ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು
ಪ್ರತಿಯೊಂದು ಸಮಸ್ಯೆಯನ್ನು ಜಾಣ್ಮೆಯಿಂದ ಪರಿಹರಿಸುವವನೇ ನಿಜವಾದ ನಾಯಕ, ನಾಯಕತ್ವ ಕೇವಲ ಒಂದು ಹುದ್ದೆಯಲ್ಲ ಅದೊಂದು ಜವಾಬ್ದಾರಿ. ಎಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯಬಲ್ಲ ಚಾಣಾಕ್ಷನೇ ನಿಜವಾದ ನಾಯಕ. ಪ್ರತಿ ಬಾರಿ ಹೊಸತನದ ಯೋಜನೆ ಹಾಗೂ ಹೊಸ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಬೆಳೆಸಬಲ್ಲ ವ್ಯಕ್ತಿಯೇ ನಿಜವಾದ ನಾಯಕ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಹೇಳಿದರು.
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಆದಿತ್ಯವಾರ ಜರಗಿದ 22ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ಜರಗಿದ “ಆದ್ವಿತೀಯ” ವಿಶೇಷ ಕಾರ್ಯಕ್ರಮದ ಮೂಲಕ ಮಾತನಾಡಿದರು.
ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಗೌರವಾಧ್ಯಕ್ಷ ರಾಜು ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಸಿಹಿಸಿದ್ದರು. ಈ ಸಂದರ್ಭದಲ್ಲಿ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ರಾಜೇಶ್ ಕೋಟ್ಯಾನ್, ಸತೀಶ್ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಸದಸ್ಯರಾದ ಹರೀಶ್ ಪೂಜಾರಿ, ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಆರತಿ ಕುಮಾರಿ, ಪದ್ಮಶ್ರೀ ಪೂಜಾರಿ, ಅಶ್ವಿನಿ ಪ್ರಭಾಕರ್, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪೂಜಾರಿ, ಕಿರಣ್ ಶೆಟ್ಟಿ, ದೀಕ್ಷಿತ್ ಸುವರ್ಣ, ಆದರ್ಶ್ ಸುವರ್ಣ, ಪ್ರಶಾಂತ್ ಬೋಳ, ಸುದರ್ಶನ್ ಸಾಲ್ಯಾನ್, ಕೀರ್ತನ್ ಕುಮಾರ್, ಮೊದಲಾದವರಿದ್ದರು.
ಸಂಘದ ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ ಸ್ವಾಗತಿಸಿದರು, ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ವೀಣಾ ಪೂಜಾರಿ ತಿಂಗಳ ವರದಿ ಮಂಡಿಸಿದರು, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್ ವಂದಿಸಿದರು