ಕುಂದಾಪುರದ ಆರ್.‌ಎನ್.ಶೆಟ್ಟಿ‌ ಪ.ಪೂ. ಕಾಲೇಜ್ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಮಾಹಿತಿ ಉಪನ್ಯಾಸ

JANANAUDI.COM NETWORK

“ವೇಗದ ಮಿತಿಯ ಅರಿವು ಮತ್ತು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹಾಕಿರುವ ಅನೇಕ ಸೈನ್ ಬೋರ್ಡ್ ಗಳ ನಿಖರವಾದ ಮಾಹಿತಿ ಪಡೆದು ವಾಹನ ಚಲಾಯಿಸಬೇಕು. ಅಪಘಾತಗಳನ್ನು ತಪ್ಪಿಸುವಲ್ಲಿ ವಾಹನ ಸಂಚಾರದ  ಮೂಲದಾಖಲಾತಿಯಿಲ್ಲದೇ ನಿಯಮಗಳನ್ನು ಉಲ್ಲಂಘಿಸುವುದರಿಂದ ಉಂಟಾಗುವ ಗಂಭೀರ ದುಷ್ಪರಿಣಾಮಗಳನ್ನು ನಿವಾರಿಸುವಲ್ಲಿ ಯವಜನತೆ ಪ್ರಮುಖ ಪಾತ್ರ ವಹಿಸಬೇಕು” ಎಂದು ಕುಂದಾಪುರ ಪೊಲೀಸ್ ಠಾಣೆಯ ಸ್ಟೇಷನ್ ರೈಟರ್ ಶ್ರಿ ನವೀನ ಕುಮಾರ ಎಸ್ ರವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಕುಂದಾಪುರ ಪೊಲೀಸ್ ಠಾಣೆಯವರ ‘ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ‘ ದ ಅಂಗವಾಗಿ ನಡೆಸಲಾದ ಮಾಹಿತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಕೇವಲ ಭಯದಿಂದ ಪಾಲಿಸುವಂತಾಗದೇ, ವಾಹನ ಚಲಾಯಿಸುವವರ ಮತ್ತು ಅನ್ಯ ವ್ಯಕ್ತಿಗಳ ಸುರಕ್ಷತೆಯ ಬಗ್ಗೆ ನಿಗಾ ವಹಿಸಿ ವಾಹನಗಳನ್ನು ಬಳಸಬೇಕೆಂದು  ತಿಳಿಸಿದರು. ಲಯನ್ಸ್ ಕ್ಲಬ್ ನ‌ ಅಧ್ಯಕ್ಷರಾದ ಲಯನ್ ಶ್ರೀ ಚಂದ್ರಶೇಖರ ಕಲ್ಪತರು ಇವರು ಕಾಲೇಜಿಗೆ ಮತ್ತು ಕುಂದಾಪುರ ಪೊಲೀಸ್ ಠಾಣೆಗೆ ಥರ್ಮಲ್ ಗನ್ ಹಾಗೂ ಮಾಸ್ಕ್ ಗಳನ್ನು ಹಸ್ತಾಂತರಿಸಿದರು. ಕುಂದಾಪುರ ಠಾಣೆಯ ಎ.ಎಸ್.ಐ ಶ್ರೀ ಶ್ರೀಧರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥೆ ಶ್ರೀಮತಿ ಜಯಶೀಲಾ ಪೈ ಯವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ಶ್ರೀ ರವಿ ಉಪಾಧ್ಯ ಇವರು ಕಾರ್ಯಕ್ರಮ ನಿರ್ವಹಿಸಿ ವಂದನೆ ಸಲ್ಲಿಸಿದರು.