

ಉಡುಪಿ, ಜೂ30: ಅತಿ ವಂದನೀಯ ಡಾ. ರೋಶನ್ ಡಿ’ಸೋಜಾರವರನ್ನು ಉಡುಪಿ ಧರ್ಮಪ್ರಾಂತ್ಯದ
ನ್ಯಾಯಾಲಯದ ಮುಖ್ಯ ನ್ಯಾಯಾಧಿಪತಿಯಾಗಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊರವರು.
ಸೇಮಕಗೊಳಿಸಿದ್ದಾರೆ.
ಇಂದು ಜೂ.30 ರಂದು ಉಡುಪಿ ಬಿಷಪ್ ಹೌಸ್‌ನಲ್ಲಿ ಜರಗಿದ ಸರಳ ಧಾರ್ಮಿಕ ಸಮಾರಂಭದಲ್ಲಿ ಬಿಷಪ್ ಜೆರಾಲ್ಡ್
ಲೋಬೊರವರ ಸಮ್ಮುಖದಲ್ಲಿ ವಂ. ಡಾ. ರೋಶನ್ ಡಿ’ಸೋಜಾರವರು ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ನ್ಯಾಯಾಧಿಪತಿ ಅತಿ ವಂ. ವಾಲ್ಟರ್ ಡಿ’ಮೆಲ್ಲೊರವರು ವಂ.ಡಾ.ರೋಶನ್ ಡಿ’ಸೋಜಾರವರಿಗೆ.
ಅಧಿಕಾರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಬಿಷಪ್ ಜೆರಾಲ್ಡ್ ಲೋಬೊರವರು, ಅತಿ ವಂ. ವಾಲ್ಟರ್
ಡಿಮೆಲ್ಗೊರವರು ಕಳೆದ 6 ವರ್ಷಗಳಿಂದ ಉಡುಪಿ ಧರ್ಮಪ್ರಾಂತ್ಯದಲ್ಲಿ ಸಲ್ಲಿಸಿದ ಸೇವೆಗಾಗಿ ಕೃತಜ್ಞತೆ.
ಸಲ್ಲಿಸಿದರು ಹಾಗೂ ನೂತನ ಮುಖ್ಯ ನ್ಯಾಯಾಧಿಪತಿ ವಂ. ಡಾ. ರೋಶನ್ ಡಿ’ಸೋಜಾರವರಿಗೆ
ಅಭಿನಂದನೆಗಳನ್ನು ಸಲ್ಲಿಸಿದರು.
ಪಾಂಬೂರ್ ಚರ್ಚಿನ ಧರ್ಮಗುರು ವಂ. ಹೆನ್ರಿ ಮಸ್ಕರೇನಸ್, ಉಡುಪಿ ಚರ್ಚಿನ ಧರ್ಮಗುರು ಅತಿ ವಂ. ಚಾರ್ಲ್ಸ್
ಮಿನೇಜಸ್, ಧರ್ಮಗುರು ವಂ. ಜೋಕಿಮ್ ಡಿ’ಸೋಜ, ಧರ್ಮಪ್ರಾಂತ್ಯದ ಖಜಾಂಚಿ ಮಾರ್ಸೆಲ್ ಡಿ’ಸೋಜ ಉಪಸ್ಥಿತರಿದ್ದರು.
ವಂ. ಡಾ. ರೋಶನ್ ಡಿ’ಸೋಜರವರು ಪ್ರಸ್ತುತ ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳಾಗಿಯೂ ಸೇವೆ.
ಸಲ್ಲಿಸುತ್ತಿದ್ದಾರೆ. ಅವರು ಮಂಗಳೂರಿನ ರೊಜಾರಿಯೋ ಕಾಥೆದ್ರಲ್, ಕುಲಶೇಕರ ಮತ್ತು ಮೂಡುಬೆಳ್ಳೆ ಚರ್ಚಿನಲ್ಲಿ
ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಸೈಂಟ್ ಪೀಟರ್ ಇನ್‌ಸ್ಟಿಟ್ಯುಟ್‌ನಿಂದ ‘ಕ್ಯಾನನ್
ಲಾ’ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ರೋಮನ್ ಉರ್ಬಾನಿಯಾನ ವಿಶ್ವವಿದ್ಯಾಲಯದಿಂದ
ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.






