ನಿವ್ರತ್ತ ಬರುಯಿಪುರ್ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ ಕುಂದಾಪುರಕ್ಕೆ ಭೇಟಿ

JANANUDI.COM NET WORK . Photos: Anony D almieda


ಕುಂದಾಪುರ, ಜ.17: ನಿವ್ರತ್ತ ಬರುಯಿಪುರ್ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ 450 ವರ್ಷಗಳ ಇತಿಹಾಸ ಇರುವ ಕುಂದಾಪುರ ರೋಜರಿ ಮಾತಾ ಚರ್ಚಿಗೆ ಭೇಟಿ ನೀಡಿದರು. ಅವರನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹೂ ಗುಚ್ಚ ನೀಡಿ ಗೌರವಿಸಿದರು.


ನಿವ್ರತ್ತ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ ಅವರು ವಾಸ್ತವವಾಗಿ ಹಿಂದೆ ನಿಗದಿ ಪಡಿಸಿದಂತೆ, ಜನವರಿ 16 ರಂದು ನಡೆಯಬೇಕಾದ, ಕುಂದಾಪುರ ರೋಜರಿ ಮಾತಾ ಚರ್ಚಿನ ಚರಿತ್ರೆಯಲ್ಲಿ ಜನಜನಿತರಾಗಿರುವ, ಸಂತ ಜುಜೆ ವಾಜರ ಮಹಾವಾರ್ಷಿಕ ಹಬ್ಬದಲ್ಲಿ ಭಾಗವಹಿಸ ಬೇಕಾಗಿತ್ತು. ಆದರೆ ಕೊವೀಡ್ 3 ನೇ ಅಲೆಯ ಕಾರಣ ಸರಕಾರ ವಿಧಿಸಿದ ಹೆಚ್ಚು ಜನ ಸೇರಬಾರದು ಎಂದು ಆದೇಶ ಕ್ರಮದಿಂದ, ಸಂತ ಜುಜೆ ವಾಜರ ಮಹಾವಾರ್ಷಿಕ ಹಬ್ಬ ಅನಿಧಿಷ್ಟ ಕಾಲ ಮುಂದುಡಲಾಯಿತು. ಆದರೆ ಅವರ ನೀಯೊಜಿತ ಕಾರ್ಯಕ್ರಮದ ಪ್ರಕಾರ ಚರ್ಚಿಗೆ ಬಂದು, ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಸಂತ ಜೋಸೆಫ್ ಛಾಪೆಲ್ ನಲ್ಲಿ ಪೂಜಾ ವಿಧಿ ನೇರವೇರಿಸಿದರು.


ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಕಾನ್ವೆಂಟಿನ ಇತರ ಧರ್ಮ ಭಗಿನಿಯರು, ಕೆಲವೇ ಭಕ್ತಾಧಿಗಳು ಉಪಸ್ಥಿತರಿದ್ದರು.


ನಿವ್ರತ್ತ ಬರುಯಿಪುರ್ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ ಇವರು ಮೂಲತಹ ಮೂಡುಬೆಳ್ಳೆ (ಬೊಳಿಯೆ) ಯವರಾಗಿದ್ದಾರೆ. (ಜನನ 1945) ಅವರು ವಿದ್ಯಾಭ್ಯಾಸವನ್ನು ಶಿರ್ವಾದಲ್ಲಿ ಪಡೆದುಕೊಂಡಿದ್ದು, 1973 ರಲ್ಲಿ ಕಲ್ಕೊತ್ತಾದಲ್ಲಿ ಧರ್ಮಗುರುಗಳ ದೀಕ್ಷೆ ಪಡೆದರು. 1977 ರಲ್ಲಿ ಬರುಯಿಪುರ್ ಧರ್ಮಕೇಂದ್ರದ ಧರ್ಮಗುರುಗಳಾದರು, ಅದೇ ವರ್ಷ ಬರುಯಿಪುರ್ ಧರ್ಮಪ್ರಾಂತ್ಯದ ಬಿಶಪ್ ಆಗಿ ನೇಮಕಗೊಂಡರು, ಮತ್ತು 1988 ರಲ್ಲಿ ಬಿಶಪ್ ಆಗಿ ದೀಕ್ಷೆ ಪಡೆದರು. 2020 ರಲ್ಲಿ ನಿವ್ರತ್ತ ಹೊಂದಿದರು. ಪ್ರಸ್ತುತ ಅವರು ಆಪೋಸ್ಟಲಿಕ್ ಆಸೊನೊಲ್ ಇಂಡಿಯಾ ಇದರ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ.


ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ ಅವರು ಸಂತೆ ಮದರ್ ತೆರೆಜಾ ಇವರಿಗೆ ಸಂತ ಪದವಿ ದೊರಕುವ ಪ್ರಕ್ರಿಯೆಯಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆಂದು ಫಾ|ಸ್ಟ್ಯಾನಿ ತಾವ್ರೊ ತಿಳಿಸಿದರು. ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ ಆಶಿರ್ವಚನ ನೀಡಿ ಹರಸಿ ವಂದಿಸಿದರು.