ನಿವೃತ್ತ ಪೊಲೀಸ್ ಸಿಬ್ಬಂದಿಗೆ ನೌಕರರ ಭವನ ನಿರ್ಮಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಕೋಲಾರ 19 ಅಕ್ಟೋಬರ್: ಕರ್ನಾಟಕ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಗೆ ನೌಕರರ ಭವನ ನಿರ್ಮಿಸುವಂತೆ ಮತ್ತು ಅನಾರೋಗ್ಯದ ವ್ಯೆದ್ಯಕೀಯ ವೆಚ್ಚದ ಬಿಲ್ಲುಗಳನ್ನು ಮರುಪಾವತಿ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರಿಗೆ ಕೋಲಾರ ಜಿಲ್ಲಾಧಿಕಾರಿಗಳ ಮುಖಾಂತರ ನಿವೃತ್ತ ಎ.ಎಸ್.ಐ.ಗಳಾದ ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ಮತ್ತು ಬೆಗ್ಲಿಹೊಸಹಳ್ಳಿ ಮುನಿಕೃಷ್ಣಯ್ಯ ರವರು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವಂತಹ ಪೊಲೀಸ್ ಪೇದೆಗಳು, ಮುಖ್ಯಪೇದೆಗಳು, ಎ. ಎಸ್. ಐ, ಮತ್ತು ಪಿ. ಎಸ್. ಐ ಸಿಬ್ಬಂದಿ ವರ್ಗದವರುಗಳು ತಮ್ಮ ಜೀವದ ಹಂಗನ್ನು ತೊರೆದು, ರಾತ್ರಿ ಹಗಲೆನ್ನದೆ ದುಡಿದು, ಚಳಿ, ಮಳೆ, ಬಿಸಿಲು, ಗಾಳಿಗಳುನ್ನು ಲೆಕ್ಕಿಸದೆ ದುಡಿದು ನಿವೃತ್ತಿ ಹೊಂದುವ ಸಮಯಕ್ಕೆ ಬಹುತೇಕರು ವಿವಿಧ ರೋಗಗಳಿಂದ ಪೀಡಿತರಾಗಿರುತ್ತಾರೆ ಮತ್ತು ದೇಹವು ಅವಿರತ ನಿರಂತರ ಪರಿಶ್ರಮದ ಪರಿಣಾಮವಾಗಿ ಬಾಗಿ ಬೆಂಡಾಗಿರುತಾರೆ.
ನಿವೃತ್ತಿ ನಂತರದ ದಿನಗಳಲ್ಲಿ ತಾವುಗಳು ಅನುಭವಿಸುವಂತಹ ಕಷ್ಟ ಕಾರ್ಪಣ್ಯಗಳ ಕುರಿತು ತಮಗೆ ಸಿಗಬೇಕಾದಂತಹ ಇಲಾಖೆ ಸೌಲಭ್ಯಗಳು ಸಿಗದಂತಾದಾಗ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿಯ ಕುರಿತು ಚಿಂತಿಸಿ ಒಗ್ಗಟಾಗಿ ಶ್ರಮಿಸಲು ಒಂದು ಕಡೆ ಸೇರಿ ಚರ್ಚಿಸಲು ಮತ್ತು ಕಾರ್ಯಪ್ರವೃತ್ತರಾಗಲು ಯಾವುದೇ ಖಾಯಂ ನೆಲೆ ಹಾಗು ಸ್ಥಳವಿಲ್ಲದೆ ಒದ್ದಾಡುವಂತಾಗಿದೆ. ಸಮಾಜಕ್ಕಾಗಿ, ಸಮಾಜದ ಜನರ ರಕ್ಷಣೆಗಾಗಿ, ಸಮಾಜದ ಸುರಕ್ಷಾತೆಗಾಗಿ, ಭಯರಹಿತ ವಾತಾವರಣದ ನಿರ್ಮಾಣಕ್ಕಾಗಿ ತಮ್ಮ ಜೀವಗಳನ್ನೇ ಮೂಡುಪಾಗಿಟ್ಟು ಶ್ರಮಿಸಿದಂತಹ ಈ ವರ್ಗಕ್ಕೆ ನಿವೃತ್ತಿ ನಂತರ ಯಾವುದೇ ಪೊಲೀಸ್ ಭವನ ಇಲ್ಲಿದಂತಾಗಿರುವುದು ದುರಂತದ ಸಂಗತಿಯಾಗಿದೆ. ಆದ್ದರಿಂದ ಈ ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ ಮಾನವೀಯತೆಯ ದೃಷ್ಟಿಯಿಂದ ಈ ಕೆಳಕಂಡಂತಹ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯದ ಸಮಸ್ತ ಪೊಲೀಸ್ ಇಲಾಖೆಯ ವಿವಿಧ ಹಂತಗಳ ಪೆÇಲೀಸ್ ಸಿಬ್ಬಂದಿಗಳ ಪರವಾಗಿ ಸಿದ್ಧರಾಮ್ಯನವರ ಅವಗಾಹನೆಗೆ ಮತ್ತು ಸೂಕ್ತ ಆದೇಶಕ್ಕಾಗಿ ಸಲ್ಲಿಸಿದ್ದಾರೆ.
ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಿವೃತ್ತಿ ಪೊಲೀಸ್ ಸಿಬ್ಬಂದಿಯ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡವನ್ನು ಪ್ರಾರಂಭಿಸಬೇಕು. ನಿವೃತ್ತಿ ಪೊಲೀಸ್ ಸಿಬ್ಬಂದಿಯ ವ್ಯೆದ್ಯಕೀಯ ವೆಚ್ಚದ ಸಂಪೂರ್ಣ ಹಣವನ್ನು ಇತರೆ ಕಾರ್ಯನಿರತ ಸಿಬ್ಬಂದಿಗೆ ಮರುಪಾವತಿಸುತ್ತಿರುವಂತೆ ಇವರಿಗೂ ಸಂಪೂರ್ಣ ಮರುಪಾವತಿಗೆ ಆದೇಶಿಸಬೇಕು. ನಿವೃತ್ತಿ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರ ಮಕ್ಕಳಿಗೆ ಪೊಲೀಸ್ ಇಲಾಖೆಯ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೇಮಕಾತಿಯಲ್ಲಿ ಶೇಕಡಾ 10%ರಸ್ಟು ಮೀಸಲಾತಿಯನ್ನು ಕಲ್ಪಿಸಬೇಕು. ನಿವೃತ್ತಿ ಪೊಲೀಸ್ ಸಿಬ್ಬಂದಿಯವರು ಪ್ರವಾಸ ಮಾಡುವಾಗ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣದರದಲ್ಲಿ ರಿಯಾಯಿತಿ ನೀಡಬೇಕು. ನಿವೃತ್ತಿ ನೌಕರರಿಗೆ ಆರೋಗ್ಯಭಾಗ್ಯ ಯೋಜನೆಯ ಅಡಿಯಲ್ಲಿ ಶಸ್ತ್ರ ಚಿಕಿತ್ಸೆಗೆ ನೀಡುವ ಮೊತ್ತವನ್ನು ರೂ 3.00ಲಕ್ಷಗಳಿಗೆ ನಿಗದಿಪಡಿಸಲಾಗಿದೆ. ಇದನ್ನು ರದ್ದುಗೊಳಿಸಿ ಸಂಪೂರ್ಣ ಶಸ್ತ್ರಚಿಕಿತ್ಸೆಗೆ ತಗಲುವ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣ ಭರಿಸುವಂತಾಗಬೇಕು. ನಿವೃತ್ತಿ ಪೊಲೀಸ್ ಸಿಬ್ಬಂದಿಯ ಕುಟುಂಬ ವರ್ಗದವರುಗಳು ವರ್ಷಕ್ಕೆ ಒoದುಭಾರಿ ಪ್ರವಾಸ ಹೋಗಿಬರಲು ಪ್ರವಾಸ ಭತ್ಯೆಯನ್ನು ನಿಗದಿಪಡಿಸಬೇಕು. ವರ್ಷಕ್ಕೆ ಎರಡು ಬಾರಿ ನಿವೃತ್ತ ನೌಕರರ ಮತ್ತು ಆತನ ಹೆಂಡತಿ ಅಥವಾ ಗಂಡನನ್ನು ಉಚಿತವಾಗಿ ವೈದ್ಯಕೀಯ ತಪಾಸಣೆಗೆ ಬಳಸಪಡಿಸುವ ಪದ್ದತಿಯನ್ನು ಜಾರಿಗೊಳಿಸಬೇಕು. ನಿವೃತ್ತ ಪೊಲೀಸ್ ಸಿಬ್ಬಂದಿಗೆ ಪ್ರತಿ ತಿಂಗಳು ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ಒದಗಿಸುವಂತಹ ಸರ್ಕಾರಿ ಪೊಲೀಸ್ ಕ್ಯಾಂಟೀನ್‍ಗಳನ್ನು ಮಿಲಿಟರಿ ಕ್ಯಾಂಟೀನ್‍ಗಳ ರೀತಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಿಸಬೇಕು.
ನಿವೃತ್ತ ನೌಕರರ ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ನೀಡುವಂತಹ ಸಹಾಯದನದ ಮೊತ್ತವನ್ನು ರೂ 20000/-ಗಳಿಗೆ ಹೆಚ್ಚಿಸಬೇಕು. ಸರ್ಕಾರದಿಂದ ಗೌರ ವಂದನೆಯನ್ನು ಸಲ್ಲಿಸುವಂತೆ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಸಿಬೇಕು. ಆರೋಗ್ಯಭಾಗ್ಯ ಯೋಜನೆಯ ವಾರ್ಷಿಕ ಕಂತನ್ನು ರೂ 1800 ರಿಂದ 2400 ಗಳಿಗೆ ಹೆಚ್ಚಿಸಲಾಗಿದ್ದು ಇದನ್ನು ಹಳೆಯ ದರವಾದ ರೂ 1800ಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ದೃಷ್ಟಿದೋಷ ಹೊಂದಿದ ನಿವೃತ್ತ ಪೊಲೀಸ್ ಸಿಬ್ಬಂದಿಗೆ ಪ್ರತಿ 5 ವರ್ಷಕೊಮ್ಮೆ ಕನ್ನಡಕಗಳನ್ನು ಒದಗಿಸಬೇಕು ಅಥವ ಅದರ ವೆಚ್ಚದ ಹಣವನ್ನು ನೀಡಬೇಕು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರವಾಸಿಮಂದಿರದ ರೀತಿಯಲ್ಲಿ ಪೆÇಲೀಸ್ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿ ಹಾಲಿ ಮತ್ತು ನಿವೃತ್ತ ನೌಕರರಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು. ಪೊಲೀಸ್ ಇಲಾಖೆಯಿಂದ ನಿರ್ಮಾಣ ಮಾಡಿರುವಂತಹ ಸಮುದಾಯ ಭವನ ಅಥವ ಮದುವೆ ಮಂಟಪಗಳನ್ನು ನಿವೃತ್ತ ಪೊಲೀಸ್ ನೌಕರರಿಗೆ ಇತರೆ ಸಿಬ್ಬಂದಿಗೆ ನಿಗದಿಪಡಿಸಿದ ದರಕ್ಕಿಂತ ಕಡಿಮೆದರದಲ್ಲಿ ನೀಡುವಂತಾಗಬೇಕು ಈ ಎಲ್ಲಾ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಗೌರವಪೂರಕವಾಗಿ ಮನವಿ ಮಾಡಿದ್ದಾರೆ.