

ಕೋಲಾರ,ಆ.02: ಕೋಲಾರ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ವತಿಯಿಂದ ನಗರದ ಶತಶೃಂಗ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ನಿಖಿಲ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಅನುಭವ ಹೊಂದಿರುವ ನೀವು ನಿಮ್ಮ ಅನುಭವ ವ್ಯರ್ಥವಾಗದೆ ಇಲಾಖೆಗೆ ಉಪಯೋಗವಾಗಬೇಕು. ನೀವು ನಿಮ್ಮ ಬಿಡುವಿನ ವೇಳೆಯಲ್ಲಿ ಇಲಾಖೆಗೆ ಬೇಟಿ ನೀಡಿ ಈಗಿನ ಸಿಬ್ಬಂದಿಗೆ ತನಿಖೆ, ಚಾರ್ಜ್ಶೀಟ್ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.
ನಿಮಗೆ ಏನೇ ಸಮಸ್ಯೆಗಳಿದ್ದರೂ ಸಹ ನಾನು ಸ್ಪಂದಿಸುವುದಾಗಿ ತಿಳಿಸಿ, ಮಾಸಿಕ ಸಭೆಗಳನ್ನು ನಡೆಸಲು ಶತಶೃಂಗ ಸಮುದಾಯ ಭವನದಲ್ಲಿ ಸ್ಥಳಾವಕಾಶ ಕಲ್ಪಿಸಿಕೊಡುವುದಾಗಿ ಹೇಳಿದರು.
ಸಭೆಯಲ್ಲಿ ಕೋಲಾರ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ವೆಂಕಟಸ್ವಾಮಿ, ಅಧ್ಯಕ್ಷ ಸೊಣ್ಣಪ್ಪ, ಕಾರ್ಯದರ್ಶಿ ರಾಜಶೇಖರ್, ಖಜಾಂಚಿ ದೊಡ್ಡಯ್ಯ, ಸಮಿತಿ ಸದಸ್ಯರಾದ ಕೃಷ್ಣಯ್ಯ, ಜಯರಾಂ, ನಾರಾಯಣಸ್ವಾಮಿ, ರಾಧಾಕೃಷ್ಣ, ಗುಡೇಗೌಡ, ಶಿವಶಂಕರ್ ಉಪಸ್ಥಿತರಿದ್ದರು.


