ಶ್ರೀನಿವಾಸಪುರ 1 ಗ್ರಾಮದ ಸ. ಮಾ. ಹಿ. ಪ್ರಾ. ಶಾಲೆಗೆ ಸಾರ್ವಜನಿಕರ ದೂರಿನ್ವಯ ಬಿಇಒ ನೇತೃತ್ವದ ತಂಡದ ಪರಿಶೀಲನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶಾಲೆಗೆ ಬಿಇಒ ನೇತೃತ್ವದ ತಂಡ ಬೇಟಿ ಶೈಕ್ಷಣಿಕ ಪ್ರಗತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು

ಶ್ರೀನಿವಾಸಪುರ 1 ; ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚಿಗೆ ಬಿಇಒ ನೇತೃತ್ವದ ತಂಡವು ಸಾರ್ವಜನಿಕರು ಮೌಖಿಕವಾಗಿ ನೀಡಿದ ದೂರಿನ ಅನ್ವಯ ಶಾಲೆಯಲ್ಲಿನ ಶೈಕ್ಷಣಿಕ ಪ್ರಗತಿ , ಮೂಲಭೂತ ಸೌಲಭ್ಯಗಳ ಪರಿಶೀಲಿಸಿದರು.
ಈ ಸಮಯಲ್ಲಿ ಸಾರ್ವಜನಿಕರು ಮಾತನಾಡಿ ಗ್ರಾಮದಲ್ಲಿರುವ ಶತಮಾನ ಶಾಲೆಯಲ್ಲಿ ಗಂಡ- ಹೆಂಡರ ಜಗಳದಲ್ಲಿ ಕೂಸು ಬಡವಾದ್ಹಂಗೆ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿಯ ದಬ್ಬಾಳಿಕೆ ಹಾಗೂ ಮುಖ್ಯಶಿಕ್ಷಕಿ , ಶಿಕ್ಷಕರ ಒಳಜಗಳಕ್ಕೆ ಶೈಕ್ಷಣಿಕವಾಗಿ ಬಡವಾಗುತ್ತಿದ್ದಾರೆ ಅಲ್ಲದೆ , ಮಾದರಿ ಶಾಲೆಯಾಗಿರುವ ಈ ಶಾಲೆಯು ಮಾದರಿ ಎನ್ನುವ ಪದಕ್ಕೆ ತತ್ವವಿರುದ್ದವಾಗಿ ಶಾಲೆ ಆವರಣ ಹಾಗೂ ಇತರೆ ಮೂಲಭೂತ ಸೌಲಭ್ಯಗಳು ಇದೆ. ಇದರಿಂದಾಗಿ ವಿದ್ಯಾರ್ಥಿಗಳು ಪದಾಡುತ್ತಿದ್ದಾರೆಂದು ವಿದ್ಯಾರ್ಥಿಗಳ ಪೋಷಕರು,ಗ್ರಾಮಸ್ಥರು ಮುಖ್ಯ ಶಿಕ್ಷಕಿಯ ವಿರುದ್ದ ತಾಲೂಕು ಹಿರಿಯ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು
ಶಾಲಾವರಣದಲ್ಲಿ ಶೌಚಾಲಯಗಳು ಇದ್ದರೂ, ಅವುಗಳಿಗೆ ಬೀಗವನ್ನು ಹಾಕಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಹೂರವಲಯದಲ್ಲಿ ಶೌಚಾಲಯಕ್ಕೆ ಹೋಗುವಂತಹ ಪರಿಸ್ಥಿತ ಉಂಟಾಗಿದೆ ಹಾಗೂ ಶಾಲಾ ಕಟ್ಟಡಕ್ಕೆ ಸುಣ್ಣಬಣ್ಣ ಇಲ್ಲ ,ಸಾರ್ವಜನಿಕರೊಂದಿಗೆ ಉತ್ತಮ ಬಾಂದವ್ಯ ಇಲ್ಲ, ಅಲ್ಲದೆ ಕಾಟಾಚಾರದ ಎಸ್‍ಡಿಎಂಸಿ ಸಭೆ ನಡೆಸುತ್ತಾರೆ ಎಂದು ಪೋಷಕರು ದೂರಿದರು.
ಗ್ರಾ.ಪಂ ಅಧ್ಯಕ್ಷೆ ಅರುಣವೆಂಕಟ್ ಮಾತನಾಡಿ ಪೋಷಕರು ಹಾಗೂ ಗ್ರಾಮಸ್ಥರು ಗ್ರಾಮದಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹಾಗೂ ಮೂಲಭೂತ ಸೌಲಭ್ಯ ವಂಚಿತರಾಗಿದ್ದಾರೆಂದು ಗ್ರಾ.ಪಂ.ಅಧ್ಯಕ್ಷರಿಗೆ ಮೌಖಿಕವಾಗಿ ತಿಳಿಸಿದಾಗ, ಶಾಲೆಗೆ ಬೇಟಿ ನೀಡಿ ಶಾಲೆಯ ವಾತವರಣದ ಬಗ್ಗೆ ಬೇಸರ ವ್ಯಕ್ತಡಿಸಿದರು.
ಬಿಇಒ ವಿ.ಉಮಾದೇವಿ ಪೋಷಕರ ಹಾಗೂ ಗ್ರಾ.ಪಂ. ಅಧ್ಯಕ್ಷರ ದೂರಗಳನ್ನು ಆಲಿಸಿ ಮಾತನಾಡಿ ಗಡಿಭಾಗದಲ್ಲಿನ ಸರ್ಕಾರಿ ಶಾಲೆಗಳು ಉಳಿಸಿಕೊಳ್ಳುವುದೇ ಕಷ್ಟಕರವಾಗಿರುವ ಇಂತಹ ಸಮಯದಲ್ಲಿ ಬೇಜವ್ದಾರಿ ಕೆಲಸವನ್ನು ನಿರ್ವಹಿಸುವುದು ಸರಿಯಲ್ಲ, ಗ್ರಾ.ಪಂ ಅಧ್ಯಕ್ಷರು , ಸದಸ್ಯರು ಹಾಗೂ ಗ್ರಾಮದ ಮುಖಂಡರು ಹೇಳಿರುವ ಹೇಳಿಕೆಗಳನ್ನು ಒಂದು ವಾರದಲ್ಲಿ ಸರಿಪಡಿಸಿಕೊಳ್ಳವಂತೆ ಎಚ್ಚರಿಸಿದರು. ಇಲ್ಲವಾದಲ್ಲಿ ಮುಂದಿನ ಕ್ರಮಕೈಕೊಳ್ಳಲಾಗುವುದು ಎಚ್ಚರಿಕೆ ನೀಡಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಸಿ.ವಸಂತ,ಟಿಪಿಒ ನಾರಾಯಣಸ್ವಾಮಿ,ಶಿಕ್ಷಣ ಸಂಯೋಜಕರಾದ ಕೋದಂಡಪ್ಪ,ಬಿಆರ್‍ಸಿ ಸುಧಾಕರರೆಡ್ಡಿ,ಸಿಆರ್‍ಪಿ ವರದರೆಡ್ಡಿ ,ಗ್ರಾ.ಪಂ. ಸದಸ್ಯರು ,ಗ್ರಾಮದ ಮುಖಂಡರು ಇದ್ದರು.

ಗ್ರಾಮದ ಶತಮಾನದ ಶಾಲೆಯಲ್ಲಿನ ಕಟ್ಟಡವು ಸುಣ್ಣಬಣ್ಣವಿಲ್ಲದೆ ಪಾಚಿಕಟ್ಟಿ ದುಸ್ಥಿತಿಯಲ್ಲಿ ಇರುವುದು.