ಕುಂದಾಪುರ: ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಒಂದು ಸಾವಿರ ಕೋಟಿ ವ್ಯವಹಾರ ದಾಟಿದ ಸಂಭ್ರಮ ಕೋಟೇಶ್ವರದ ಸಹನಾ ಕನ್ ವೆನ್ಶನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಭಾಟಿಸಿದ ಉಡುಪಿ ಧರ್ಮಪ್ರಾಂತ್ಯದ ಮೊನ್ಸಿಂಝೊರ್ ಅ|ವಂ| ಫರ್ಡಿನಾಂಡ್ ಗೊನ್ನಾಲ್ವಿಸ್ ಒಂದು ಸಾವಿರ ಕೋಟಿ ವ್ಯವಹಾರ ನಡೆಸುವುದು ಸಂಸ್ಥೆಯ ಸಾಧನೆಯ ಪ್ರಮುಖ ಮೈಲುಗಲ್ಲಾಗಿದೆ, 32 ವರ್ಷಗಳ ಹಿಂದೆ ಕುಂದಾಪುರ ವಲಯದ ಕಥೊಲಿಕ್ ಮುಂದಾಳುಗಳು ಸೇರಿ, ದಿವಂಗತ ಆಲ್ಫೋನ್ಸ್ ಲೋಬೊ ಇವರ ಕನಸು ಸಾಕಾರಗೊಳಿಸಿ, ಇದೀಗ 33 ನೇ ವರ್ಷಕ್ಕೆ ಕಾಲಿಟ್ಟಿದೆ, ಇಂತಹ ಒಂದು ಸಂಸ್ಥೆ, ಹುಟ್ಟುಹಾಕಿ ಸಮಾಜವನ್ನು ಆರ್ಥಿಕ ಸ್ಥಿತಿ ಗುಣಮಟ್ಟ ಸುಧಾರಿಸಿಕೊಳ್ಳಲು ಕಾರಣಾವಾಗಿದೆ, ಇದಕ್ಕೆಲ್ಲ ಶ್ರಮಿಸಿದ ಸೊಸೈಟಿ ಹಿಂದಿನ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು, ನಿರ್ದೇಶರನ್ನು, ಹಾಲಿ ನಿರ್ದೇಶರನ್ನು, ಸಿಬಂದಿ ವರ್ಗದವರನ್ನು ಅವರು ಶ್ಲಾಘಿಸುತ್ತಾ, ಇದೀಗ ಗೀಡ ಇದ್ದದ್ದು ಹೇಮರವಾಗಿದೆ. ಈ ಸಹಕಾರಿ ಸ0ಸ್ಥೆ ಹಲವರ ಆಶೋತ್ತರವನ್ನು ನೀಜ ಗೊಳಿಸಿದೆ. 10 ವರ್ಷಗಳಿಂದ ಅದ್ಯಕ್ಷರಾಗಿ ಸ0ಸ್ಥೆಯ ಅಭಿವೃದ್ದಿಗೆ ದುಡಿಯುತ್ತಿರುವ ಅಧ್ಯಕ್ಷ ಜೋನ್ಸ್ನ್ ಡಿ ಆಲ್ಕೇಡಾ ಅವರ ಅಧಿಕಾರಾವಧಿಯಲ್ಲಿ ಸೊಸೈಟಿ ಉತ್ತಮ ಸಾಧನೆ ಮಾಡಿದೆ, ಅವರದು ಕ್ರಾಂತಿಯ ಅವಧಿ ಎಂದು ಪರಿಗಣಿಸಬೇಕಾಗುತ್ತದೆ’ ಎಂದು ಪ್ರಶಂಸಿದರು.ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ದಕ್ಷಿಣ ಕನ್ನಡ ಕೇ0ದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಮ್.ಎನ್.ರಾಜೇ0ದ್ರ ಕುಮಾರ ಮಾತನಾಡಿ “ಸ0ಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ, ಅದನ್ನು ಸದೃಢವಾಗಿ ಬೆಳೆಸುವುದು ಕಷ್ಟ. 32 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳೆಸುವಲ್ಲಿ ಆಡಳಿತ ಮಂಡಳಿ, ಸಿಬ್ಬಂದಿಗಳ ಪ್ರಾತ್ರ ಶ್ಲಾಘನೀಯ, ರೋಜರಿ ಬ್ಯಾಂಕಿಗೆ 50 ವರ್ಷ ತುಂಬುವಾಗ ಹಲವು ಸಾವಿರ ಕೋಟಿ ಠೇವಣಿ ಹಾಗೂ ಸಾಕಷ್ಟು ಶಾಖೆಗಳ ಗುರಿ ಇರಿಸಿಕೊಳ್ಳಬೇಕು ಎಂದು ಎಂದು ಹೇಳುತ್ತಾ, ‘ಕ್ರೈಸ್ತ ಸಮಾಜದವರು, ಶಾಂತಿ ಪ್ರಿಯರು, ಸ್ವಲ್ಪ ಸ್ಥಿವಂತರೂ ಆಗಿದ್ದಿರಿ, ನೀವು ಸ್ವಲ್ಪ ಜನರಿದ್ದರೂ ನಿಮ್ಮ ರೋಜರಿ ಸೊಸೈಟಿಯನ್ನು 1000 ಸಾವಿರ ಕೋಟಿ ಗುರಿ ದಾಟಿಸಿದ್ದಿರಿ’ ಎಂದು ಶ್ಲಾಘಿಸಿದರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು, ಸೊಸೈಟಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಪಾವ್ಲ್ ರೇಗೊ ಸೊಸೈಟಿಯ ಕಾರ್ಯ ಚಟುವಟಿಕೆ, ನೂತನ ಮೈಲುಗಲ್ಲು ದಾಟಿದಕ್ಕೆ ಶುಭ ನುಡಿಗಳನ್ನಾಡಿದರು. ಸೊಸೈಟಿಯ ಪರವಾಗಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಅನಿವಾಸಿ ಭಾರತೀಯ ಉದ್ಯಮಿ ಡಾ.ರೋನಾಲ್ಡ್ ಕುಲಾಸೊ ಅವರ ಸಂದೇಶಗಳನ್ನು ಭಿತ್ತರಿಸಲಾಯಿತು. ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ.ಆರ್, ಪತ್ರಕರ್ತ ವಾಲ್ಪರ್ ಡಿಸೋಜ ನಂದಳಿಕೆ ಮಾತನಾಡಿದರು. ಇವರುಗಳನ್ನು ಸನ್ಮಾನಿಸಲಾಯಿತು.
ಸಿ.ಎ., ವಕೀಲ ವ್ರತ್ತಿ ಮತ್ತು ಇತರ ಉನ್ನತ ಮಟ್ಟದ ಪದವಿ ಪಡೆದ ಸದಸ್ಯರ ಮಕ್ಕಳನ್ನು ಗೌರವ ಧನ ನೀಡಿ ಗೌರವಿಸಲಾಯಿತು, ಈ ಕಾರ್ಯಕ್ರಮವನ್ನು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ ನೆಡೆಸಿಕೊಟ್ಟರು. ಸಂಘದಿಂದ ಐದು ವಲಯಗಳ ಪಲಾನುಭವಿಗಳಿಗೆ ಕಟ್ಟಿ ಕೊಡಲಿರುವ ಮನೆಗಳ ಪ್ರತಿಕೃತಿಯನ್ನು ಅನಾವರಣ ಗೊಳಿಸಲಾಯಿತು.
ಒಂದು ಸಾವಿರ ಕೋಟಿ ವ್ಯಹವಾರ ದಾಟಿದ ವಿಕ್ರಮಕ್ಕಾಗಿ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಅವರನ್ನು ಸೊಸೈಟಿಯ ಪರವಾಗಿ ಸನ್ಮಾನಿಸಲಾಯಿತು, ಅವರು ತಮ್ಮ ಅನ್ನಿಸಿಕೆಯನ್ನು ಹಂಚಿಕೊಂಡರು
ಸೊಸೈಟಿಯ ಉಪಾಧ್ಯಕ್ಷ ಕಿರಣ್ ಮೆಲ್ಡಿನ್ ಲೋಬೊ ಸ್ವಾಗತಿಸಿದರು. ಆಲ್ವಿನ್ ದಾಂತಿ ನಿರೂಪಿಸಿದರು. ನಿರ್ದೇಶಕ ವಿಲ್ಬನ್ ಡಿಸೋಜ ಶಿರ್ವ ವಂದಿಸಿದರು.