ಮಂಗಳೂರು, ಜನವರಿ 06: ; ಖ್ಯಾತ ಕನ್ನಡ ಸಾಹಿತಿ ಡಾ. ನಾ. ಡಿಸೋಜಾ ಅವರು ಇಂದು ಸಂಜೆ 7.50ಕ್ಕೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ವಯೋ ಸಹಜ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಾಳೆ ಮಧ್ಯಾಹ್ನದ ನಂತರ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತೀವ್ರ ನಷ್ಟವಾಗಿದೆ.
ಅವರು ನಿನ್ನೆ ಸಂಜೆ 7.50ಕ್ಕೆ ಅನಾರೋಗ್ಯ ಹಿನ್ನೆಲೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾ.ಡಿಸೋಜ, ಅವರು ಮಂಗಳೂರಿನ ಮಗಳ ಮನೆಯಲ್ಲಿ ನೆಲೆಸಿ, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿಪಡೆಯುತಿದ್ದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತೀವ್ರ ನಷ್ಟಉಂಟಾಗಿದೆ. ಗಣ್ಯರ ಅಗಲಿಕೆಗೆ ಹಲವರು ಸಂತಾಪ ಸೂಚಿಸಿದ್ದಾರೆ.
ಡಾ. ನಾರ್ಬಟ್ ಡಿಸೋಜರವರು 1937 ಜೂನ್ 6ರಂದು ಜನಿಸಿದರು. ತಂದೆ ಎಫ್.ಪಿ.ಡಿಸೋಜ, ತಾಯಿ ರೂಪಿನಾ ಡಿಸೋಜ. ನಾ.ಡಿಸೋಜರವರು ಈವರೆಗೆ 37 ಕಾದಂಬರಿಗಳು, ನಾಲ್ಕು ನಾಟಕಗಳು, ಇಪ್ಪತ್ತೆಂಟು ಮಕ್ಕಳ ಕೃತಿಗಳು ಸೇರಿದಂತೆ ನೂರಾರು ಕತೆಗಳನ್ನು ಬರೆದಿದ್ದಾರೆ.
ಇವರ ಕಾದಂಬರಿ ‘ಕಾಡಿನ ಬೆಂಕಿ’ ಹಾಗೂ ‘ದ್ವೀಪ’ ಚಲನಚಿತ್ರಗಳಾಗಿ ‘ರಜತಕಮಲ’ ಹಾಗೂ ‘ಸ್ವರ್ಣಕಮಲ’ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ‘ಬಳುವಳಿ’ ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ. ‘ಸಾರ್ಕ್’ ದೇಶಗಳ ಸಾಹಿತಿಗಳ ಸಮ್ಮೇಳನದಲ್ಲಿ ಸ್ವಂತ ಕಥಾವಾಚನ ಮಾಡಿದ್ದರು.
ಪ್ರಶಸ್ತಿಗಳು
ಇವರ ‘ಮುಳುಗಡೆಯ ಊರಿಗೆ ಬಂದವರು’ ಕಿರು ಕಾದಂಬರಿಗೆ 2011ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ದೊರೆತಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ಸಂದೇಶ ಪ್ರಶಸ್ತಿ, ನವದೆಹಲಿ ಕಥಾ ಪ್ರಶಸ್ತಿ, ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ ಮುಂತಾದವುಗಳಿಂದ ಪುರಸ್ಕೃತರಾಗಿದ್ದಾರೆ. 2014ರ ಜನವರಿಯಲ್ಲಿ ಮಡಿಕೇರಿಯಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಗಣ್ಯರಿಂದ ಸಂತಾಪ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಡಿನ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜೊತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾ.ಡಿಸೋಜಾ ಅವರು ಜನಪರ ಕಾಳಜಿಯ ಲೇಖಕ. ನಾ.ಡಿಸೋಜಾ ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆಂದು ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪೋಸ್ಟ್ ಮಾಡಿ, ಹಿರಿಯ ಸಾಹಿತಿ ಡಾ. ನಾ ಡಿಸೋಜ ದೈವಾಧೀನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ವಿಶೇಷವಾಗಿ ಮಲೆನಾಡಿನ ಸೊಬಗು, ಸಂಸ್ಕೃತಿಗಳಿಗೆ ಅಕ್ಷರ ರೂಪ ನೀಡುತ್ತಿದ್ದ ನಾ ಡಿಸೋಜ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆಂದು ಹೇಳಿದ್ದಾರೆ.
ನಾ.ಡಿಸೋಜ ಅವರದು ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎರಡೂ ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಾ.ಡಿಸೋಜ ಅವರ ಕೊಡುಗೆ ಅನನ್ಯವಾದದ್ದು. ಶ್ರೀಯುತರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಂತಾಪ ಸೂಚಿಸಿದ್ದಾರೆ.
ನಾ.ಡಿಸೋಜಾರವರ ಆತ್ಮಕ್ಕೆ ಚೀರ ಶಾಂತಿ ಸಿಗಲಿ
ಈ ನಾಡು ಕಂಡ ಶ್ರೇಷ್ಟ ಸಾಹಿತಿಗಳಲ್ಲಿ ಒಬ್ಬರಾದ ಶ್ರೀಯುತ ನಾ.ಡಿಸೋಜಾರವರು 1994 ರಲ್ಲಿ ಕುಂದಾಪುರಕ್ಕೆ ಬಂದಿದ್ದರು. ಅಂದು ನಡೆದ ‘ಕೊಂಕಣಿ ವೈಭವ್’ ಕಾರ್ಯಕ್ರಮ ಹಿಂದೆ ಎಂದು ನಡೆಯದಂತ ಮುಂದೆ ನಡೆಯುವ ಕಷ್ಟವೆಂಬತ್ತೆ ಕಾರ್ಯಕ್ರಮವಾಗಿತ್ತು. ಕೊಂಕಣಿಗರಲ್ಲಿ ಎಷ್ಟು ಪ್ರಭೇದಗಳಿವೆ ಎಂದು ತೋರಿಸಿ ಕೊಟ್ಟಿದ್ದೆ ಕುಂದಾಪುರದಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮ ‘ಕೊಂಕಣಿ ವೈಭವ್’ ಆಗಿತ್ತು. ಕ್ರೈಸ್ತ ಕೊಂಕಣಿ, ಜಿ.ಎಸ್.ಬಿ. ಖಾರ್ವಿ, ಮೇಸ್ತ, ನವಾಯತ್ ಕೊಂಕಣಿ, ಕುಡುಬಿ, ಇನ್ನಿತರ ಹಲವಾರು ಕೊಂಕಣಿ ಮಾತನಾಡುವ ಸಮುದಾಯಗಳನ್ನು ಒಟ್ಟುಕೂಡಿಸಿ ಮಾಡಿದ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಾ.ಡಿಸೋಜಾ ಬಂದಿದ್ದರು. ಅದು ಎರಡು ದಿವಸದ ಕಾರ್ಯಕ್ರಮ 1994 ಜನವರಿ 15 ರಂದು ಮೊದಲ ದಿನ ಸಭಾಕಾರ್ಯಕ್ರಮಗಳು ಸನ್ಮಾನ ಕಾರ್ಯಕ್ರಮಗಳು ಮುಗಿದ ನಂತರ ನನ್ನ ನಾಟಕ “ಪೊಲೀಸ್ ಪಾಸ್ಕು” ಕೊಂಕಣಿ ನಾಟಕ ಪ್ರದರ್ಶನವಿತ್ತು, ಆದರೆ ಸಭಾಕಾರ್ಯಕ್ರಮಗಳು ಮುಗಿದಾಗ ಜನವರಿ 16 ಆಗಿತ್ತು, ಆದರೂ ನಾಟಕ ಆರಂಭ ಮಾಡಿದೆವು, ನಾಟಕ ನೋಡಲು ತುಂಬ ಜನ ಇದ್ದರು. ಆದರೆ ಅವರ ಮಧ್ಯೆ ನನ್ನ ನೆಚ್ಚಿನ ಸಾಹಿತಿ ನಾ.