JANANUDI.COM NETWORK
ಕುಂದಾಪುರ. ನ.28: ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ 30 ನೇ ಸಾಮಾನ್ಯ ಸಭೆ ಲಕ್ಷ್ಮಿ ನಾರಯಣ ಕಲಾಮಂದಿರದಲ್ಲಿ ನ.28 ರಂದು ಭಾನುವಾರ ನಡೆಯಿತು. ಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸಂಘದ ಸದಸ್ಯರಿಗೆ ಶೇಕಡ 18 ಡಿವಿಡೆಂಡ್ ಘೋಶಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ‘ನಮ್ಮ ಸೊಸೈಟಿ ಹಿಂದಿನ ನಿರ್ದೇಶಕರು, ಇಂದಿನ ನಿರ್ದೇಶಕರು ಮತ್ತು ಸಿಬಂದ್ದಿ ವರ್ಗದವರ ಶ್ರಮದಿಂದ ಸಂಘ ಉತ್ತಮ ಪ್ರಗತಿ ಸಾಧಿಸಿದೆ. ಕೊರೊನಾ ವಿಪತ್ತಿನ ಕಾಲದಲ್ಲಿಯೂ, ನಾವು ಅಭಿವ್ರದ್ದಿ ಸಾಧಿಸಿದ್ದೇವೆ.
ಸಂಘವು ಕೊನೆಗೊಂಡ ವರ್ಷದಲ್ಲಿ ಒಟ್ಟಾರೆ 337 ಕೋಟಿ ವ್ಯವಹಾರ ನಡೆಸಿ, ಪ್ರಸ್ತುತ ಸುಮಾರು 114 ಕೋಟಿ ಠೇವಣಿ ಇದ್ದು 92 ಕೋಟಿ ಮುಗಂಡ ನೀಡಿದ್ದು, ದುಡಿಯುವ ಬಂಡವಾಳ 121 ಕೋಟಿ ಇದ್ದು ಸುಮಾರು 96 ಲಕ್ಷ ರೂ. ಲಾಭ ಗಳಿಸಿದೆ – ಜೋನ್ಸನ್ ಡಿಆಲ್ಮೇಡಾ
ಈಗಾಗಲೇ ನಮ್ಮ ಸೊಸೈಟಿಯ ಹಲವಾರು ಶಾಖೆಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ಬೈಂದೂರಿನಲ್ಲಿ ಮುಂದಿನ ತಿಂಗಳು ಸ್ವಂತ ಕಟ್ಟಡ ಸಿದ್ದವಾಗುತ್ತದೆ. ಮುಂದೆ ಕೋಟೆಶ್ವರ – ಹಂಗಳೂರು ಶಾಖೆಗೂ ಸ್ವಂತ ಕಟ್ಟಡ ನಿರ್ಮಿಸಗುವುದು ಎಂದು ತಿಳಿಸುತ್ತಾ ಸಿಬ್ಬಂದಿ ಕ್ಷೇಮ ನಿಧಿ, ಸಹಕಾರಿ ಶಿಕ್ಷಣ ನಿಧಿ ಇಂತ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ” ಎಂದು ತಿಳಿಸಿ ಲಾಭ ವಿಂಗಡನೆಯನ್ನು ವಿವರಿಸಿದರು.
