ ಕೋಸ್ಟ, ಶ್ರೀ ವಿನೋದ್ ಕ್ರಾಸ್ಟೋ, ಶ್ರೀ ಪ್ರಕಾಶ್ ಲೋಬೋ, ಶ್ರೀ ವಿಲ್ಸನ್ ಡಿ ‘ಸೋಜ, ಶ್ರೀ ಸಂತೋಷ್ ಓಜ್ವೊಲ್ಡ್ ಡಿ ‘ ಸಿಲ್ವಾ, ಶ್ರೀ ಬ್ಯಾಪ್ಟಿಸ್ಟ್ ಡಾಯಾಸ್, ಶ್ರೀ ಡೇರಿಕ್ ಡಿ ‘ಸೋಜ, ಶ್ರೀ ಮೈಕಲ್ ಪಿಂಟೋ, ಶ್ರೀ ಓಜ್ಲಿನ್ ರೆಬೆಲ್ಲೋ, ಶ್ರೀಮತಿ ಡಯಾನಾ ಅಲ್ಮೇಡ , ಶ್ರೀಮತಿ ಶಾಂತಿ ಕರ್ವಾಲ್ಲೊ ಉಪಸ್ಥಿತರಿದ್ದರು ಶಾಖೆಯ ಶಾಖಾ ಸಭಾಪತಿ ಶ್ರೀ ಟೆರೆನ್ಸ್ ಸುವಾರಿಸ್ ವಂದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.



























