ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಪಿ. ಗಣಪತಿ ಭಟ್ (61ವರ್ಷ) ನಿಧನ

JANANUDI.COM NETWORK

ಕುಂದಾಪುರ: ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಪಿ. ಗಣಪತಿ ಭಟ್ (61ವರ್ಷ) ಅವರು ನಿಧನರಾಗಿದ್ದಾರೆ. ಅವರು ಪುತ್ರ ನವೀನ ಮತ್ತು ಮಗಳು ಶ್ರೀರಕ್ಷಾ ಮತ್ತು ಪತ್ನಿ ಮತ್ತು ಕುಟುಂಬವನ್ನು ಅಗಲಿದ್ದಾರೆ.
ದಕ್ಷಿಣಕನ್ನಡದ ಪುತ್ತೂರು ತಾಲೂಕಿನ ಪಾದೆಕಲ್ಲಿನವರಾದ ಅವರು ಉಡುಪಿಯ ಮಹಾತ್ಮಗಾಂಧಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ನಂತರ ಕಲ್ಯಾಣಪುರದ ಮಿಲಾಗ್ರೀಸ್ ಕಾಲೇಜು, ತದನಂತರ ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರಾಗಿ ನಂತರ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಎಂ.ಫಿಲ್ ಪದವಿಯನ್ನು ಮುಗಿಸಿದ್ದರು.