ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಪ್ರಧಾನ ಕಛೇರಿಯಲ್ಲಿ ರೋಜರಿ ಸಭಾ ಭವನ ಉದ್ಘಾಟನೆ – ಸಂಸ್ಥಾಪಕರ ದಿನಾಚರಣೆ

ಕುಂದಾಪುರ, ಡಿ.11: ಹೆಸರಾಂತ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆ ತನ್ನ 31 ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಕುಂದಾಪುರದ ಪ್ರಧಾನ ಕಛೇರಿಯ ಕಟ್ಟಡದಲ್ಲಿ ಸುಸಜ್ಜಿತ ನಿರ್ಮಿಸಲ್ಪಟ್ಟ ರೋಜರಿ ಸಭಾಭವನ ಉದ್ಘಾಟನ ಕಾರ್ಯಕ್ರಮ ಮತ್ತು ಸಂಸ್ಥಾಪಕರ ದಿನವನ್ನು ನೂತನ ಸಭಾಭವನದಲ್ಲಿ ಆಚರಿಸಲಾಯಿತು.
ನೂತನ ಸಭಾಭವನವನ್ನು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಇದರ ಅಧ್ಯಕ್ಷ ಜೊನ್ಸನ್ ಡಿ ಆಲ್ಮೇಡಾ ಉದ್ಘಾಟಿಸಿ “ನಮ್ಮ ಸಂಸ್ಥೆಯ ಹಲವಾರು ಯೋಜನೆಗಳಲ್ಲಿ ಈ ಸಭಾಭವನದ ಕನಸು ಒಂದಾಗಿತ್ತು, ಕಡಿಮೆ ಖರ್ಚಿನಲ್ಲಿ ಉತ್ತಮ ರೀತಿಯಲ್ಲಿ ಇದನ್ನು ನಿರ್ಮಿಸಿದ್ದೇವೆ, ಜೊತೆಗೆ ನಾವು ಇಂದು ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸುತಿದ್ದೇವೆ. ಇದು ಕೂಡ ನಮ್ಮ ಬಹಳ ದಿನಗಳ ಆಶೆಯಾಗಿತ್ತು, ಯಾಕೆಂದರೆ, ನಮ್ಮ ಹಿರಿಯರು ಬಹಳ ಒತ್ತಾಸೆಯಿಂದ ನಮ್ಮ ಹಿತಕ್ಕಾಗಿ ಸ್ಥಾಪಿಸಲ್ಪಟ್ಟ ಸೊಸೈಟಿಯಾಗಿದ್ದು. ಅವರೆಲ್ಲಾ ಈ ಸಂಸ್ಥೆಗೆ ನಿಸ್ವಾರ್ಥದಿಂದ ಸೇವೆ ನೀಡಿದ್ದಾರೆ,ಅವರ ನೆಟ್ಟ ಗೀಡ ಇಂದು ಹೆಮ್ಮರವಾಗಿ ಬೆಳೆದಿದೆ, ಅವರನೆಲ್ಲಾ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ ಎನ್ನುತ್ತಾ, ಬ್ಯಾಂಕಿನ ಏಳಿಗೆಯ ಜೊತೆ ನಮ್ಮ ಸಂಸ್ಥೆಯ ಸದಸ್ಯರ ಮಕ್ಕಳಿಗೆ ಕಡಿಮೆ ದರದಲ್ಲಿ ಶಿಕ್ಷಣಕ್ಕೆ ಸಾಲ ಕೊಡುವ ಯೋಜನಯನ್ನು ಜ್ಯಾರಿಗೊಳಿಸಿದ್ದೇವೆ, ಇದರ ಪ್ರಯೋಜನವನ್ನು ಸದಸ್ಯರು ಸದುಪಯೋಗವನ್ನು ಸದಸ್ಯರು ಪಡಿಸಿಕೊಳ್ಳಬೇಕೆಂದು” ಅವರು ತಿಳಿಸಿದರು.
