ಕೋಲಾರ / 14 ಜೂನ್ : ಕೋಲಾರದಲ್ಲಿ ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗಳ ಗುರ್ತಿಸಲು ಮನವಿ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತುರ್ತು ಚಿಕಿತ್ಸೆ ಪಡೆಯಲು ಆಸ್ಪತ್ರೆಗಳನ್ನು ಗುರ್ತಿಸಿ ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳುವ ನಿವೃತ್ತ ಎ.ಎಸ್.ಐ. ಗೌರಿಪೇಟೆ ಕೆ.ಎನ್. ರವೀಂದ್ರನಾಥ್ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರು.
ಕೋಲಾರ ನಗರದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿವೃತ್ತ ನೌಕರರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮನವಿ ಪತ್ರವನ್ನು ನೀಡಿದರು.
ಪೆÇಲೀಸ್ ಮಹಾ ನಿರೀಕ್ಷಕರಾದ ವೇದಮೂರ್ತಿ.ರೆ. ಐ.ಪಿ.ಎಸ್. ರವರ ಈ-ಮೇಲ್ ಪ್ಯಾಕ್ಸ್ ಸಂದೇಶ ರಾಜ್ಯದ ಪ್ರತಿ ಜಿಲ್ಲೆಯ ಪೆÇಲೀಸ್ ಅಧೀಕ್ಷಕರುಗಳು ಕಚೇರಿಗೆ ಕಳುಹಿಸಲಾಗಿರುತ್ತದೆ. ಇದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ತುರ್ತು ಸಮಯದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯಡಿಯಲ್ಲಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಪ್ರತಿ ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿರುವ ಕರ್ನಾಟಕ ವೈದ್ಯಕೀಯ ಹಾಜರಾತಿ ನಿಯಮ 1963 ರಡಿಯಲ್ಲಿ ಮಾನ್ಯತೆ ಹೊಂದಿರುವ ಆಸ್ಪತ್ರೆಯ ವಿವರಗಳನ್ನು ಗುರ್ತಿಸಿ, ಸದರಿ ಆಸ್ಪತ್ರೆಗೆ ಎ.ಸಿ.ಪಿ. / ಡಿ.ವೈ.ಎಸ್.ಪಿ. ಮಟ್ಟದ ಅಧಿಕಾರಿಗಳನ್ನು ಕಳುಹಿಸಿ ನಿವೃತ್ತ ಪೆÇಲೀಸ್ ಆರೋಗ್ಯ ಯೋಜನೆಯ ಷರತ್ತು ಮತ್ತು ನಿಬಂದನೆಗಳನ್ನು ಒಪ್ಪಿ ಚಿಕಿತ್ಸೆ ನೀಡಲು ಇಚ್ಚಿಸಿದ್ದಲ್ಲಿ ಅಂತಹ ಆಸ್ಪತ್ರೆಗಳನ್ನು ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಶಿಪಾರಸ್ಸು ಮಾಡುವಂತೆ ತಿಳಿಸಲಾಗಿದೆ.
ಮಾನ್ಯ ಹೊಂದಿರುವಂತಹ ಆಸ್ಪತ್ರೆಗಳ ಪಟ್ಟಿ : ಇ.ಟಿ.ಸಿ.ಎಂ. ಆಸ್ಪತ್ರೆ, ವಿವೇಕ ಕಣ್ಣಿನ ಆಸ್ಪತ್ರೆ, ಗೌರಿಪೇಟೆ, ವಾಸನ್ ಐ ಕೇರ್ ಸೆಂಟರ್, ಟೇಕಲ್ ರಸ್ತೆ, ವೇದಾ ಆಸ್ಪತ್ರೆ, ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರ, ಕಠಾರಿಪಾಳ್ಯ, ವಂಶೋದಯ ಆಸ್ಪತ್ರೆ, ಕುವೆಂಪು ಪಾರ್ಕ್ ಹತ್ತಿರ, ಅಂತರಗಂಗೆ ರಸ್ತೆ, ಲೀಲಾವತಿ ಆಸ್ಪತ್ರೆ, ಗೌರಿಪೇಟೆ, ನಾರಾಯಣ ಹೃದಯಾಲಯ, ಟಮಕ, ಕೋಲಾರ. ಅಕ್ಷಯ ನರಸಿರ್ಂಗ್ ಹೋಂ, ಗೌರಿಪೇಟೆ, ಕೋಲಾರ. ಗೌರವ್ ಆರ್ಥೋಪಿಡಿಕ್ ಟ್ರೋಮಾ ಸೆಂಟ್, ಸರ್ವಜ್ಞ ಪಾರ್ಕ್ ಎದುರು, ಕೋಲಾರ, ಮಂಜುನಾಥ ಹೆಲ್ತ್ ಕೇರ್, ಕನಕನಪಾಳ್ಯ, ಕೋಲಾರ. ಶ್ರೇಯ ಆಸ್ಪತ್ರ, ಕೋಟೆ, ನರೇಂದ್ರ ಆರ್ಥೋಪಿಡಿಕ್ ಸೆಂಟರ್, ಅಮ್ಮವಾರಿಪೇಟೆ, ಎಂ.