ತಲ್ಲೂರಿನಲ್ಲಿ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ನ 9 ನೇ ಶಾಖೆಯ ಶುಭಾರಂಭ


ಕುಂದಾಪುರ, ಸೆ.24: ಬೆಳೆಯುವಲ್ಲಿ ದಾಪುಕಾಲು ಹಾಕುತ್ತೀರುವ ಕುಂದಾಪುರದ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದಕ್ಕೆ ಈಗಾಗಲೇ 8 ಶಾಖೆಗಳು ಇದ್ದು, ಇದೀಗ ತಲ್ಲೂರಿನಲ್ಲಿ 9 ನೇ ಶಾಖೆಯ ಶುಭಾರಂಭಗೊಂಡಿದೆ.
ತಲ್ಲೂರು ಪೇಟೆ ಸಮೀಪದಲ್ಲಿ ಉಪ್ಪಿನಕುದ್ರು ರಸ್ತೆಯಲ್ಲಿರುವ “ಡೆಜಾನ್ ಕಾಂಪ್ಲೆಕ್ಸ್” ಸೆ.24 ರಂದು ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಇವರು ತಮ್ಮ ಶುಭಹಸ್ತದಲ್ಲಿ ಉದ್ಘಾಟಿಸಿ,ಉದ್ಘಾಟಿಸಿ ಅತಿಥಿಗಳ ಜೊತೆ ದೀಪ ಬೆಳಗಿಸಿ, ಪ್ರಾರ್ಥನೆ ನೆಡಸಿಕೊಟ್ಟು ಆಶಿರ್ವಚನ ಮಾಡಿದರು. ತಲ್ಲೂರು ಚರ್ಚಿನ ಧರ್ಮಗುರು ವಂ|ಎಡ್ವಿನ್ ಡಿಸೋಜಾ ಜೊತೆಗಿದ್ದು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ವಹಿಸಿ ‘ಕಥೊಲಿಕ್ ಸಭಾ ಸಂಘಟನೇಯ ಮೂಲಕ ನಮ್ಮ ಹಿರಿಯರು, ಬಹಳ ದೂರ ದ್ರಷ್ಟಿ ಇಟ್ಟುಕೊಂಡು ಸೊಸೈಟಿಯ ಸಣ್ಣ ಬೀಜವನ್ನು ಬಿತ್ತಿದ್ದರು, ಅದೀಗ ಅದು ಹೆಮ್ಮರವಾಗಿ ಬೆಳೆಯುತ್ತೀದೆ. ಇದು ಬೆಳೆಯಬೇಕಾದರೆ ನಿರಂತರವಾಗಿ ಶ್ರಮಿಸುತ್ತೀರುವ ನಿರ್ದೇಶಕರು, ಹಾಗೇ ಸೇವೆ ಸಲ್ಲಿಸುತ್ತೀರುವ ಕಾರ್ಯ ನಿರ್ವಹಣ ಅಧಿಕಾರಿಗಳು, ಸಿಬಂಧಿ ವರ್ಗ. ಹಾಗೇ ನಮ್ಮ ಸದಸ್ಯರು ಮತ್ತು ಗ್ರಾಹಕರು ಕೂಡ ಕಾರಣರಗಿದ್ದಾರೆ. ತಲ್ಲೂರಿನಲ್ಲಿ ಹಲವಾರು ಕೋ.ಆಪರೇಟಿವ್ ಸೊಸೈಟಿಗಳು ಇವೆ, ನಮ್ಮ ಸೊಸೈಟಿ ಉತ್ತಮ ಸೇವೆ ನೀಡುವ ಸಂಸ್ಥೆಯಾಗಿದ್ದು ಇಲ್ಲಿ ನಮಗೆ ಒಳಿತಾಗುವುದೆಂಬ ಆಶಯ ಇದೆ’ ಎಂದು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ ಅತಿಥಿಗಳಿಗೆ ಪುಷ್ಪಗಳನ್ನು ನೀಡಿ ಸ್ವಾಗತಿಸಿದರು.
ಭದ್ರತಾ ಕೊಠಡಿ ಉದ್ಘಾಟನೆ ಮಾಡಿದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ‘ರೋಜರಿ ಸೊಸೈಟಿ ಉತ್ತಮ ಪ್ರಗತಿಯಲ್ಲಿದೆ, ಎಲ್ಲಿ ನಿರ್ದೇಶಕರು ಮತ್ತು ಸಿಬಂದಿ ವರ್ಗವು ಜೊತೆಜೊತೆಯಾಗಿ ಸಹಕರಿಸುತ್ತಾ, ಶ್ರಮಿಸುತ್ತಾರೋ ಆ ಸೊಸೈಟಿ ಪ್ರಗತಿ ಕಾಣುತ್ತದೆ, ಹಾಗಾಗಿ ಇಂದು ರೋಜರಿ ಸೊಸೈಟಿ ಈ ಸಂಸ್ಥೆ ಪ್ರಗತಿ ಕಂಡಿದೆ’ ಎಂದು ಶುಭ ಕೋರಿದರು.ಮುಖ್ಯ ಅತಿಥಿಗಳಾದ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರೀಶ್ ಎಸ್.ನಾಯ್ಕ್ ‘ರೋಜರಿ ಸೊಸೈಟಿ ನಮ್ಮ ತಲ್ಲೂರಿನಲ್ಲಿ ಶುಭಾರಂಭಗೊಡಿದೆ, ನಾವು ಇದರ ಸದುಪಯೋಗ ಪಡಿಸಿಕೂಳ್ಳಬೇಕು, ಸಾಲ ಪಡೆದದ್ದು ಸರಿಯಾಗಿ ಮರಳಿಸಿದರೆ, ತನ್ನಿಂದ ತಾನೆ ನಾವು ಹಣವಂತಾಗಗಬಹುದು’ ಎಂದು ತಮ್ಮ ಅನುಭವನ್ನು ಹಂಸಿಕೊಂಡರು. ತಲ್ಲೂರು ಗ್ರಾಮಪಂಚಾಯತ್ ಸದಸ್ಯೆಯಾದ ಜೂಡಿತ್ ಮೆಂಡೊನ್ಸಾ ‘ನಮ್ಮ ಭಾರತದ ಆರ್ಥಿಕ ಸ್ತಿತಿ ಕೆಡದಿರಲೂ, ನಮ್ಮ ಭಾರತದ ಸ್ವಾಭಾವಿಕ ಗುಣವಾದ ಉಳಿತಾಯದ ಕ್ರಮದಿಂದ ಕಾರಣ, ಉಳಿಸುವ ಗುಣ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿದೆ, ಅದರಲ್ಲಿ ನಮ್ಮ ಹೆಂಗಸರು ಮುಂದು’ ಎಂದು ತಿಳಿಸಿದರು.