ಸೊಸೈಟಿಯ ಮುಖ್ಯ ಸಲಹದಾರದಾದ ಕುಂದಾಪುರ ವಲಯ ಪ್ರಧಾನರಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂ| ಸ್ಟ್ಯಾನಿ ತಾವ್ರೊ ‘ರೋಜರಿ ಸೊಸೈಟಿ ಒಂದು ಬಲಿಷ್ಠ ಸೊಸೈಟಿಯಾಗಿದ್ದು, ಅಸು ಎಲ್ಲಾ ಸಮೂದಾಯದ ಜನರ ಅಭಿವ್ರದ್ದಿಯಲ್ಲಿ ತೊಡಗಿಸಿಕೊಂಡಿದೆ. ಸೊಸೈಟಿ ಬರೆ ಲಾಭವನ್ನು ಲೆಕ್ಕಿಸದೆ, ಶಸ್ತ್ರ ಚಿಕಿತ್ಸೆ ಸಾಲ, ವಿಧ್ಯಾ ಸಂಸ್ಥೆಗಳಿಗೆ, ಇನ್ನಿತರ ಸಂಸ್ಥೆಗಳಿಗೆ ದಾನ ನೀಡಿ ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ರೋಜರಿ ಮಾತಾ ಹೆಸರಿನಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಮಾತೆಯ ಆಶಿರ್ವಾದದಲ್ಲಿ ಯಶಸ್ಸು ಪಡೆಯುತ್ತಾ ಬಂದಿದ್ದು. ನಿರ್ದೇಶಕರು ಮತ್ತು ಸಿಬಂದಿ ವರ್ಗ ಉತ್ತಮಾವಾಗಿ ಶ್ರಮಿಸಿ ಇನ್ನೂ ಹೆಚ್ಚಿನ ಅಭಿವ್ರದ್ದಿ ಹೊಂದಲಿ’ ಎಂದು ಆಶಿರ್ವಚಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಮೇಬಲ್ ಡಿಆಲ್ಮೇಡಾ ವಾರ್ಷಿಕ ವರದಿಯನ್ನು ವಾಚಿಸಿದರು, ಕುಂದಾಪುರ ಶಾಖಾಧಿಕಾರಿ ದಾಮನ್ ಡಿಮೆಲ್ಲೊ ಲೆಕ್ಕ ಪರಿಶೋಧನ ವರದಿಯನ್ನು ವಾಚಿಸಿದರು. ಅಕಾಲಿಕ ಮರಣಕ್ಕೆ ತುತ್ತಾದ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯಾದ ಪಾಸ್ಕಲ್ ಡಿಸೋಜಾರವರಿಗೆ ಸಭೆ ಶ್ರದ್ದಾಂಜಲಿ ಸಲ್ಲಿಸಿತು. ನಿರ್ದೇಶಕಿ ಶಾಂತಿ ಆರ್ ಕರ್ವಾಲ್ಲೊ ಪಿಗ್ಮಿ ಸಂಗ್ರಹಕಾರರಿಗೆ ಮಾತು ಸಿಬಂದಿ ವರ್ಗದವರಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಿರ್ದೇಶಕ ಪ್ರಕಾಶ ಲೋಬೊ ಬಜೆಟ್ ಮೀರಿ ಆದ ಖರ್ಚುಗಳ ವಿವರ ಮುಂದಿಟ್ಟರು. ನಿರ್ದೇಶಕರಾದ ಫಿಲಿಫ್ ಡಿಕೋಸ್ತಾ, ಡಯಾನಾ ಡಿಆಲ್ಮೇಡ, ಶಾಂತಿ ಡಯಾಸ್, ಬ್ಯಾಪ್ಟಿಸ್ಟ್ ಡಾಯಸ್, ಓಝ್ಲಿನ್ ರೆಬೆಲ್ಲೊ, ವಿಲ್ಸನ್ ಡಿಸೋಜಾ, ಸಂತೋಷ್ ಓಜ್ವಲ್ಡ್ ಡಿಸಿಲ್ವಾ, ವಿಲ್ಫ್ರೆಡ್ ಮಿನೇಜೆಸ್, ಟೆರೆನ್ಸ್ ಸುವಾರಿಸ್, ತಿಯೋದೊರ್ ಒಲಿವೆರಾ ಉಪಸ್ಥಿತರಿದ್ದರು.
ಸೊಸೈಟಿ ಉಪಾಧ್ಯಕ್ಷರಾದ ಕಿರಣ್ ಲೋಬೊ ಸ್ವಾಗತಿಸಿದರು, ನಿರ್ದೇಶಕ ಡೆರಿಕ್ ಡಿಸೋಜಾ ವಂದಿಸಿದರು. ನಿರ್ದೇಶಕ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.