ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ, ಸಂಪಾದಕರು: ಬರ್ನಾಡ್ ಡಿ’ಕೋಸ್ತಾ

ಶ್ರೀನಿವಾಸಪುರ : ದಿವಂಗತ ಮಾಜಿ ಮುಖ್ಯ ಮಂತ್ರಿ ಹಾಗೂ ವಿಶ್ವವಿಖ್ಯಾತ ತೆಲಗು ನಟ ನಂದಮರಿ ತಾರಕ ರಾಮಾರಾವ್ ರವರ ಜಯಂತಿಯನ್ನು ಅಂದ್ರಪ್ರದೇಶದಲ್ಲಿ ಮಿನಿ ಮಹಾನಾಡು ಎಂಬ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮದನಪಲ್ಲಿಯ ಬುಧವಾರ ನಡೆದ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ನಾರ ಚಂದ್ರ ಬಾಬು ನಾಯುಡು ರವರು ತಾಲ್ಲೂಕಿನ ತಾಡಿಗೊಳ್ಳ ಕ್ರಾಸ್ ಮೂಲಕ ಹಾದು ಹೋದರು.
ಹೈದರಾಬಾದ್‌ನಿಂದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಸ್ತೆಯ ಮೂಲಕ ಅಂದ್ರಪ್ರದೇಶದ ಮದನಪಲ್ಲಿಗೆ ತೆರಳಲು ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಕ್ರಾಸ್ ಬಳಿ ಅದ್ದೂರಿಯಾಗಿ ಸ್ವಾಗತ ಕೋರಿದ ವಿದಾನ ಸಭಾ ಕ್ಷೇತ್ರದ ನೂತನ ಆಕಾಂಕ್ಷಿ ಮದನಪಲ್ಲಿ ಕ್ಷೇತ್ರದಿಂದ ಸ್ಪರ್ದಿಸಲು ಮುಂಚೂಣಿಯಲ್ಲಿರುವ ಶ್ರೀರಾಮನೆಮಿ ಜಯರಾಮನಾಯುಡು ರವರು ಅದ್ದೂರಿಯಾಗಿ ಸ್ವಾಗತ ಕೋರಿ ಮದನಪಲ್ಲಿಯಲ್ಲಿ ನಡೆಯುವ ಮಿನಿ ಮಹಾನಾಡು ಎಂಬ ಅದ್ದೂರಿ ಕಾರ್ಯಕ್ರಮಕ್ಕೆ ತೆರಳುವ ಮಾಜಿ ಮುಖ್ಯಮಂತ್ರಿ ನಾರ ಚಂದ್ರ ಬಾಬು ನಾಯುಡು ರವರಿಗೆ ಶುಭ ಕೋರಿದರು. ಲಕ್ಷ್ಮಿಪುರ ಕ್ರಾಸ್, ರಾಯಲ್ಪಾಡು ಕ್ರಾಸ್, ಗುಂಟಿಪಲ್ಲಿ ಕ್ರಾಸ್, ಶೀಗಲಬಯಲು ಗ್ರಾಮದವರೆಗೂ ಜನರು ತಂಡೋಪತಡವಾಗಿ ಸ್ವಾಗತಿಸಿ ಬೀಳ್ಕೋಟ್ಟರು.
ಈ ಸಮಯದಲ್ಲಿ ಶ್ರೀರಾಮನೆಮಿ ಜಯರಾಮನಾಯುಡು ರವರು ಅದ್ದೂರಿಯಾಗಿ ಸ್ವಾಗತ ಕೋರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಮದನಪಲ್ಲಿ ವಿದಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ದಿಸಲು ಪ್ರಬಲ ಆಕಾಂಕ್ಷೆಯಾಗಿದ್ದೇನೆ. ನಾನು ಪಕ್ಷಕ್ಕಾಗಿ ದುಡಿಯುತ್ತೇನೆ ಮತ್ತು ಚಂದ್ರಬಾಬು ನಾಯುಡುರವರನ್ನು ಈ ಬಾರಿ ಮುಖ್ಯಮಂತ್ರಿಯಾಗಿ ಮಾಡಲು ಹಗಲಿರಳು ರಾಜ್ಯಾದ್ಯಂತ ಪ್ರವಾಸ ಮಾಡಿ ಟಿಡಿಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಬದ್ದನಾಗಿರುತ್ತೇನೆ ಎಂದು ಶಪತ ಮಾಡಿದರು.
ತಾಡಿಗೋಳ್ ಕ್ರಾಸ್ ಬಳಿ ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ. ಮಂಜುನಾಥ್ ಪ್ರಥಮ ದರ್ಜೆ ಗುತ್ತಿಗೆದಾರ ಕೊತ್ತಪಲ್ಲಿ ಸುಬ್ಬರಾಯಪ್ಪ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಪೆದ್ದೂರು ನಾಗರಾಜ್, ಶಂಕರರೆಡ್ಡಿ, ಯುವ ಕಾಂಗ್ರೇಸ್ ಜಿಲ್ಲಾ ಉಪಾಧ್ಯಕ್ಷ ಮುರಳಿ, ದೊರಸ್ವಾಮಿರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನರೇಶ್, ಕೋಡಿಪಲ್ಲಿ ವಿಶ್ವನಾಥರೆಡ್ಡಿ, ದೊಡ್ಡಬಂದ್ಲಾರಹಳ್ಳಿ ಆಂಜಿ,ಮಲ್ಲಿರೆಡ್ಡಿ,ಪ್ರಭಾಕರ್,ರಾಮಕೃಷ್ಣ ನಾಯಡು,ಇಳಿಯಾಸ್ ಪಾಷ, ಹಾಗೂ ಅಂದ್ರಪ್ರದೇಶದ ಮದನಪಲ್ಲಿ ವಿದಾನ ಸಭಾ ಕ್ಷೇತ್ರದ ಟಿಡಿಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