ಉದ್ಘಾಟಕರಾದ ಅ|ವಂ||ಸ್ಟ್ಯಾನಿ ತಾವ್ರೊ ಮಾತನಾಡಿ ‘ರೋಜರಿ ಸೊಸೈಟಿ ಬೆಳೆದು ಹೆಮ್ಮರವಾಗಿದೆ, ಇದಕ್ಕೆ ಕಾರಣ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ, ಇವರ ಉತ್ತಮ ಗುಣ ಮಟ್ಟದ ಸೇವೆ ಮತ್ತು ಶ್ರಮ. ಇವತ್ತು 9 ನೇ ಶಾಖೆ ಉದ್ಘಾಟನೆಗೊಂಡಿದೆ ಮುಂದೆ ಹಲವಾರು ಶಾಖೆಗಳು ಶುಭಾರಂಭಗೊಳ್ಳಲಿವೆ ಇದು ರೋಜರಿ ಸೊಸೈಟಿಯ ಬೆಳವಣಿಗೆಯ ನೋಟವಾಗಿದೆ. ರೋಜರಿ ಸೊಸೈಟಿ ಬರೆ ಆರ್ಥಿಕ ಪ್ರಗತಿಯನ್ನು ಮಾತ್ರ ಗುರಿಯನ್ನಾಗಿಸದೆ, ಜೊತೆಗೆ ಸಮಾಜಕ್ಕೆ ಒಳಿತಾಗುವ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ, ಸಿಬಂದಿಯವರ ಮಕ್ಕಳ ಶಿಕ್ಷಣಕ್ಕೆ ಯೋಜನೆ, ಸದಸ್ಯರ ಮಕ್ಕಳ್ಳಿಳಿಗೆ ವಿದ್ಯಾರ್ಥಿ ವೇತನ ನೀಡುವಿಕೆ, ವಿಧ್ಯಾಬಾಸಕಾಗಿ ಸುಲಭ ಸಾಲದ ಯೋಜನೆ ಹೀಗೆ ಹಲವಾರು ಯೋಜನೆಗಳಿಂದ ಸಮಾಜಕ್ಕೆ ಒಳಿತನ್ನು ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೀದೆ, ಈ ಸೊಸೈಟಿಗೆ ಇಲ್ಲಿಯೂ ಒಳಿತಾಗಲಿ’ ಎಂದು ಹರಸಿದರು.


ತಲ್ಲೂರು ಶಾಖೆಯ ಸಭಾಪತಿ ಓಜ್ಲಿನ್ ರೆಬೆಲ್ಲೊ, ನಿರ್ದೇಶಕರಾದ ಪಿಲಿಫ್ ಡಿಕೋಸ್ತಾ, ವಿನೋದ್ ಕ್ರಾಸ್ಟೊ, ಪ್ರಕಾಶ್ ಲೋಬೊ, ವಿಲ್ಪ್ರರೆಡ್ ಮಿನೆಜೆಸ್, ಡಯಾನ ಡಿಆಲ್ಮೇಡಾ, ಶಾಂತಿ ಡಯಾಸ್ ಮುಂತಾದವರು ಉಪಸ್ಥಿತರಿದ್ದರು. ಸೊಸೈಟಿಯ ಉಪಾಧ್ಯಕ್ಷ ಕಿರಣ್ ಲೋಬೊ ವಂದಿಸಿದರು ನಿರ್ದೇಶಕಿ ಶಾಂತಿ ಆರ್. ಕರ್ವಾಲ್ಲೊ ನಿರೂಪಿಸಿದರು.