ಡಿಸೋಜಾ ಕೂಡಾ ಇದ್ದದ್ದು ನನಗೆ ತುಂಬ ಹೆಮ್ಮೆಯ ಸಂಗತಿಯಾಗಿತ್ತು. ಅಂದು ಅವರು ನಿದ್ರೆ ಕೆಟ್ಟು ಪೂರ್ಣ ನಾಟಕ ನೋಡಿದರು. ಮಾರನೇ ದಿನ ಬೆಳ್ಳಿಗೆ ಉದಯವಾಣಿಯಲ್ಲಿ ಈ ಸುದ್ದಿ ಈ ತರಹ ಬಂತು, ನಾಟಕ ಆರಂಭವಾಗಲು ಮಧ್ಯರಾತ್ರಿಯಾದರೂ, ನಾಟಕ ಪ್ರೇರೆಕ್ಷರನ್ನು ಹಿಡಿದಿಟ್ಟುಕೂಳ್ಳಲು ಯಶಸ್ವಿಯಾಯ್ತು’ ಎಂದು. ಇದರಲ್ಲಿ ಒರ್ವ ಪ್ರೇಕ್ಷರು ನಾ.ಡಿಸೋಜಾ ಅವರಾಗಿದ್ದುದು ನನಗೆ ಹೆಮ್ಮೆಯ ವಿಚಾರವಾಯ್ತು. ಅದು ಅಲ್ಲದೆ 10 – 03 – 2003 ರಲ್ಲಿ ಪ್ರಕಾಶಿತ ಗೊಂಡ “ತಿರಸ್ಕಾರ್” ನನ್ನ ಕೊಂಕಣಿ ಕಾದಂಬರಿಗೆ ಮುನ್ನುಡಿ ಬರೆದುಕೊಟ್ಟಿದ್ದರು. ನನ್ನ ಸಾಹಿತ್ಯ ಜೀವನದಲ್ಲಿ ನಾ.ಡಿಸೋಜಾರವರ ಸಣ್ಣ ಪಾಲು ಇದೆಯೆಂಬುದು ನನಗೆ ಸಂತಸದ ವಿಚಾರ. ಆದರೆ ನಿನ್ನೆ ಅವರು ಇಹಲೋಕವನ್ನು ತ್ಯಜಿಸಿ ಪರಲೋಕಕ್ಕೆ ತೆರಳಿದಕ್ಕೆ ತೀವ್ರ ಸಂತಾಪ ಆಗಿದೆ. ಇಡೀ ಸಾಹಿತ್ಯ ಜಗತ್ತು ಸಂತಾಪದಿಂದ ಕೂಡಿದೆ, ಅದರಲ್ಲಿಯೂ ಅವರ ಪತ್ನಿ, ಪುತ್ರರು, ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಸಂಬಧಿಕರು ದುಖದಲ್ಲಿ ಇದ್ದಾರೆ. ಅವರಿಗೆ ಈ ದುಖ್ಖವನ್ನು ಸಹಿಸಿಕೊಳ್ಳಲು ಶಕ್ತಿ ಸಿಗಲೆಂದು ಪ್ರಾಥಿಸುತ್ತಾ, ಪರಲೋಕಕ್ಕೆ ತೆರಳಿದ ನಾ.ಡಿಸೋಜಾರವರ ಆತ್ಮಕ್ಕೆ ಚೀರ ಶಾಂತಿ ಸಿಗಲಿ ಎನ್ನುತ್ತಾ, ಶ್ರದ್ದಾಂಜಲಿಯನ್ನು ಅರ್ಪಿಸುತ್ತೇನೆ. – ಬರ್ನಾಡ್ ಜೆ,ಕೋಸ್ತಾ, ಕುಂದಾಪುರ