ಕುಂದಾಪುರ, ಅ.27: ಸ್ಥಳೀಯ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ವಿದ್ಯಾರ್ಥಿಗಳಿಂದ “ರೋಸಾರಿಯನ್ ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನ” ಏರ್ಪಡಿಸಲಾಗಿತ್ತು.
ಅ.27 ರಂದು ಇದರ ಉದ್ಘಾಟನೆಯನ್ನು ಶಾಲೆಯ ಜಂಟಿಕಾರ್ಯದರ್ಶಿಯಾಗಿರುವ ಅ.ವಂ. ಧರ್ಮಗುರು ಸ್ಟ್ಯಾನಿ ತಾವ್ರೊ ಕರಕುಶಲತೆಯಿಂದ ತಯಾರಿಸಲ್ಪಟ್ಟ ಚಿಟ್ಟೆಯ, ರೆಕ್ಕೆಗಳನ್ನು ತೆರೆದು ವಿಭಿನ್ನ ರೀತಿಯಲ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿ ಶಾಲೆಯ ಹಳೆ ವಿದ್ಯಾರ್ಥಿ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ ಜತೆ ನೀಡಿದರು.
“ನಾನು ಇಂದು ವಸ್ತುಪ್ರದರ್ಶನ ಸಭಾ ಭವನದಲ್ಲಿ ಪ್ರವೇಶಗೊಂಡಾಗ,ವಿದ್ಯಾರ್ಥಿಗಳು ತಮ್ಮ ಸ್ವಂತ ಕೈಗಳಿಂದ ನಿರ್ಮಿಸಲ್ಪಟ್ಟ ವಸ್ತು ಪ್ರದರ್ಶವನ್ನು ನೋಡಿ ನಾನು ಹಬ್ಬದ ಸಂತೆಯಲ್ಲಿ ಪ್ರವೇಶಿಸಿದ್ದೇನೊ ಅಂತಾ ಭಾಸವಾಯಿತು,ಪೋಷಕರೆ ಇಂದು ನಿರ್ಮಿಸಲ್ಪಟ್ಟ ವೈವಿಧ್ಯಮಯ ವಸ್ತುಪ್ರದರ್ಶನ ನಿಮ್ಮ ಮಕ್ಕಳೇ ನಿರ್ಮಾಣ ಮಾಡಿದ್ದು, ಇದನ್ನು ಕಣ್ತುಂಬ ನೋಡಿ ಖುಶಿ ಪಡಬೇಕು, ನಮ್ಮ ಮಕ್ಕಳು ತುಂಬ ಬುದಿವಂತರಿದ್ದಾರೆ, ಅವರಿಗೆ ನೀವು ಪೆÇ್ರೀತ್ಸಾಹಿಸಬೇಕು” ಎಂದು ಸಂತಸವನ್ನು ಹಂಚಿಕೊಂಡರು.
ಮುಖ್ಯ ಅತಿಥಿ ಶ್ರೀದೇವಿ ಇನ್ಸುಟ್ಯುಟ್ ಆಫ್ ಟೆಕ್ನೋಜಿ ಮಂಗಳೂರು ಇದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ “ನಾನು ಇಲ್ಲಿ ಕಲಿಯುವಾಗ ನಮ್ಮ ಶಿಕ್ಷಕರು ನನಗೆ ಬಹಳ ವಿಧದಲ್ಲಿ ಪ್ರೇರಣೆ ನಿಡ್ಡಿದ್ದರು, ನನ್ನನ್ನು ಹಂತ ಹಂತದಿಂದ ಮಾರ್ಗದರ್ಶನ ನೀಡಿ ಉತ್ತೇಜನ ನೀಡಿದ್ದು, ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿ ನನ್ನಲ್ಲಿನ ಪ್ರತಿಭೆಯನ್ನು ಬೆಳಗಿಸಿದರು, ಹಾಗೇ ಇಂದು ನಾನು ಪಿಎಚ್‍ಡಿ ಪಡೆದುಕೊಂಡಿದ್ದೇನೆ, ನನ್ನ ಹಾಗೇ ನೀವೂ ಕೂಡ ಈ ಶಾಲೆಯಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳ ಬೇಕು’ ಎನ್ನುತ್ತಾ ಇಂದಿನ ನಿಮ್ಮ ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಭಗಿನಿ ಇವ್ಲಾ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ವೇದಿಕೆಯಲ್ಲಿ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಉಪಸ್ಥಿತರಿದ್ದು, ವಸ್ತುಪ್ರದರ್ಶನಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ, ಮಹಿಮಾ, ಪ್ರಶಾಂತ್ ರೇಬೆರೊ, ರತ್ನಾಕರ ಶೆಟ್ಟಿ ಇವರನ್ನು ಗೌರವಿಸಲಾಯಿತು. ಶಿಕ್ಷಕಿ ನೀತಾ ಡಿಸೋಜಾ ಸ್ವಾಗತಿಸಿದರು, ಶಿಕ್ಷಕಿ ಪ್ರೀತಿ ಬ್ರಗಾಂಜಾ ನಿರೂಪಿಸಿದರು, ಶಿಕ್ಷಕಿ ಸೆಲಿನ್ ಡಿಸೋಜಾ ವಂದಿಸಿದರು.