

ಕುಂದಾಪುರ: ಟ್ಯಾಂಕರ್ ಬಡಿದು ಸಂಭವಿಸಿದ ರಸ್ತೆ ಅಪಘಾತ ಒಂದರಲ್ಲಿ ಮೃತಪಟ್ಟ ಉಳ್ಳೂರು-74 ಗ್ರಾಮದ ದ್ವಿಚಕ್ರ ವಾಹನದ ಮಾಲೀಕ ಶ್ರೀ ಗುರುಪ್ರಸನ್ನ ಕಾರ್ಣಿಕ ಇವರ ಮೋಟಾರ್ ವಾಹನ ಪಾಲಿಸಿಯಲ್ಲಿ ಅಂತರ್ಗತವಾದ ಮರಣ ಸಂಬಂಧ ವಿಮಾ ಪರಿಹಾರ ಮೊತ್ತ ರೂ.15 ಲಕ್ಷವನ್ನು ಭಾರತ ಸರಕಾರದ ಉದ್ಯಮವಾದ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಇದರ ಕುಂದಾಪುರ ಶಾಖೆಯಲ್ಲಿ ಇತ್ತೀಚೆಗೆ ಮೃತರ ಕಾನೂನು ಬದ್ಧ ವಾರಿಸುದಾರರಾದ ತಾಯಿ ಶ್ರೀಮತಿ ಮಾಲತಿ ಇವರಿಗೆ ಸಂಸ್ಥೆಯ ಶಾಖಾ ಪ್ರಬಂಧಕರು ಹಾಗೂ ಅಧಿಕಾರಿಗಳು ಹಸ್ತಾಂತರಿಸಿದರು.