ಶ್ರೀನಿವಾಸಪುರ ; ಯಾವುದೇ ಕಾರಣಕ್ಕೂ ಸಾರ್ವಜನಿಕರರು ವಿನಕಾರಣ ಕಚೇರಿಗೆ ಅಲೆದಾಡದಂತೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಹಾಗು ಸಿಬ್ಬಂದಿಗಳಿಗೆ ಎಂದು ಅಪರ ಜಿಲ್ಲಾಧಿಕಾರಿ ಎಸ್.ಎನ್.ಮಂಗಳ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಗೆ ಗುರುವಾರ ಬೇಟಿ ನೀಡಿ ಭೂ ನ್ಯಾಯ ಮಂಡಲಿಯ 50 ಪ್ರಕರಣಗಳನ್ನು ವಿಲೇವಾರಿ ಮಾಡಿ ನಂತರ ಕಡತಗಳನ್ನು ಪರಿಶೀಲನೆ ಮಾಡಿ ಮಾತನಾಡಿದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಹಣಿಗೆ ಆದಾರ್ ಜೋಡನೆಯ ಬಗ್ಗೆ ಸಿಬ್ಬಂದಿಯ ಬಳಿ ಮಾಹಿತಿ ಪಡೆದು, ಸರ್ಕಾರದ ಆದೇಶದಂತೆ ಸರ್ಕಾರ ಜಮೀನುಗಳನ್ನು ಆಳತೆ ಮಾಡಿರುವ ಬಗ್ಗೆ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದುಕೊಂಡರು . ಕಚೇರಿಯ ರಿಕಾರ್ಡ್ ರೂಂ ,ಇ ಅಫೀಸ್ ಬಾಕಿ ಕಡತಗಳು, ಅಭಿಲೇಖಾಲಯ ಶಾಖೆಗೆ ಹಾಗು ಪಹಣಿ ವಿಲೇವಾರಿ ರೂಮ್ಗೆ ಬೇಟಿ ನೀಡಿ ಪರಿಶೀಲಿಸಿದರು.
ಉಪತಹಶೀಲ್ದಾರ್ ಕೆ.ಎಲ್.ಜಯರಾಮ್, ಆರ್ಐ ಎಸ್.ವಿ.ಜನಾರ್ಧನ್, ಸಿಬ್ಬಂದಿಗಳಾದ ರೂಪೇಶ್, ಎಚ್.ಎಸ್.ಅಭಿಷೇಕ್, ರಾಜೇಶ್ವರಿ, ಚಾಮುಂಡೇಶ್ವರಿ ಇದ್ದರು.