ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ಭವಿಷ್ಯಕ್ಕೆ ಬೇಕಾಗಿರುವ ಸರ್ವರೂ ಆತ್ಮವಂಚನೆ ಇಲ್ಲದೆ ಅನುಸರಿಸಬಹುದಾದ ಬೌದ್ಧ ನವಯಾನವನ್ನು ನಮಗೆ ನಾವೇ ರೂಪಿಸಿಕೊಳ್ಳಬೇಕಿದೆ ಎಂದು ಸಾಹಿತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.ಕೋಲಾರದ ತಥಾಗತ ಬುದ್ಧ ಧರ್ಮ ಪ್ರಚಾರ ಸಮಿತಿ, ಸಾಮಾಜಿಕ ಸಂಘರ್ಷಸಮಿತಿ ಚಿತ್ರದುರ್ಗ, ಮಂಡ್ಯ ಬೆಳಕುಸಮಾಜವತಿಯಿಂದ ನಗರದ ನಚಿಕೇತ ನಿಲಯದ ಬುದ್ಧ ವಿಹಾರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೌದ್ಧ ಧಮ್ಮದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಒಪ್ಪಲು ಬಹುದೊಡ್ಡ ರಾಜಕೀಯ ಚಿಂತನೆಗಳಿದ್ದವು, ನವಬೌದ್ಧರಾಗಬೇಕಾದವರು ಅಂಬೇಡ್ಕರ್ ಹೇಳಿದ 22 ನಿಯಮಗಳನ್ನು ಪಾಲಿಸಬೇಕಾಗಿತ್ತು, ಆದರೆ, ಇವುಗಳ ಪೈಕಿ ಬಹಳಷ್ಟನ್ನು ನವಬೌದ್ಧರು ಉಲ್ಲಂಘಿಸುತ್ತಿದ್ದಾರೆ ಎಂದರು.ಈಗ ನವಬೌದ್ಧರಾಗಿರುವ ವರ್ಗಕ್ಕೆ ಸಾಕಷ್ಟು ಸಮಸ್ಯೆಗಳಿವೆ, ಇವುಗಳಲ್ಲಿ ಜಾತಿ, ಉಪಜಾತಿ ವ್ಯಾಮೋಹ ಎಂದು ಟೀಕಿಸಿದ ಅವರು, ಅಸ್ಪೃಶ್ಯ ಜಾತಿಗಳಲ್ಲಿಯೇ ಮೇಲು ಕೀಳೆಂಬ ಭಯಂಕರ ವ್ಯಾಮೋಹ ನಾಶವಾಗದಿದ್ದರೆ ಪ್ರತಿಜ್ಞಾಪೂರ್ವಕವಾಗಿ ತಡೆಯಬೇಕಾಗುತ್ತದೆ, ಇಲ್ಲವಾದರೆ ಇಡೀ ಜನಾಂಗದ ಆತ್ಮಹತ್ಯೆ ಆಗುತ್ತದೆಯೆಂದು ಎಚ್ಚರಿಸಿದರು.ನೈತಿಕ ಒತ್ತಡ ಮತ್ತು ಕುರುಡು ಆಚರಣೆಗಳಿಂದ ಯಾರು ಧರ್ಮವನ್ನು ಆಚರಿಸುವುದು ಬೇಡ, ಮನುಷ್ಯ, ಧರ್ಮವಿಲ್ಲದೆಯೇ ಧರ್ಮವಂತರಾಗಬೇಕು, ಬೌದ್ಧ ಪೂರ್ವ ನೆಲೆಗಳಿಂದ ಧಾರ್ಮಿಕ ಆಚರಣೆಗಳನ್ನು ಕಟ್ಟಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.ಪಾಲಿ ಭಾಷೆಯಲ್ಲಿರುವ ಬೌದ್ಧ ಧರ್ಮದ ಆಚರಣೆಗಳು ಜನರಿಗೆ ಸ್ಥಳೀಯ ಭಾಷೆಯಲ್ಲಿ ಜನರಿಗೆ ತಲುಪದಿದ್ದರೆ ಅವು ಸಂಸ್ಕøತದ ಶ್ಲೋಕಗಳಂತೆ ಅರ್ಥಹೀನವಾಗಿಬಿಡುತ್ತವೆ ಎಂದು ಅವರು ಎಚ್ಚರಿಸಿದರುಮೊದಲ ಗೋಷ್ಠಿಯಲ್ಲಿ ಅಂಬೇಡ್ಕರ್ ನವಯಾನ ಮುಂದುವರಿಕೆ ಬಗೆ ಹೇಗೆ ಕುರಿತು ಚಿತ್ರದುರ್ಗದ ಪ್ರೊ. ಸಿ.