ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ 1 : ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯನ್ನ ಅಲಂಕರಿಸಿದರೂ ಸಹ ತಾಯಿ, ತಂದೆ, ಗುರುಗಳನ್ನ ಗೌರವಿಸಿರಿ ಎಂದು ತಹಶೀಲ್ದಾರ್ ಶರೀನಾತಾಜ್ ಹೇಳಿದರು.
ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ದೇವಾಯಯದಲ್ಲಿ ಶುಕ್ರವಾರ ದೇವಾಲಯದ 31ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಗಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೇ ಅಧ್ಯಯನ ಮಾಡಬೇಕು .ಅಧ್ಯಯನವನ್ನು ಇಷ್ಟಪಟ್ಟು ಮಾಡಬೇಕು. ಯಾವುದೇ ಕೆಲಸವನ್ನು ಇಷ್ಟವಿಲ್ಲದೇ ಮಾಡಿದರೆ ಅದು ಫಲನೀಡುವುದಿಲ್ಲ. ಹಾಗಾಗಿ ಅಧ್ಯಯನದಲ್ಲಿ ಶ್ರದ್ಧೆ, ಛಲ, ಸಮಯಪಾಲನೆ ಸೇರಿದಂತೆ ಶಿಸ್ತುಬದ್ದ ಜೀವನ ನಡೆಸುವ ಮೂಲಕ ಯಶಸ್ಸುಗಳಿಸಬೇಕು ಎಂದರು ಹಾಗು ನಿಮ್ಮ ಗುರಿಯನ್ನು ತಲುಪಲು ಗುರುಹಿರಿಯರ ಮಾರ್ಗದರ್ಶನವನ್ನು ಪಡೆಯುಂತೆ ಸಲಹೆ ನೀಡಿದರು.
ಹೈಕೋರ್ಟ್ ವಕೀಲ ಆರ್.ಎಸ್.ಪ್ರಸನ್ನಕುಮಾರ್ ಮಾತನಾಡಿ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನಡೆಸಿ ಸಾಧನೆ ಮಾಡಲು ಎಲ್ಲ ಕ್ಷೇತ್ರದಲ್ಲಿಯೂ ನಿರಂತರ ಶ್ರಮ ಹಾಕುವುದರ ಜತೆಗೆ ತಮ್ಮ ಮುಂದಿನ ಗುರಿ, ಕ್ಷೇತ್ರಗಳನ್ನು ಮೊದಲು ಆಯ್ಕೆ ಮಾಡಿಕೊಂಡು ಆಯಾ ಕ್ಷೇತ್ರಕ್ಕೆ ಸಂಬಂದಿಸಿದ ಪಠ್ಯಕ್ರಮಗಳನ್ನು ಕ್ರಮಬದ್ದವಾಗಿ ಶಿಸ್ತು, ಸಂಯಮ,ತಮ್ಮನ್ನು ತಾವು ನಿಯಂತ್ರಿಸುವ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಅವಿರಂತವಾಗಿ ಅಭ್ಯಾಸ ಮಾಡುವಂತೆ ಸಲಹೆ ನೀಡಿದರು.
ಆರ್ಯವೈಶ್ಯ ಮಂಡಳಿ ಟ್ರಸ್ಟ್ ನ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಮಾತನಾಡಿ ನಿಶ್ಚಲ ಗುರಿ ಸಾಧನೆಗೆ ನಿರಂತರ ಕಠಿಣ ಪರಿಶ್ರಮದಿಂದ ತಮ್ಮ ಸಾಧನೆಯ ಶಿಖರವನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಲಲಿತಾ ಮಹಿಳಾ ಸಂಘ, ವಾಸವಿ ಯುವಜನ ಸಂಘದ ಸದಸ್ಯರು ಪಾಲ್ಗುಂಡಿದ್ದರು. ಆರ್ಯವ್ಯಶ್ಯ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಆರ್.ಅಮರನಾಥ್, ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣಶೆಟ್ಟಿ, ಸದಸ್ಯರಾದ ವೈ.ಆರ್.ನಾಗೇಂದ್ರಬಾಬು, ರಾಮನಾಥ, ಸತ್ಯಣ್ಣ, ಕಿಟ್ಟ, ಪದ್ಮೇಶ್, ರೆಡ್ಡಪ್ಪ, ಕಿಶೋರ್ಕುಮಾರ್, ಜೆ.ಆರ್.ಲಿಶಾಂತ್ , ವಾಸವಿರವಿ ಇತರರು ಇದ್ದರು.