ಶ್ರೀನಿವಾಸಪುರ,ಜೂ:27, ಬಜೆಟ್ನಲ್ಲಿ ಮಾವು , ರೇಷ್ಮೇ, ಟಮೋಟೊ ಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಜು.1 ರ ಶನಿವಾರ ಇಂದಿರಾ ಭವನ್ ವೃತ್ತದಲ್ಲಿ ನಷ್ಟ ಬೆಳೆ ಸಮೇತ ಹೋರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರೆದಿದ್ದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಹತ್ತಾರು ವರ್ಷಗಳಿಂದ ಮಾವು ,ಟೊಮೋಟೋ, ರೇಷ್ಮೇ ಬೆಳೆಗಾರರ ಬದಕು ಬೀದಿಗೆ ಬೀಳುತ್ತಿದೆ ಲಕ್ಷಾಂತರ ಬಂಡವಾಳ ಹಾಕಿ ಬೆಳೆದಂತಹ ಬೆಳೆಗಳು ಕೈಗೆ ಬರುವ ಸಮಯದಲ್ಲಿ ಅತಿವೃಷ್ಠಿ, ಅನಾವೃಷ್ಟಿ ಪ್ರಕೃತಿ ವಿಕೋಪಗಳು ರೋಗ ಭಾದೆಗೆ ಸಂಪೂರ್ಣ ರೈತರ ವರ್ಷದ ಬೆವರ ಹನಿ ಒಂದೇ ದಿನದಲ್ಲಿ ನಿರು ಪಾಲಾಗುತ್ತಿದ್ದರೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುವಲ್ಲಿ ಸರ್ಕಾರಗಳು ವಿಪಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳ ರೈತ ವಿರೋದಿ ದೋರಣೆ ವಿರುದ್ದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಕುಟುಂಬಗಳಿಗೆ ಸ್ವಾಭಿಮಾನ ಬದುಕುಕೊಟ್ಟ ರೇಷ್ಮೆ ಬೆಳೆಗಾರರು ಬೆಲೆ ಇಲ್ಲದೆ ಬೀದಿಗೆ ಬಿದ್ದಿರುವ ಜೊತೆಗೆ ಹತ್ತಾರು ವರ್ಷಗಳಿಂದ ಟೊಮೋಟೋ, ಮಾವುಗೆ ಬಾಧಿಸುತ್ತಿರುವ ರೋಗಗಳು ಲಕ್ಷಂತರ ರೂ ನೀಡಿ ಔಷಧಿ ಖರೀದಿ ಮಾಡಿ ಸಿಂಪರಣೆ ಮಾಡಿದರೂ ನಿಯಂತ್ರಣಕ್ಕೆ ರೋಗಗಳು ಅಷ್ಟರ ಮಟ್ಟಿಗೆ ಔಷಧಿಗಳು ನಕಲಿ ಆಗಿದ್ದು, ಬಜೆಟ್ನಲ್ಲಿ ನಕಲಿ ಹಾವಳಿ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಬೇಕೆಂದು ಒತ್ತಾಯಿಸಿದರು.
ರೈತರ ಬೆಳೆ ಬೆಲೆ ಇಲ್ಲದೆ ನಷ್ಟವಾದಾಗ ಪಸಲು ರಕ್ಷಣೆ ಮಾಡಲು ಮಾವು ಬೆಳೆಗಾರರಿಗೆ ಮಾವು ಸಂಸ್ಕರಣ ಘಟಕಗಳಿಲ್ಲ, ಟಮೋಟೋ ರಕ್ಷಣೆ ಕೃಷಿ ಆದಾರಿತ ಕೈಗಾರಿಕೆಗಳಿಲ್ಲ, ಒಟ್ಟಾರೆಯಾಗಿ ರೈತರ ಗೋಳು ಕೇಳುವವರಿಲ್ಲದರಾಗಿದ್ದಾರೆಂದು ಅವ್ಯವಸ್ಥೆಯ ವಿರುದ್ದ ಕಿಡಿ ಕಾರಿದರು.
ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಮಾತನಾಡಿ ಪ್ರತಿ ಬಜೆಟ್ನಲ್ಲೂ ಕೋಲಾರ ಜಿಲ್ಲೆಯನ್ನು ಸರ್ಕಾರಗಳು ಕಡೆಗಣಿಸುತ್ತಿವೆ. ಸರ್ಕಾರದ ಮೇಲೆ ಒತ್ತಡ ಹಾಕಿ ಜಿಲ್ಲೆಯ ಜಲ್ವಂತ ಸಮಸ್ಯೆಗಳು ಹಾಗೂ ಅಭಿವೃದ್ದಿಗೆ ಅನುಧಾನ ತರುವಲ್ಲಿ ಸ್ಥಳಿಯ ಶಾಸಕರು ವಿಪಲವಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಬಜೆಟ್ನಲ್ಲಿ ಮಾವು, ಟೊಮೋಟೊ , ರೇಷ್ಮೇ ಗೆ ಬೆಂಬಲ ಬೆಲೆ ಘೋಷಣೆ ಮಾಡುವ ಜೊತೆಗೆ ಕೃಷಿ ಆಧಾರಿತ ಕೈಗಾರಿಕೆಗಳು, ಮಾವು ಸಂಸ್ಕರಣ ಘಟಕಗಳ ಸ್ಥಾಪನೆಗೆ ಅನುಧಾನ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ರೈತಕುಲವನ್ನು ರಕ್ಷಣೆ ಮಾಡಬೇಕೆಂದು ಜು.1 ರಂದು ನಷ್ಟ ಬೆಳೆ ಸಮೇತ ಇಂದಿರಾ ವೃತ್ತ ಬಂದ್ ಮಾಡುವ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುವ ನಿರ್ಣಯವನ್ನು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾ.ಅ ತೆರ್ನಹಳ್ಳಿ ಆಂಜಿನಪ್ಪ, ಆಲವಾಟ ಶಿವ, ಸಹದೇವಣ್ಣ, ಶೇಕ್ಶಪಿವುಲ್ಲಾ, ಕಲ್ಲೂರು ವೆಂಕಟ್, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಮೂರಾಂಡಹಳ್ಳಿ ಶಿವಾರೆಡ್ಡಿ, ಭಾಸ್ಕರ್, ವಿಶ್ವ, ರಾಜೇಶ್, ಶೈಲಜ, ಚೌಡಮ್ಮ, ನಾಗರತ್ನ, ರಾಧಮ್ಮ, ಮುಂತಾದವರಿದ್ದರು.