ಕೆ.ಮಹೇಶ್ ಮಾತನಾಡಿ, ಅಂಬೇಡ್ಕರ್ ಹೊಸ ಧರ್ಮವನ್ನು ಸ್ಥಾಪಿಸಿದ್ದರೆ ದೇಶದ 30 ಕೋಟಿಗೂ ಅ„ಕ ಮಂದಿ ಹೊಸ ಧರ್ಮವನ್ನು ಸೇರ್ಪಡೆಯಾಗಿಬಿಡುತ್ತಿದ್ದರು. ಆದರೆ ಹೊಸಧರ್ಮವು ಅಸ್ಪೃಶ್ಯ ಧರ್ಮವಾಗಿಬಿಡುತ್ತದೆ ಎಂಬ ಆತಂಕದಲ್ಲಿ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿ ವೈಗಿಕರಣಗೊಂಡಿದ್ದ ಬೌದ್ಧಧರ್ಮದ ಯಾನಗಳನ್ನು ತಿರಸ್ಕರಿಸಿ, ವೈ„ಕ ಅಂಶಗಳನ್ನು ತೆಗೆದು ಬುದ್ಧ ಮತ್ತವನ ಧರ್ಮ ಕೃತಿ ರಚಿಸುವ ಮೂಲಕ ನವಯಾನಕ್ಕೆ ಮುನ್ನುಡಿ ಬರೆದರೆಂದು ವಿವರಿಸಿದರು.ನವಯಾನ ಅಂಬೇಡ್ಕರ್ ಕಟ್ಟಿದ ಹೊಸ ಧರ್ಮವಾಗಿದೆ, ಬುದ್ಧ ಮತ್ತವನ ಧಮ್ಮ ಈ ಧರ್ಮದ ಗ್ರಂಥವಾಗಿದೆ, ಈ ಧಮ್ಮವು ಇಡೀ ಭಾರತ ದೇಶದ ಧಮ್ಮವಾದರೆ ದೇಶವು ಘನತೆವೆತ್ತ ದೇಶವಾಗಲಿದೆಯೆಂದರು.ಸರ್ವರ ಸರ್ವಾಂಗೀಣ ಬದಲಾವಣೆ ನವಯಾನ ಬೌದ್ಧಧರ್ಮದಿಂದ ಸಾಧ್ಯವಾಗುತ್ತದೆ ಏಕೆಂದರೆ ಶ್ರೀಲಂಕಾ, ಚೀನಾ ಮತ್ತು ಜಪಾನ್ ಇನ್ನಿತರ ದೇಶಗಳು ಅನುಸರಿಸುತ್ತಿರುವ ಬೌದ್ಧ ಧರ್ಮವು ಭಾರತ ದೇಶಕ್ಕೆ ಹೊಂದಿಕೊಳ್ಳುವುದಿಲ್ಲವೆಂದು ವಿವರಿಸಿದರು.ಎರಡನೇ ಗೋಷ್ಠಿಯಲ್ಲಿ ಬೌದ್ಧ ಧರ್ಮದಸಂಸ್ಕಾರಗಳು, ಜನನ, ಮರಣ ವಿವಾಹ ಕುರಿತು ಮಂಡ್ಯಜಿಲ್ಲೆ ಶ್ರೀರಂಗಪಟ್ಟಣದ ವಿನಯ ವನ ಬುದ್ಧ ವಿಹಾರದ ಧಮ್ಮಾಚಾರಿಟಿ.ಜಿ.ಶ್ರೀನಿವಾಸ ವಿಷಯ ಮಂಡಿಸಿದರು.ಸಂವಾದದಲ್ಲಿ ಗಂಗಾರಾಂ ಚಂಡಾಳ, ಕೃಷ್ಣಯ್ಯಬೌದ್, ಬೆಳ್ಳಾರಪ್ಪ, ರವಿ ಬೈರಾಕೂರ್, ಕೆ.ಪಿ.ನರಸಿಂಹರಾಜು, ಡಾ.ವಿಜಿಯಮ್ಮ ಭೀಮಪುತ್ರಿ ಇತರರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀನಿವಾಸ ಶಕ್ಯ, ಸಂಘರ್ಷ, ಇಂಚರ ನಾರಾಯಣಸ್ವಾಮಿ, ಯಡಹಳ್ಳಿ ಮಂಜುನಾಥ್ ಇತರರು ಹಾಜರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಬುದ್ಧ ವಂದನೆಯನ್ನು ನಡೆಸಲಾಯಿತು.ಬುದ್ಧ ಗೀತೆಯನ್ನು ಈನೆಲಈಜಲ ವೆಂಕಟಾಚಲಪತಿ ತಂಡ ನಡೆಸಿಕೊಟ್ಟಿತು.