ಬಿ. ರಸ್ತೆ ಕೋಲಾರ ಇವುಗಳಿಗೆÀ ತಮ್ಮ ಸಿಬ್ಬಂದಿಯನ್ನು ಕಳುಹಿಸಿ, ವಿಚಾರಣೆ ನಡೆಸಿ, ಅಭಿಪ್ರಾಯವನ್ನು ಪಡೆದು ನಂತರ ಆಸ್ಪತ್ರಳ ಪಟ್ಟಿಯನ್ನು ಅಂತಿಮಗೊಳಿಸಿಸದರಿ ಆಸ್ಪತ್ರೆಗಳನ್ನು ಆರೋಗ್ಯ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಸೇರ್ಪಡೆಗೊಳಿಸಲು ಶಿಪಾರಸ್ಸು ಮಾಡಿ ನಿವೃತ್ತ ಪೆÇಲೀಸ್ ಸಿಬ್ಬಂದಿಗೆ ಅನುಕೂಲ ಮಾಡಿಕೊಡಬೇಕೆಂದು ಗೌರವಪೂರ್ವಕವಾಗಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ ಮಾತನಾಡಿ ಸಮಾಜ ಘಾತುಕ ವ್ಯಕ್ತಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ನಿಮ್ಮ ಅವಶ್ಯಕತೆ ನಮಗೆ ಇರುವುದಾಗಿ ತಿಳಿಸಿ, ನೀವು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸಮಾಜದ ಹಿತದೃಷ್ಠಿಯಿಂದ ತಾವು ಸಮಾಜಕ್ಕೆ ಕೆಲಸ ಕಾರ್ಯಗಳನ್ನು ಮಾಡಿದಂತಹವರಿಗೆ ನಾನು ಪೊಲೀಸ್ ಧ್ವಜ ದಿನಾಚರಣೆಯಾಗಲೀ ಅಥವಾ ಪೊಲೀಸ್ ಹುತಾತ್ಮ ದಿನಾಚರಣೆಗೆ ತಮ್ಮನ್ನು ಆಹ್ವಾನಿಸಿ ಗೌರವಿಸಿ ಸನ್ಮಾನ ಮಾಡುವುದಾಗಿ ತಿಳಿಸಿದರು.
ಪೊಲೀಸ್ ಕಲ್ಯಾಣ ನಿಧಿಗೆ ನಿವೃತ್ತ ಪೊಲೀಸ್ ನೌಕರರು ಅರ್ಜಿ ಸಲ್ಲಿಸಿದವರಿಗೆ ಅರ್ಜಿ ಸಲ್ಲಿಸಿದ ನಿವೃತ್ತ ಪಿಎಸ್ಐ ತಿಮ್ಮಯ್ಯ, ಪಿಎಸ್ಐ ನಂಜುಂಡಪ್ಪ ರವರುಗಳಿಗೆ ಮತ್ತು ಪೊಲೀಸ್ ಔಷಧ ಅಂಗಡಿಗೆ ಅಭಿವೃದ್ಧಿ ಸಲುವಾಗಿ ಕೋಶಾಧಿಕಾರಿ ದೊಡ್ಡಯ್ಯ ರವರಿಗೆ ಚೆಕ್ನ್ನು ವಿತರಿಸಿದರು. ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸೊಣ್ಣಪ್ಪರವರು ನಿವೃತ್ತರ ಕುಂದು ಕೊರತೆಗಳನ್ನು ಸವಿಸ್ಥಾರವಾಗಿ ತಿಳಿಸುತ್ತಾ, ಜಿಲ್ಲೆಯ ಪೊಲೀಸ್ ಸಮುದಾಯ ಭವನವನ್ನು ನಿವೃತ್ತರಿಗೆ ಕಲ್ಪಿಸಿಕೊಡಲು ಎಸ್.ಪಿ. ಸಾಹೇಬರಿಗೆ ತಿಳಿಸಿರುತ್ತಾರೆ.
ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ, ಅಪರ ಜಿಲ್ಲಾ ರಕ್ಷಣಾಧಿಕಾರಿ ಎಚ್.ಸಿ.ಜಗದೀಶ್, ಸಹಾಯಕ ಆಡಳಿತಾಧಿಕಾರಿ ರವಿಕುಮಾರ್, ಪ್ರಥಮ ದರ್ಜೆ ಗುಮಾಸ್ತ ನಾಗರಾಜ್ ರವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳು, ನೌಕರರು ಹಾಜರಿದ್ದರು.