ದೀಪ ಬೆಳಗಿಸಿ ಆಶಿರ್ವಚನ ಮಾಡಿದ ಸಂಸ್ಥೆಯ ಅಧ್ಯಾತ್ಮಿಕ ನಿರ್ದೇಶಕ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಂಸ್ಥೆ ವಿಶ್ವಾಸ, ಪ್ರಮಾಣಿಕತೆಯಿಂದ ಸೇವೆ ನೀಡಿದ್ದರಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ, ಇದರ ಯಶಸ್ಸಿ ಹಿಂದೆ ಸಂಸ್ಥಾಪಕರು, ನಿರ್ದೇಶಕರು ಮತ್ತು ಸಿಬಂದಿ ವರ್ಗ ಕಾರ್ಯಕ್ಷಮತೆ ಇದೆ, ಆದರೆ ರೋಜರಿ ಅಮ್ಮನವರ ಆಶಿರ್ವಾದದಿಂದ ಸ್ಥಾಪನೆಯಾದ ಈ ಸಂಸ್ಥೆಯ ಸಂಸ್ಥಾಪಕಿ ರೋಜರಿ ಮಾತೆಯೆ ಆಗಿದ್ದಾರೆ ಎಂದು ತಿಳಿಸಿ, ಅವರು ಇನ್ನೂ ಹೆಚ್ಚಿನದನ್ನು ಆಶಿರ್ವದಿಸಲಿ” ಎಂದು ಹರಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಬ್ರಹ್ಮಾವರ ಇದರ ಅಧ್ಯಕ್ಷರಾದ ವಲೇರಿಯನ್ ಮಿನೇಜಸ್ “ಸಹಕಾರಿ ಸಂಘ ಅಂದರೆ ಒಂದೊ ಅಟೋ ರಿಕ್ಷಾ ಇದ್ದಂತೆ, ಅದರ ಮುಂದಿನ ಚಕ್ರ ಸದಸ್ಯರು ಹಿಂದಿನ ಎರಡು ಚಕ್ರಗಳಲ್ಲಿ ಒಂದು ನಿರ್ದೇಶಕರು ಮತ್ತೊಂದು ಸಿಬಂದಿ, ಈ ಮೂವರು ಸಮಾನವಾಗಿ ನಡೆದರೆ, ಸಂಘ ಸುರಕ್ಷಿತವಾಗಿರುವುದು, ಸಂಘಕ್ಕೆ ಕಟ್ಟಡ, ಬ್ರಾಂಚುಗಳು, ಕೋಟಿಕಟ್ಟಲೆ ವ್ಯವಹಾರ ಮುಖ್ಯವಲ್ಲ, ಸಂಘದ ಸದಸ್ಯರ್ ಹಿತದ್ರಷ್ಟಿ ಮುಖ್ಯ ಸದಸ್ಯರಿಗೆ ಉಪಯೋಗ ಆಗುವಂತಹ ಯೋಜನೆಗಳಿರಬೇಕು, ಇಂತಹ ಸಹಕಾರಿ ಸಂಘಗಳು ಸೇರಿಕೊಂಡು ಒಂದು ಒಕ್ಕೂಟ ಆದರೆ ಉತ್ತಮ, ಎಲರೂ ಸೇರಿ ಉಪಯುಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಪಡೆದು, ಸಹಕಾರಿ ಸಂಸ್ಥೆಗಳು ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಸಬಹುದು” ಎಂದು ಅಭಿಪ್ರಾಯ ಪಟ್ಟರು.
ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಫಿಲಿಫ್ ಡಿಕೋಸ್ತಾ ರೋಜರಿ ಕ್ರೆಡಿಟ್ ಸಂಸ್ಥೆ ನಡೆದು ಬಂದ ನೋಟವನ್ನು ಸಭೆಯ ಮುಂದಿಟ್ಟರು.
ಈ ಸಂದರ್ಭದಲ್ಲಿ ಈ ಸಹಕಾರಿ ಸಂಘದ ಕನಸು ಕಂಡ ಸ್ಥಾಪಕ ಅಧ್ಯಕ್ಷರಾದ ಪಡುಕೋಣೆಯ ಆಲ್ಫೊನ್ಸ್ ಲೋಬೊ (ದಿವಂಗತ) ಅವರ ಪರವಾಗಿ ಅವರ ಪುತ್ರ ನವೀನ್ ಲೋಬೊ, ನಂತರ ಅಧ್ಯಕ್ಷರಾದ ಬೇಸಿಲ್ ಡಿಸೋಜಾ, ದಿವಗಂತ ಮಾರ್ಟಿನ್ ಡಾಯಸ್ ಪರವಾಗಿ ಅವರ ಪತ್ನಿ ಶಾಂತಿ ಡಾಯಸ್, ಫಿಲಿಫ್ ಡಿಕೋಸ್ತಾ, ಎ.ಜೆ ಬುತೆಲ್ಲೊ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಎಲ್ಲಾ ಮಾಜಿ ನಿರ್ದೇಶಕರನ್ನು ಸನ್ಮಾನಿಸಲಾಯಿತು, ಈ ಕಾರ್ಯಕ್ರಮವನ್ನು ಹಾಲಿ ನಿರ್ದೇಶಕಿ ಡಯಾನಾ ಡಿಆಲ್ಮೇಡಾ ನೇರವೆರಿಸಿದರು. ಎಲ್ಲಾ ಹಾಲಿ ನಿದೇಶಕರನ್ನು ಕೂಡ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಹಾಲಿ ನಿರ್ದೇಶಕಿ ಶಾಂತಿ ಆರ್. ಕರ್ವಾಲ್ಲೊ ನಡೆಸಿಕೊಟ್ಟರು. ಸುಧಿರ್ಘ ಸೇವೆ ನೀಡಿ ದಿವಂಗತ ಮುಖ್ಯ ನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾರ ಪರವಾಗಿ ಅವರ ಪತ್ನಿ ವಿನೀತಾ ಡಿಸೋಜಾರನ್ನು ಸನ್ಮಾನಿಸಲಾಯಿತು. ಸಭಾಭವನ ನಿರ್ಮಿಸುವಲ್ಲಿ ಸಹಕಾರ ನೀಡಿದ ಎಂಜಿನಿಯರ್ ಮತ್ತು ಇತರರಿಗೆ ಗುರುತಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ಸ್ವಾಗತಿಸಿದರು, ಮುಖ್ಯ ನಿರ್ವಹಣಾಧಿಕಾರಿ ಮೇಬಲ್ ಡಿಆಲ್ಮೇಡಾ ವಂದಿಸಿದರು. ನಿರ್ದೇಶಕ ವಿನೋದ್ ಕ್ರಾಸ್ಟೊ ನಿರೂಪಿಸಿದರು.