ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು
65 ವರ್ಷ ಮೇಲ್ಪಟವರಿಗೆ ಸರಕಾರ 1200 ರೂ ಗಳ ಪಿಂಚಣಿ ನೀಡುತ್ತಿದ್ದು ಆದರೆ ಇದು ಜನರಿಗೆ ಸಮರ್ಪಕವಾಗಿ ಕೈ ಸೇರುತ್ತಿಲ್ಲ ಈ ಹಿಂದೆ ವಿಧವ ವೇತನ 600 ಪಡೆಯುತ್ತಿದ್ದ 65 ವರ್ಷ ಮೇಲ್ಪಟ್ಟವರು ಸರಕಾರ ನೀಡುವ ರೂ 1200 ಪಿಂಚಣಿ ಪಡೆಯಲು ಅರ್ಹರಿದ್ದರೂ ಮಾಹಿತಿ ಕೊರತೆಯಿಂದ ಹಾಗೂ ಇನ್ನಿತರ ಕಾರಣಗಳಿಂದಾಗಿ 80 ವರ್ಷವಾದರೂ ಪಿಂಚಣಿ ಪರಿಷ್ಕರಣೆಗೊಂಡಿಲ್ಲ. ಸರ್ವೆ ಮೂಲಕ ಇದನ್ನು ಕಂಡುಕೊಂಡ ನಂದಳಿಕೆ ಗ್ರಾಮ ಪಂಚಾಯತ್ ಅದ್ಯಕ್ಷರು ಮತ್ತು ಸದಸ್ಯರ ತಂಡ ಅರ್ಹ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಸಾಮೂಹಿಕ ಪಿಂಚಣಿ ಪರಿಷ್ಕರಣೆಯನ್ನು ಕಂದಾಯ ಇಲಾಖೆಯ ಸಹಕಾರದೊಂದಿಗೆ ಮಾಡಿದರು.
ಒಟ್ಟು 30 ಫಲಾನುಭವಿಗಳ ಇದರ ಸದುಪಯೋಗ ಪಡೆದುಕೊಂಡರು ಜೊತೆಗೆ 60 ವರ್ಷಗಳಾದರೂ ಇನ್ನು ಪಿಂಚಣಿ ಪಡೆಯದೇ ಇರುವ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿಗೆ ನೋಂದಣಿ ಮಾಡಲಾಯಿತು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ 15 ಕುಟುಂಬಗಳಿಗೆ ಹೊಸಮನೆ ನಿರ್ಮಾಣಕ್ಕೆ ಕಾರ್ಯದೇಶವನ್ನು ವಿತರಿಸಲಾಯಿತು.ಸುಮಾರು 70 ಜನರು ಈ ಶ್ರಮ ಕಾರ್ಡ್ಅನ್ನು ಇದೇ ಸಂಧರ್ಭ ಪಡೆದುಕೊಂಡರು.ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಉಜ್ವಲ ಗ್ಯಾಸ್ ವಿತರಣೆ,ಪ,ಜಾತಿ & ಪ.ಪಂಗಡದ 25% ನಿಧಿಯಿಂದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.ಹಾಗೂ SSLC ಯಲ್ಲಿ 600 ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಅಮೀನ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರಿಗೆ ಸಮರ್ಪಕವಾಗಿ ಪಿಂಚಣಿ ಸಿಗುತ್ತಿಲ್ಲ. ಎಂಬುದು ನಾವು ಸರ್ವೆಯಲ್ಲಿ ಮನಗಂಡು ,ಅವರಿಗೆ ಪಿಂಚಣಿ ದೊರಕಿಸಿಕೊಡಬೇಕು,ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿ ,ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸಿ ಒಂದೇ ಕಡೆ ಅರ್ಜಿಯನ್ನು ಪೂರ್ಣಗೊಳ್ಳುವಂತೆ ಮಾಡಲಾಗಿದೆ. ಎಂದರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ರೇಷ್ಮಾ ಉದಯ ಶೆಟ್ಟಿ ಮಾತನಾಡಿ ನಂದಳಿಕೆ ಗ್ರಾಮ ಪಂಚಾಯತ್ ಒಂದು ಅರ್ಥಪೂರ್ಣ ಕಾರ್ಯಕ್ರಮ ವನ್ನು ನಡೆಸುತ್ತಿದೆ.ಇಂಥ ಕಾರ್ಯಕ್ರಮ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಬೇಕು .ಎಂದು ನಂದಳಿಕೆ ಗ್ರಾಮ ಪಂಚಾಯತ್ ಅನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ ಸದಸ್ಯರಾದ ಶ್ರೀಮತಿ ಪುಷ್ಪ ಸತೀಶ್ ಪೂಜಾರಿ,ಗ್ರಾಮ ಲೆಕ್ಕಾಧಿಕಾರಿ ಶ್ರೀ ರಘುಪತಿ,ಪಂ,ಅಭಿವೃದ್ದಿ ಅಧಿಕಾರಿ ಶ್ರೀಮತಿ ರೇವತಿ ,ಬೆಳಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ನಂದಿತಾ ಹಾಗೂ ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.ಗ್ರಾ.ಪಂ ಕಾರ್ಯದರ್ಶಿ ಶ್ರೀ ಸಂಜೀವ ಬಿ ಅಮೀನ್ ನಿರೂಪಿಸಿ ವಂದಿಸಿದರು.