
ಜೆಸಿಐ ಕುಂದಾಪುರಸಿಟಿ ವತಿಯಿಂದ ಗಣರಾಜ್ಯೋತ್ಸವ ಆಚರಣೆ ಕೆ ಜಿ ಜಗನ್ನಾಥ ರಾವ್ ಸರಕಾರಿ ಪ್ರೌಢ ಶಾಲೆ ಕೋಣಿ ಕುಂದಾಪುರದಲ್ಲಿ ಆಚರಿಸಲಾಯಿತು ಧ್ವಜಾರೋಹಣ ನೆರವೇರಿಸಿ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ, ಪ್ರಭಂದ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಹುಮಾನ ವಿತರಿಸಲಾಯಿತು ಮತ್ತು ಎಲ್ಲರಿಗೆ ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪೂರ್ವವಲಯಾಧ್ಯಕ್ಷರು ಮತ್ತು ಜೆಸಿಐ ಭಾರತದ NLTS ವಿಭಾಗದ ರಾಷ್ಟ್ರೀಯ ಸಂಯೋಜಕರಾದ ಜೆಸಿ ಕಾರ್ತಿಕೇಯ ಮಧ್ಯಸ್ಥ, ಜೆಸಿಐ ಕುಂದಾಪುರಸಿಟಿ ಅಧ್ಯಕ್ಷರಾದ ಜೆಸಿ ಸೋನಿ ಡಿ ಕಾಸ್ಟ , ಜೆಸಿಐ ಕುಂದಾಪುರಸಿಟಿ ಕಾರ್ಯದರ್ಶಿ ಜೆಸಿ ಸಂದೇಶ್ ಶೆಟ್ಟಿ ಸಳ್ವಾಡಿ, ಪೂರ್ವಾಧ್ಯಕ್ಷರಾದ ಜೆಸಿ ಗಿರೀಶ್ ಹೆಬ್ಬಾರ್ , ಕೋಣಿ ಪಂಚಾಯತ್ ಅಧ್ಯಕ್ಷೆ ವಸಂತಿ ಮೊಗವೀರ, ಮುಖ್ಯಶಿಕ್ಷರಾದ ಮಾಧವ ಅಡಿಗ, ಶಾಲಾ ಶಿಕ್ಷಕ-ಶಿಕ್ಷಿಕಿಯರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






