ಖ್ಯಾತ ಸ್ಯಾಕ್ಸೋಫೋನ್‌ ಕಲಾವಿದೆ ಆತ್ಮಹತ್ಯೆಗೆ ಶರಣು:ತಬ್ಬಲಿಯಾದ ಕೂಸು

JANANUDI.COM NETWORK

 

ಮ೦ಗಳೂರಿನ ಖ್ಯಾತ ಸ್ಯಾಕ್ಸೋಫೋನ್‌ ಕಲಾವಿದೆಯೊಬ್ಬರು ತಮ್ಮ ಫ್ಲ್ಯಾಟ್‌ನಲ್ಲೇ ಆತ್ಮಹತ್ಯೆಗೆ ಶರಣಾದದಾರುಣ ಘಟನೆ ಶಕ್ತಿನಗರ ಬಳಿ ಕಳೆದ ರಾತ್ರಿ ನಡೆದಿದೆ.   

ಮ೦ಗಳೂರಿನ ಖ್ಯಾತ ಸ್ಯಾಕ್ಸೋಪೋನ್  ಕಲಾವಿದೆ  ತಮ್ಮ ಫ್ಲ್ಯಾಟ್‌ನಲ್ಲೇ ಆತ್ಮಹತ್ಯೆಗೆ ಶರಣಾದದಾರುಣ ಘಟನೆ ಶಕ್ತಿನಗರ ಬಳಿ ಕಳೆದ ರಾತ್ರಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಖ್ಯಾತ ಸ್ಯಾಕ್ಟೋಫೋನ್‌ ದುರ್ದೈವಿ  ಕಲಾವಿದೆ ಸುಜಾತ ದೇವಾಡಿಗಳಾಗಿದ್ದಾಳೆ(29)    

ಸುಜಾತ ಮ೦ಗಳೂರಿನ ಕಂಕನಾಡಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಶಕ್ತಿನಗರದ ಫ್ಲ್ಯಾಟ್‌ ಒ೦ದರಲ್ಲಿ ಅವಿಭಕ್ತ ಕುಟುಂಬದಲ್ಲಿವಾಸವಾಗಿದ್ದವಳು ಕಳೆದ ರಾತ್ರಿ 9 ಗ೦ಟಿ ಸುಮಾರಿಗೆ ಊಟ ಮಾಡಿ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡು  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

 ಉತ್ತಮ ಸ್ಕಾಕ್ಟೋಫೋನ್‌ ಕಲಾವಿದೆಯಾಗಿದ್ದ ಇವರಿಗೆ ಕೊರೊನಾ ಮಹಾಮಾರಿ ಕಾಲಿಟ್ಟ ಬಳಿಕ ಕಾರ್ಯಕ್ರಮಗಳುಸಿಗದೆ. ಮಾನಸಿಕವಾಗಿ ಕುಗ್ಗಿದ್ದರಲ್ಲದೇ ಅರ್ಥಿಕವಾಗಿ ಕುಸಿತದಿಂದ ಮನನೊಂದು ಆತ್ಮಹತ್ಯೆಗೈದಿದ್ದಾರೆ ಎಂದುಶಂಕಿಸಲಾಗಿದೆ. ಮೃತ ಸುಜಾತ ಅವರಿಗೆ ಎರಡೂವರೆ ವರ್ಷದ ಮಗುವೊಂದಿದ್ದು, ಸುಜಾತಾಳ ಆತುರದ ನಿರ್ಧಾರದಿಂದಾಗಿ ತಾಯಿಯಿಲ್ಲದ ಮಗು ತಬ್ಬಲಿಯಾಗಿದೆ.